ಬಿಗ್ ಬಾಸ್ ಕನ್ನಡ ಸೀಸನ್ 12 ರ ಈ ವಾರ ಮನೆಯವರು ಸಂಪೂರ್ಣ ಕಾಲೇಜು ವಾತಾವರಣದಲ್ಲಿ ಕಾಲ ಕಳೆಯಿದರು. ಬಿಗ್ ಬಾಸ್ ಅವರು ನೀಡಿದ “ಕಾಲೇಜು ಟಾಸ್ಕ್” ಮನೆಗೆ ಹೊಸ ಮಜಾ ತರಿತು. ಸ್ಪರ್ಧಿಗಳು ವಿದ್ಯಾರ್ಥಿಗಳ ಪಾತ್ರದಲ್ಲಿ ನಟನೆ ಮಾಡಬೇಕಿತ್ತು, ನಾಯಕ ರಘು ಅವರು ಪ್ರಿನ್ಸಿಪಲ್ ಆಗಿ ಕಾಣಿಸಿಕೊಂಡರು. ಮನೆಯಲ್ಲಿ ಕಾಲೇಜಿನ ತರಲೆ, ಹಾಸ್ಯ, ಕಿಸುಮುಸು, ಜಗಳ ಮತ್ತು ಭಾವನಾತ್ಮಕ ಕ್ಷಣಗಳು ಎಲ್ಲವೂ ಮಿಶ್ರಣಗೊಂಡಿದ್ದವು.Titan Neo Iv Analog Black Dial Men's Watch NM1805NL01/NN1805NL01/NP1805NL01
ಕೆಲವರು ಟಾಸ್ಕ್‌ನಲ್ಲಿ ಮನರಂಜನೆ ನೀಡಿದರೆ, ಕೆಲವರ ನಡುವಿನ ಮಾತಿನ ಚಕಮಕಿಯೂ ಮನೆಯಲ್ಲಿ ಬಿಸಿ ವಾತಾವರಣ ಸೃಷ್ಟಿಸಿತು. ಬಿಗ್ ಬಾಸ್ ಮನೆಯ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕಠಿಣ ಎಚ್ಚರಿಕೆಗಳು ಕೂಡ ದೊರಕಿದವು. ಸುದೀಪ್ ಅವರು ಈ ವಾರದ “ವಾರದ ಕಿಚ್ಚ ಸುದೀಪ್” ಎಪಿಸೋಡ್‌ನಲ್ಲಿ ಎಲ್ಲರ ಆಟದ ಬಗ್ಗೆ ನೇರವಾಗಿ ಮಾತನಾಡಿ, ತಪ್ಪು ಮಾಡಿದವರಿಗೆ ಮಾತಿನ ಚಾಟಿ ಬೀಸಲಿದ್ದಾರೆ ಎಂಬ ನಿರೀಕ್ಷೆಯಿದೆ.ಮೆಡಲ್‌ನಿಂದ ಜೈಲಿಗೆ.. 'ಉತ್ತಮ' ಆಟಗಾರನಾಗಿದ್ದ ಧ್ರುವ ಒಂದೇ ವಾರಕ್ಕೆ 'ಕಳಪೆ' ಆಗಿದ್ದೇಕೆ..?
ಈ ವಾರ ಯಾರು ಮನೆಯ ಹೊರಗೆ ಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ. ಪ್ರೇಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿಗಳನ್ನು ಉಳಿಸಲು ಮತ ಹಾಕುತ್ತಿದ್ದಾರೆ. ಬಿಗ್ ಬಾಸ್ ಮನೆಯ ಈ ವಾರದ ಘಟನೆಗಳು ಮತ್ತೊಮ್ಮೆ ಪ್ರೇಕ್ಷಕರ ಮನಸ್ಸು ಕದ್ದಿವೆ.