Skip to main content
ವಿಡಿಯೋ
1/3
general

ಆರ್‌ಎಸ್‌ಎಸ್‌ ವಿಜಯದಶಮಿ ಉತ್ಸವ: ದಾಖಲೆಯ 32 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಭಾಗಿ..!!

By Pavitra Ganapathi Baradavalli
ಆರ್‌ಎಸ್‌ಎಸ್‌ ವಿಜಯದಶಮಿ ಉತ್ಸವ: ದಾಖಲೆಯ 32 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಭಾಗಿ..!!

ರಾಷ್ಟ್ರೀಯ ಸ್ವಯಂಸೇವಕ ಸಂಘವು 02 ಅಕ್ಟೋಬರ್ 2025 ರಂದು ಆಚರಿಸಿದ ಶ್ರೀ ವಿಜಯದಶಮಿ ಉತ್ಸವವು ದೇಶಾದ್ಯಂತ ಅಭೂತಪೂರ್ವ ಯಶಸ್ಸು ಕಂಡಿದೆ.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು 02 ಅಕ್ಟೋಬರ್ 2025 ರಂದು ಆಚರಿಸಿದ ಶ್ರೀ ವಿಜಯದಶಮಿ ಉತ್ಸವವು ದೇಶಾದ್ಯಂತ ಅಭೂತಪೂರ್ವ ಯಶಸ್ಸು ಕಂಡಿದೆ. ಅಖಿಲ ಭಾರತೀಯ ವರದಿಯ ಪ್ರಕಾರ, ಸಂಘಟನೆಯು ಅವಧಿಯಲ್ಲಿ ಒಟ್ಟು 62,555 ಕಾರ್ಯಕ್ರಮಗಳನ್ನು ಆಯೋಜಿಸಿದೆ.ಇದನ್ನೂ ಓದಿ: ಲಾಲ್‌ಬಾಗ್‌ ಉಳಿಸಿ, ಬೆಂಗಳೂರನ್ನು ರಕ್ಷಿಸಿ: ಬಿಜೆಪಿ ಪ್ರತಿಭಟನೆ!

ಬೃಹತ್ ಉತ್ಸವದಲ್ಲಿ ಒಟ್ಟು 32,45,141 ಸ್ವಯಂಸೇವಕರು ಪೂರ್ಣ ಗಣವೇಷದಲ್ಲಿ ಭಾಗವಹಿಸುವ ಮೂಲಕ ತಮ್ಮ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದರ ಜೊತೆಗೆ, ದೇಶದ 25,000 ಸ್ಥಾನಗಳಲ್ಲಿ ಪಥಸಂಚಲನ ನಡೆದಿದ್ದು, ಇದರಲ್ಲಿ 25,45,800 ಸ್ವಯಂಸೇವಕರು ಪಾಲ್ಗೊಂಡಿದ್ದರು. ಒಟ್ಟು 37,250 ಪ್ರತ್ಯಕ್ಷ ಕಾರ್ಯಕ್ರಮಗಳು ನಡೆದಿವೆ.ಇದನ್ನೂ ಓದಿ: ಪಾಟ್ನಾದ 5 ಕ್ಷೇತ್ರಗಳಲ್ಲಿ ಇಂದು ಮತದಾರರ ಚೀಟಿ ವಿತರಣೆ..!

ಸಂಘಟನೆಯು ತನ್ನ ವ್ಯಾಪ್ತಿಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸಿದ್ದು, 44,686 ವಸತಿಗಳಲ್ಲಿ 40,220 ಪ್ರತಿನಿಧಿತ್ವ ದೊರಕಿದ್ದು ಮತ್ತು 59,343 ಮಂಡಲಗಳಲ್ಲಿ 50,096 ಪ್ರತಿನಿಧಿತ್ವ ಸಿಕ್ಕಿ ಕಾರ್ಯಕ್ರಮಗಳನ್ನು ನಡೆಸಿದೆ. ಒಟ್ಟು ಕಾರ್ಯಕ್ರಮಗಳಲ್ಲಿ ಶೇ. 80ರಷ್ಟು ವಿಜಯದಶಮಿಯ ದಿನ ಅಂದರೆ 02 ಅಕ್ಟೋಬರ್ 2025ರಂದು ಜರುಗಿವೆ, ಇನ್ನುಳಿದ ಶೇ. 20ರಷ್ಟು ಕಾರ್ಯಕ್ರಮಗಳು ಬೇರೆ ದಿನಗಳಲ್ಲಿ ನೆರವೇರಿವೆ. ವಾರ್ಷಿಕ ಉತ್ಸವವು ಸಂಘದ ರಾಷ್ಟ್ರೀಯ ಬದ್ಧತೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಎತ್ತಿ ಹಿಡಿದಿದೆ.SWORNOF Women's Kanjivaram Soft Silk Banarasi Sarees With Unstiched Blouse Piece