Skip to main content
ವಿಡಿಯೋ
1/2
cinema

ಬಳ್ಳಾರಿಯಲ್ಲಿ ಇಂದಿನಿಂದ 7ರವರೆಗೆ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಕಡ್ಡಾಯ!

By Vinutha U
ಬಳ್ಳಾರಿಯಲ್ಲಿ ಇಂದಿನಿಂದ 7ರವರೆಗೆ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಕಡ್ಡಾಯ!

ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಎಲ್ಲಾ ಚಿತ್ರಮಂದಿರ ಕಟ್ಟಡಗಳಲ್ಲಿ ಬೆಳಕಿನ ಅಲಂಕಾರ ಮಾಡುವುದು ಕಡ್ಡಾಯವಾಗಿದು , ಈ ಅವಧಿಯಲ್ಲಿ ಹೊಸ ಅಥವಾ ಹಳೆಯ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಿ, ಪ್ರೇಕ್ಷಕರನ್ನು ಆಕರ್ಷಿಸಲು ಅವಕಾಶ ನೀಡಲಾಗಿದೆ.

ಬಳ್ಳಾರಿ :ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಒಂದು‌ ಮಹತ್ವದ ನಿರ್ಧಾರವನ್ನ ಬಳ್ಳಾರಿ ಜಿಲ್ಲಾಡಳಿತ ಕೈಗೊಂಡಿದೆ. ಇಂದಿನಿಂದ ನ. 7 ರವರೆಗೆ ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿ , ಶಾಶ್ವತ, ಅರೆ-ಶಾಶ್ವತ, ತಾತ್ಕಾಲಿಕ ಮತ್ತು ವಿಡಿಯೋ ಥಿಯೇಟರ್‌ಗಳು ಸೇರಿದಂತೆ ಎಲ್ಲ ಕಡೆಗಳಲ್ಲೂ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕು ಎಂದು ಆದೇಶಿಸಲಾಗಿದೆ.

ಈ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್. ಝುಬೇರ್ ರಾಜ್ಯೋತ್ಸವದ ಸಂತಸದ ಭಾಗವಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ದೇಶನ ನೀಡಲಾಗಿದೆ. ನಿಯಮ ಪಾಲಿಸದ ಥಿಯೇಟರ್‌ಗಳ ಪರವಾನಿಗೆ ನವೀಕರಣವನ್ನು ನಿರಾಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಎಲ್ಲಾ ಚಿತ್ರಮಂದಿರ ಕಟ್ಟಡಗಳಲ್ಲಿ ಬೆಳಕಿನ ಅಲಂಕಾರ ಮಾಡುವುದು ಕಡ್ಡಾಯವಾಗಿದು , ಈ ಅವಧಿಯಲ್ಲಿ ಹೊಸ ಅಥವಾ ಹಳೆಯ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಿ, ಪ್ರೇಕ್ಷಕರನ್ನು ಆಕರ್ಷಿಸಲು ಅವಕಾಶ ನೀಡಲಾಗಿದೆ. Traditional Thamarai Design Metal Bangles for Women & Girls – Pack of 1

ಈ ನಿರ್ಧಾರದಿಂದ ಕನ್ನಡ ಸಿನಿಮಾ ಉದ್ಯಮಕ್ಕೆ ಬೆಂಬಲ ಸಿಗಲಿದೆ ಮತ್ತು ರಾಜ್ಯೋತ್ಸವದ ಸಡಗರ ಇನ್ನಷ್ಟು ಹೆಚ್ಚಲಿದೆ. ಚಿತ್ರಮಂದಿರ ಮಾಲೀಕರು ಸಹಕರಿಸಿ, ಕನ್ನಡದ ಹೆಮ್ಮೆಯನ್ನು ಎತ್ತಿ ಹಿಡಿಯೋಣ ಎಂಬ ಸಂದೇಶವೂ ಅಡಕವಾಗಿದೆ ಎನ್ನುವುದು ಕನ್ನಡ ಭಾಷಾ ಅಭಿಮಾನಿಗಳ ಮಾತಾಗಿದೆ.