Skip to main content
ವಿಡಿಯೋ
politics

ಇಂದು ಘೋಷಣೆಯಾಗುತ್ತಾ ಜಿಬಿಎ ಗೆ ಚುನಾವಣೆ?

By Vinutha U
ಇಂದು ಘೋಷಣೆಯಾಗುತ್ತಾ ಜಿಬಿಎ ಗೆ ಚುನಾವಣೆ?

ನ್ಯಾ. ಸೂರ್ಯಕಾಂತ್ ನೇತೃತ್ವದ ಪೀಠದಲ್ಲಿ ನಡೆಯುವ ಈ ವಿಚಾರಣೆಯಲ್ಲಿ, ಬಿಬಿಎಂಪಿ ಮಾಜಿ ಸದಸ್ಯ ಎಂ. ಶಿವರಾಜ್ ಸೇರಿ ಇತರರು 2020 ಡಿಸೆಂಬರ್‌ನಲ್ಲಿ ಸಲ್ಲಿಸಿದ ಮೂರು ಅರ್ಜಿಗಳು ಪರಿಗಣನೆಗೆ ಬರಲಿವೆ.

ಇಂದು ಬಿಬಿಎಂಪಿ (ಜಿಬಿಎ) ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆಯೇ? ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾ. ಸೂರ್ಯಕಾಂತ್ ನೇತೃತ್ವದ ಪೀಠದಲ್ಲಿ ನಡೆಯುವ ಈ ವಿಚಾರಣೆಯಲ್ಲಿ, ಬಿಬಿಎಂಪಿ ಮಾಜಿ ಸದಸ್ಯ ಎಂ. ಶಿವರಾಜ್ ಸೇರಿ ಇತರರು 2020 ಡಿಸೆಂಬರ್‌ನಲ್ಲಿ ಸಲ್ಲಿಸಿದ ಮೂರು ಅರ್ಜಿಗಳು ಪರಿಗಣನೆಗೆ ಬರಲಿವೆ.

ಇದುವರೆಗೆ 20 ಬಾರಿ ವಿಚಾರಣೆಗೆ ಬಂದಿರುವ ಈ ಪ್ರಕರಣದಲ್ಲಿ, ಆಗಸ್ಟ್ 2025ರಲ್ಲಿ ಸುಪ್ರೀಂ ಕೋರ್ಟ್ ಮೂರು ತಿಂಗಳೊಳಗೆ ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಸಿದ್ಧತೆ ಸೇರಿ ಎಲ್ಲ ಚುನಾವಣಾ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿತ್ತು. ಇಂದಿನ ವಿಚಾರಣೆಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇದೆ.