Skip to main content
ವಿಡಿಯೋ
1/3
religion

ಕಾಶಿ ಕಳೆದುಕೊಂಡಿತು ತನ್ನ ರಾಜಕೀಯ ಮಹತ್ವ.! ಆಗಿದ್ದೇನು.?

By Sushmitha R
ಕಾಶಿ ಕಳೆದುಕೊಂಡಿತು ತನ್ನ ರಾಜಕೀಯ ಮಹತ್ವ.! ಆಗಿದ್ದೇನು.?

ಕಾಶಿಯನ್ನು ಪಡೆಯಲು ಹವಣಿಸುತ್ತಿದ್ದ ಮಗಧ ಹಾಗೂ ಕೋಸಲ ಸಾಮ್ರಾಜ್ಯಗಳು ಕೊನೆಯದಾಗಿ ಒಂದು ಸಂಧಾನಕ್ಕೆ ಬಂದ ಮೇಲೆ ಬೌದ್ಧ ಮತದ ಪ್ರಭಾವ ಕಾಶಿ ನಗರದ ಮೇಲೆ ಬಿತ್ತು.

ಸಾ.ಯು.ಪೂರ್ವ 6ನೇ ಶತಮಾನದ ಕಾಲದಲ್ಲೂ ಕಾಶಿಯನ್ನು ಆಳೋದಕ್ಕೆ ಎರಡು ಪ್ರಮುಖ ಸಾಮ್ರಾಜ್ಯಗಳು ಹಣಹಣಿಸುತ್ತಿದ್ದವು. ಮಗಧ ಹಾಗೂ ಕೋಸಲ ಸಾಮ್ರಾಜ್ಯಗಳ ನಡುವೆ ಕಾಶಿಗಾಗಿ ಕಲಹ ಮನಸ್ಥಾಪಗಳು ನಡೆಯುತ್ತಲೇ ಇದ್ದವು. ಕಾಶಿಯು ಕೆಲವೊಮ್ಮೆ ಮಗಧರ ಕೈ ಸೇರಿದರೆ, ಕೆಲವೊಮ್ಮೆ ಕೋಸಲರ ಕೈಗೆ ತಲುಪುತ್ತಿತ್ತು.

ಕೊನೆಗೆ ಮಗಧ ಸಾಮ್ರಾಜ್ಯವು ಬೃಹತ್ ಶಕ್ತಿಯಾಗಿ ಬೆಳೆಯುವುದನ್ನು ಕಂಡ ಕೋಸಲ ರಾಜನು, ತನ್ನ ಮಗಳನ್ನು ಮಗಧದ ದೊರೆ ಬಿಂಬಿಸಾರನಿಗೆ ಮದುವೆ ಮಾಡಿಸಿ ಕೊಟ್ಟು ಕಾಶಿಯನ್ನು ಉಡುಗೊರೆಯಾಗಿ ಮಗಧ ಸಾಮ್ರಾಜ್ಯಕ್ಕೆ ಕೊಟ್ಟನು.SUKHMANI CRAFT Women's Cotton Anarkali Embroidery Designer Long Anarkali Kurti With Pant and Dupatta Set (Red)

ಕೋಸಲ ರಾಜ ಕಾಶಿಯನ್ನು ಮಗಧ ಸಾಮ್ರಾಜ್ಯಕ್ಕೆ ಒಪ್ಪಿಸುವ ಹಿಂದೆ ಒಂದು ಷರತ್ತು ಇತ್ತು. ಆ ಷರತ್ತಿನ ಪ್ರಕಾರ ಕಾಶಿ ನಗರದಿಂದ ಬರುವ ವರಮಾನವನ್ನು ತನ್ನ ಮಗಳ ಸ್ನಾನ ಹಾಗು ಸುಗಂಧ ದ್ರವ್ಯಗಳ ಖರ್ಚಿಗೆ ಬಳಸಬೇಕಿತ್ತು.

ಆದರೆ ಬಿಂಬಿಸಾರ ಆತನ ಮಗ ಅಜಾತಶತ್ರುವಿನಿಂದಲೇ ಕೊಲೆಯಾದಾಗ ಕೋಸಲದ ರಾಜಕುಮಾರಿ ಕೊರಗುತ್ತಲೇ ತನ್ನ ಪ್ರಾಣ ಬಿಟ್ಟಳು. ಆಗ ಕೋಸಲ ರಾಜನು ಮತ್ತೊಮ್ಮೆ ಮಗಧ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಕಾಶಿಯನ್ನು ವಶಪಡಿಸಿಕೊಂಡನು. ಇದನ್ನು ಓದಿ: ಇಸ್ರೋದಿಂದ ಮತ್ತೊಂದು ಯಶಸ್ವಿ ಹೆಜ್ಜೆ: ಇಂದು ಸಂಜೆ ಬಾಹುಬಲಿ LVM3 ರಾಕೆಟ್ CMS-03 ಉಡಾವಣೆ..!!

ಆದರೆ ಯಾವುದೋ ಮತ್ತೊಂದು ಕಾರಣಕ್ಕೆ ಪುನಃ ಅಜಾತಶತ್ರು ಜೊತೆಗೆ ಸಂಧಾನ ಮಾಡುವ ಪರಿಸ್ಥಿತಿ ಬಂದು, ವಿವಾಹ ಸಂಬಂಧವನ್ನು ಏರ್ಪಡಿಸಿ ಮತ್ತೊಮ್ಮೆ ಕಾಶಿಯನ್ನು ಮಗಧರಿಗೆ ಉಡುಗೊರೆಯಾಗಿ ಕೊಟ್ಟನು. ಹಾಗಾಗಿ ಕಾಶಿ ಎನ್ನುವುದು ಎರಡು ಸಾಮ್ರಾಜ್ಯಗಳ ರಾಜಕೀಯ ದಾಳವಾಗಿತ್ತು.

ವರ್ಷಗಳು ಕಳೆದಂತೆ ಮಗಧ ಸಾಮ್ರಾಜ್ಯದ ಶಕ್ತಿ ವೃದ್ಧಿಸುತ್ತಾ ಹೋಯಿತು, ಜೊತೆಗೆ ಕೋಸಲ ಸಾಮ್ರಾಜ್ಯ ದುರ್ಬಲವಾಗುತ್ತಾ ಹೋಯಿತು. ಆದಾದ ನಂತರ ಅಂದರೆ ಸಾ.ಯು.ಪೂರ್ವ 4ನೇ ಶತಮಾನದಿಂದ 6ನೇ ಶತಮಾನ, ಅಂದರೆ ಮೌರ್ಯರ ಕಾಲದಿಂದ ಹಿಡಿದು ಗುಪ್ತರ ಕಾಲದವರೆಗೂ ಕಾಶಿಯ ರಾಜಕೀಯ ಮಹತ್ವ ಎನ್ನುವುದು ಕುಸಿಯುತ್ತಾ ಬಂತು.ಇದನ್ನು ಓದಿ: ಭಾರತದಲ್ಲಿ ವಾಹನ ಮಾರಾಟದ ಹೊಸ ದಾಖಲೆ: ಅಕ್ಟೋಬರ್ 2025 ರಲ್ಲಿ ಗರಿಷ್ಠ ಮಟ್ಟ!