Skip to main content
ವಿಡಿಯೋ
1/2
politics

ಹಿಂದುಳಿದ ವರ್ಗಗಳ ಆಯೋಗದ ಜಾತಿ ಸಮೀಕ್ಷೆ ಪೂರ್ಣ: ಒಟ್ಟು 6.13 ಕೋಟಿ ಜನರ ಸಮೀಕ್ಷೆ

By Vinutha U
ಹಿಂದುಳಿದ ವರ್ಗಗಳ ಆಯೋಗದ ಜಾತಿ ಸಮೀಕ್ಷೆ ಪೂರ್ಣ: ಒಟ್ಟು 6.13 ಕೋಟಿ ಜನರ ಸಮೀಕ್ಷೆ

10ರವರೆಗೆ ಆನ್‌ಲೈನ್‌ನಲ್ಲಿ ಅವಕಾಶ: ಮನೆಮನೆ ಸಮೀಕ್ಷೆ ಶುಕ್ರವಾರ ಮುಗಿದರೂ, ವಿವಿಧ ಕಾರಣಗಳಿಂದ ಭಾಗವಹಿಸದವರಿಗೆ ನ.10ರವರೆಗೆ ಆನ್‌ಲೈನ್‌ ಮೂಲಕ ಸ್ವಯಂ ಮಾಹಿತಿ ನೀಡಲು ಅವಕಾಶ ನೀಡಲಾಗಿದೆ.

ಬೆಂಗಳೂರು (ನ.01): ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕಳೆದ ಸೆ.22ರಿಂದ ನಡೆಸುತ್ತಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶುಕ್ರವಾರ ಮುಕ್ತಾಯಗೊಂಡಿದ್ದು, ಒಟ್ಟು 6,13,83,908 ಜನರ ಮಾಹಿತಿ ಸಂಗ್ರಹಿಸಲಾಗಿದೆ. 2025ರಲ್ಲಿ ರಾಜ್ಯದ ಜನಸಂಖ್ಯೆ 6,85,38,000 ಇರಬಹುದೆಂದು ಆಯೋಗ ಅಂದಾಜಿಸಿತ್ತು. ಆದರೆ 6.13 ಕೋಟಿ ಜನ ಮಾತ್ರ ಮಾಹಿತಿ ನೀಡಿದ್ದಾರೆ. 4,22,258 ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿವೆ.

ಅಲ್ಲದೆ, 34,49,681 ಮನೆಗಳು ಖಾಲಿ ಅಥವಾ ಬೀಗ ಹಾಕಿದ್ದರಿಂದ ಸಮೀಕ್ಷೆ ನಡೆಸಲಾಗಿಲ್ಲ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನ. 10ರವರೆಗೆ ಆನ್‌ಲೈನ್‌ನಲ್ಲಿ ಅವಕಾಶ: ಮನೆಮನೆ ಸಮೀಕ್ಷೆ ಶುಕ್ರವಾರ ಮುಗಿದರೂ, ವಿವಿಧ ಕಾರಣಗಳಿಂದ ಭಾಗವಹಿಸದವರಿಗೆ ನ.10ರವರೆಗೆ ಆನ್‌ಲೈನ್‌ ಮೂಲಕ ಸ್ವಯಂ ಮಾಹಿತಿ ನೀಡಲು ಅವಕಾಶ ನೀಡಲಾಗಿದೆ. ಸರ್ಕಾರಿ ಸಭೆಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು ನಿಷೇಧ: ನಂದಿನಿ ತಿನಿಸುಗಳು ಕಡ್ಡಾಯ!

https://kscbcselfdeclaration.karnataka.gov.in ಲಿಂಕ್‌ ಮೂಲಕ ಸ್ವಯಂ ದೃಢೀಕರಣದೊಂದಿಗೆ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 8050770004ಗೆ ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.ರಾಜ್ಯದ್ಯಂತ ಗ್ರೇಟರ್ ಬೆಂಗಳೂರು (ಜಿಬಿಎ) ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸಮೀಕ್ಷೆ ಶೇ.97.51ರಷ್ಟು ಪೂರ್ಣಗೊಂಡಿದೆ. ಜಿಬಿಎ ಸೇರಿ ಒಟ್ಟಾರೆ ಸರಾಸರಿ ಶೇ.89.56 ಸಾಧನೆ ದಾಖಲಾಗಿದೆ. ಎಲ್ಲೆಲ್ಲಿ ಎಷ್ಟು?

ಹೆಚ್ಚು ಪ್ರಗತಿ ಸಾಧಿಸಿದ ಜಿಲ್ಲೆಗಳು:

ಕಡಿಮೆ ಪ್ರಗತಿ ದಾಖಲಿಸಿದ ಜಿಲ್ಲೆಗಳು:

  • ಬೆಂಗಳೂರು ದಕ್ಷಿಣ: ಶೇ.86.34

  • ಬೆಂಗಳೂರು ನಗರ: ಶೇ.87.4

  • ಕೋಲಾರ: ಶೇ.91.66

  • ಬೀದರ್: ಶೇ.91.95

  • ಧಾರವಾಡ: ಶೇ.92