ಕಲಬುರ್ಗಿ: ರಾಜ್ಯದಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರು ದಿನವೇ ಕಲಬುರ್ಗಿಯಲ್ಲಿ ಪ್ರತ್ಯೇಕ ರಾಜ್ಯ ಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿಯವರು ಧರಣಿ ಮಾಡುತ್ತಿದ್ದಾರೆ.
ಧರಣಿ ಜೊತೆಯಲ್ಲೆ ಪ್ರತ್ಯೇಕ ಧ್ವಜರೋಹಣ ಮಾಡಿದ್ದಾರೆ, ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ೨೦ ಕ್ಕೂ ಅಧಿಕ ಹೋರಾಟಗಾರರನ್ನ ಬಂಧಿಸಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೇಲಿಂದ ಮೇಲಿ ಸವಲತ್ತು ಕೊಡುವುದರಲ್ಲಿ ಅನ್ಯಾಯ ಮಾಡುತ್ತಿದ್ದೆ ಹೀಗಾಗಿ ಕಲ್ಯಾಣ ಕರ್ನಾಟಕ ಭಾಗವನ್ನ ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕೆಂಬುದು ಹೋರಾಟಗಾರರ ವಾದ.
ಕಳೆದ ಹಲವಾರು ವರ್ಷಗಳಿಂದ ಕಲ್ಯಾಣ ಕರ್ನಾಟಕವನ್ನ ಕರ್ನಾಟಕದಿಂದ ಪ್ರತ್ಯೇಕಿಸಿ ಬೇರೆ ರಾಜ್ಯ ಮಾಡಬೇಕೆಂದು ಅನೇಕ ಧರಣಿ, ಸತ್ಯಾಗ್ರಗಳು ನಡೆಯುತ್ತಿಲೆ ಬಂದಿವೆ ಆದರೆ ಇಂದು ಇಡಿ ರಾಜ್ಯ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದಾಗಲೇ ಈ ಧರಣಿ ಮಾಡಿರುವುದು ಅನೇಕರ ಕೆಂಗಣಿಗೆ ಗುರಿಯಾಗಿದೆ.