ಕಲಬುರಗಿ: ಮನೆ ಮುಂದೆ ನಿಲ್ಲಿಸಿದ್ದ ಭೀಮ್ ಆರ್ಮಿ ಕಾರ್ಯಕರ್ತನ ಕಾರಿಗೆ ಬೆಂಕಿ ಹಚ್ಚಿದ ಘಟನೆ ಕಲಬುರಗಿ ನಗರದ ಶಹಬಾದ್ ರಿಂಗ್ ರಸ್ತೆಯಲ್ಲಿ ನಡೆದಿದೆ.
ಭೀಮ್ ಆರ್ಮಿ ಕಾರ್ಯಕರ್ತ ಸತೀಶ್ ಹುಗ್ಗಿ ಅವರ ಕಾರಿಗೆ ಕಿಡಿಗೆಡಿಗಳು ಬೆಂಕಿ ಹಚ್ಚಿದ್ದಾರೆ. ಸತೀಶ್ ಅವರ ಕಲಬುರಗಿಯಲ್ಲಿ ನಡೆದ RSS ವಿರುದ್ದದ ಹೋರಾಟದ ನಾಯಕತ್ವವನ್ನ ವಹಿಸಿದ್ದರು. ಹೀಗಾಗಿ RSS ಕುಮ್ಮಕ್ಕಿನಿಂದಲೇ ಬೆಂಕಿ ಹಚ್ಚಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಲಾಗುತ್ತಿದೆ.
RSS 100 ವರ್ಷದ ಸಂಭ್ರಮಾಚರಣೆಯನ್ನ ಶುರು ಮಾಡಿದ ಬೆನ್ನಲ್ಲೆ ರಾಜಕೀಯವಾಗಿ ಅನೇಕ ಟೀಕೆಗಳಯ ವ್ಯಕ್ತವಾದವು, ಇನ್ನೊಂದೆಡೆ ಭೀಮ್ ಆರ್ಮಿಯ ಪಥ ಸಂಚಲನ ಕೂಡ ಪ್ರಾರಂಭವಾಗಿತ್ತು. ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೆ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾದ ಅಸಮಾಧಾನವೇ ಇಂತಹ ಘಟನೆಗಳಿಗೆ ಕಾರಣವಾಗಿದೆ.