Skip to main content
ವಿಡಿಯೋ
1/3
cinema

ಮುಂಬೈ ಸ್ಟುಡಿಯೋ ಒತ್ತೆಯಾಳು ಪ್ರಕರಣ...ನಿರ್ದೇಶಕ ರೋಹಿತ್ ಆರ್ಯ ಗುಂಡೇಟಿಗೆ ಬಲಿ

By Ram Chethan
ಮುಂಬೈ ಸ್ಟುಡಿಯೋ ಒತ್ತೆಯಾಳು ಪ್ರಕರಣ...ನಿರ್ದೇಶಕ  ರೋಹಿತ್ ಆರ್ಯ ಗುಂಡೇಟಿಗೆ ಬಲಿ

ಮುಂಬೈನ ಆರ್‌ಎ ಸ್ಟುಡಿಯೋದಲ್ಲಿ 17 ಮಕ್ಕಳನ್ನು ಒತ್ತೆಯಾಳುಗಳಾಗಿ ಹಿಡಿದು ಬೆದರಿಕೆ ಹಾಕುತ್ತಿದ್ದ ರೋಹಿತ್ ಆರ್ಯ, ಪೊಲೀಸರ ಗುಂಡೇಟಿನಿಂದ ಮೃತ ಪಟ್ಟನು. ಅಪಹರಣಕ್ಕೆ ಹಿಂದೆ ಇದ್ದ ಕಾರಣಗಳು, ಅವನು ಮಾಡಿದ ಅಟ್ಟಹಾಸ ಮತ್ತು ಮಕ್ಕಳ ಜೀವ ಕಾಪಾಡಿದ ಪೊಲೀಸ್ ಕಾರ್ಯಾಚರಣೆ ಈಗ ಸುದ್ದಿಯ ಕೇಂದ್ರಬಿಂದುವಾಗಿದೆ.

ಮುಂಬೈನ ಆರ್‌ಎ ಸ್ಟುಡಿಯೋದಲ್ಲಿ ನಡೆದ ಭಯಾನಕ ಘಟನೆ ದೇಶದ ಗಮನ ಸೆಳೆದಿದೆ. ನಿರ್ದೇಶಕ ಮತ್ತು ಬರಹಗಾರನಾಗಿ ಕೆಲಸ ಮಾಡುತ್ತಿದ್ದ ರೋಹಿತ್ ಆರ್ಯ ಎಂಬುವನು 17 ಮಕ್ಕಳು ಮತ್ತು ಇಬ್ಬರು ವಯಸ್ಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದ. ಸುಮಾರು 19 ಮಂದಿಯ ಜೀವಕ್ಕೆ ಆತ ಅಪಾಯ ಉಂಟುಮಾಡಿದ್ದಾನೆ.

ಪೊಲೀಸರ ಮಾಹಿತಿಯ ಪ್ರಕಾರ, ರೋಹಿತ್ ಕೆಲವು ಮಕ್ಕಳ ಕೈ-ಕಾಲುಗಳನ್ನು ಕಟ್ಟಿ, ಅವರ ಬಾಯಿಗೆ ಟೇಪ್ ಹತ್ತಿಸಿದ್ದ. ಸ್ಟುಡಿಯೋದ ಒಳಗೆ ಪೆಟ್ರೋಲ್ ಮತ್ತು ರಬ್ಬರ್ ಸೊಲ್ಯೂಷನ್ ಎರಚಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಸ್ಥಳಕ್ಕೆ ಸೇರಿದಾಗ ಆತ ಪೆಪ್ಪರ್ ಸ್ಪ್ರೇ ಬಳಸಿ ದಾಳಿ ಮಾಡಲು ಯತ್ನಿಸಿದ. ನಂತರ ಎರ್‍ಗನ್ ತೆಗೆದು ಮಕ್ಕಳ ಕಡೆಗೂ, ಪೊಲೀಸರ ಕಡೆಗೂ ಗುರಿಯಿಟ್ಟಿದ್ದಾನೆ.Titan Neo Iv Analog Black Dial Men's Watch NM1805NL01/NN1805NL01/NP1805NL01

ಈ ಪರಿಸ್ಥಿತಿಯಲ್ಲಿ ಪೊಲೀಸರೊಬ್ಬರು ಗುಂಡು ಹಾರಿಸಿ ರೋಹಿತ್ ಅನ್ನು ನಿಯಂತ್ರಿಸಿದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟರೂ, ಚಿಕಿತ್ಸೆ ಫಲಕಾರಿಯಾಗದೆ ಅವನು ಮೃತ ಪಟ್ಟಾನೆ. ಈಗ ಪೊಲೀಸರು ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.ಯಶ್‌ನ ಹೃದಯದ ಮಾತು: “ಕನ್ನಡ ಎನ್ನುವುದು ಕೇವಲ ಭಾಷೆಯಲ್ಲ, ಅದು ನಮ್ಮ ಉಸಿರು”

ರೋಹಿತ್ ಆರ್ಯ ಹಿಂದೆ ‘ಲೆಟ್ಸ್ ಚೇಂಜ್’ ಸಿನಿಮಾ ನಿರ್ಮಾಣ ಮಾಡಿದ್ದಾನೆ. ಸ್ವಚ್ಛತೆ ಕುರಿತ ಕಾರ್ಯಗಳಲ್ಲಿ ಸಹ ಭಾಗಿಯಾಗಿದ್ದ. ಶಿಕ್ಷಣ ಇಲಾಖೆಯಿಂದ ತಕ್ಕ ಮನ್ನಣೆ ಹಾಗೂ ಹಣ ಸಿಗಲಿಲ್ಲ ಎಂಬ ಬೇಸರವೇ ಈ ಕೆಲಸಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಹಿಂದೆಲೂ ಆತ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದನೆಂದು ತಿಳಿದುಬಂದಿದೆ.

ಈ ಘಟನೆಯಿಂದ ಮಕ್ಕಳು ಮತ್ತು ಪೋಷಕರು ಭಯಭೀತರಾಗಿದ್ದಾರೆ. ಸದ್ಯ ಎಲ್ಲ ಮಕ್ಕಳು ಸುರಕ್ಷಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.