Skip to main content
ವಿಡಿಯೋ
1/3
politics

ನೈಜೀರಿಯಾದಲ್ಲಿ ಕಾರ್ಯಾಚರಣೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ!

By Pavitra Ganapathi Baradavalli
ನೈಜೀರಿಯಾದಲ್ಲಿ ಕಾರ್ಯಾಚರಣೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೈಜೀರಿಯಾದಲ್ಲಿ ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅದಕ್ಕೆ ಸಿದ್ಧತೆ ನಡೆಸಲು ರಕ್ಷಣಾ ಇಲಾಖೆಗೆ (Department of War) ಸೂಚಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೈಜೀರಿಯಾದಲ್ಲಿ ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅದಕ್ಕೆ ಸಿದ್ಧತೆ ನಡೆಸಲು ರಕ್ಷಣಾ ಇಲಾಖೆಗೆ (Department of War) ಸೂಚಿಸಿದ್ದಾರೆ. ನೈಜೀರಿಯಾ ಸರ್ಕಾರವು ಅಲ್ಲಿ ನಡೆಯುತ್ತಿರುವ ಕ್ರಿಶ್ಚಿಯನ್ನರ ಮೇಲಿನ ಹತ್ಯೆಗಳನ್ನು ನಿಯಂತ್ರಿಸಲು ವಿಫಲವಾದರೆ ಕ್ರಮ ಅನಿವಾರ್ಯವಾಗಬಹುದು ಎಂದು ಟ್ರಂಪ್ ಹೇಳಿದ್ದಾರೆ.ಇದನ್ನೂ ಓದಿ: ಆರ್‌ಎಸ್‌ಎಸ್ ನಿಷೇಧ ಕುರಿತು ದತ್ತಾತ್ರೇಯ ಹೊಸಬಾಳೆ ಖಡಕ್ ಹೇಳಿಕೆ: "ಯಾರೋ ಇಚ್ಛಿಸಿದ್ದಾರೆಂದು ಬ್ಯಾನ್‌ ಮಾಡಲು ಸಾಧ್ಯವಿಲ್ಲ"

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನೈಜೀರಿಯಾ ಸರ್ಕಾರವು ಹತ್ಯೆಗಳನ್ನು ಮುಂದುವರಿಸಲು ಅವಕಾಶ ನೀಡಿದರೆ, ಅಮೆರಿಕವು ತಕ್ಷಣವೇ ಎಲ್ಲಾ ನೆರವು ಮತ್ತು ಸಹಾಯವನ್ನು ನಿಲ್ಲಿಸುತ್ತದೆ, ಮತ್ತು ಅಲ್ಲಿನ ಇಸ್ಲಾಮಿಕ್ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಗನ್ಸ್--ಬ್ಲೇಜಿಂಗ್ (ದೊಡ್ಡ ಪ್ರಮಾಣದ ದಾಳಿ) ಮೂಲಕ ಪ್ರವೇಶಿಸಬಹುದು ಎಂದು ಎಚ್ಚರಿಸಿದ್ದಾರೆ.ಇದನ್ನೂ ಓದಿ: ಪ್ರಧಾನಿ ಮೋದಿ ಬಿಹಾರ ಚುನಾವಣಾ ಪ್ರಚಾರಕ್ಕೆ ಭೇಟಿ..!

ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ, ಅಮೆರಿಕದ ದಾಳಿಯು ವೇಗವಾಗಿ, ಕ್ರೂರವಾಗಿ ಮತ್ತು ನಿರ್ಣಾಯಕವಾಗಿ ಇರುತ್ತದೆ ಎಂದು ತಿಳಿಸಿದ್ದಾರೆ. ಟ್ರಂಪ್ ಅವರ ಕಠಿಣ ಹೇಳಿಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.SWORNOF Women's Kanjivaram Soft Silk Banarasi Sarees With Unstiched Blouse Piece