ಬಿಗ್ ಬಾಸ್ ಮನೆಯ ನಿಯಮಗಳಲ್ಲಿ ಪ್ರಮುಖವಾದುದು ‘ಯಾರ ಮೇಲೂ ಹಲ್ಲೆ ಮಾಡಬಾರದು’ ಎಂಬುದು. ಈ ನಿಯಮ ಮೀರಿದವರನ್ನು ತಕ್ಷಣವೇ ಮನೆಯಿಂದ ಹೊರಹಾಕಲಾಗುತ್ತದೆ. ಹಿಂದಿನ ಸೀಸನ್‌ಗಳಲ್ಲಿ ಇಂತಹ ಹಲವು ಉದಾಹರಣೆಗಳಿವೆ. ಕಳೆದ ಸೀಸನ್‌ನಲ್ಲಿ ರಂಜಿತ್ ಕೂಡ ಇದೇ ಕಾರಣಕ್ಕೆ ಮನೆಯಿಂದ ಹೊರನಡೆದಿದ್ದರು.
ಈಗ ‘ಗಿಲ್ಲಿ’ ಎಂದೇ ಗುರುತಿಸಿಕೊಂಡಿರುವ ಸ್ಪರ್ಧಿಯ ಮೇಲೆ ರಿಷಾ ಅವರು ಹಲ್ಲೆ ಮಾಡಿದ್ದಾರೆ. ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ರಿಷಾ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಬೇಕು ಎಂಬ ಕೂಗು ಕೇಳಿಬಂದಿದೆ.Titan Maritime Analog Green Dial Men's Watch NM1830KL02/NN1830KL02/NP1830KL02
ಘಟನೆ ಹೀಗಿದೆ: ಸ್ನಾನಗೃಹದಲ್ಲಿ ಬಕೆಟ್ ನೀಡುವಂತೆ ಗಿಲ್ಲಿ ಅವರು ರಿಷಾ ಅವರಿಗೆ ಮನವಿ ಮಾಡಿದ್ದರು. ಆದರೆ, ರಿಷಾ ಅದಕ್ಕೆ ಒಪ್ಪಲಿಲ್ಲ. ಆಗ ಗಿಲ್ಲಿ ಅವರು “ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ” ಎಂದು ಹೇಳಿ, ರಿಷಾ ಅವರ ಬಟ್ಟೆಗಳನ್ನು ತಂದು ಸ್ನಾನಗೃಹದ ಹೊರಭಾಗದಲ್ಲಿ ನೆಲದ ಮೇಲೆ ಹಾಕಿದರು.
ಇದರಿಂದ ಕೆರಳಿದ ರಿಷಾ, “ಗಿಲ್ಲಿ” ಎಂದು ಕೂಗುತ್ತಾ ಬಂದು ಗಿಲ್ಲಿಗೆ ಹೊಡೆದರು. ಅಲ್ಲಿಗೇ ನಿಲ್ಲದೆ, ಗಿಲ್ಲಿ ಮೇಲೆ ಕೂಗಾಡಿದರು. ಅವರ ಬಟ್ಟೆಗಳನ್ನು ಎತ್ತಿ ಎಸೆದರು, ಸೂಟ್‌ಕೇಸ್ ಒದ್ದರು ಹಾಗೂ ಗಿಲ್ಲಿಯನ್ನು ತಳ್ಳಿದರು.ಇದನ್ನು ಓದಿ:ಬಿಗ್ ಬಾಸ್ ಕನ್ನಡ 12: ಮಲ್ಲಮ್ಮ ಎಲಿಮಿನೇಷನ್ ...ಪ್ರೇಕ್ಷಕರಲ್ಲಿ ಬೆಸೆದ ಭಾವನೆಗಳೊಂದಿಗೆ ಮನೆಯಿಂದ ಹೊರಗೆ..!
ರಿಷಾ ಅವರ ಈ ವರ್ತನೆ ಬಿಗ್ ಬಾಸ್‌ನ ಮೂಲ ನಿಯಮಗಳಿಗೆ ಸ್ಪಷ್ಟವಾಗಿ ವಿರುದ್ಧವಾಗಿದೆ. ಹಿಂದಿನ ಸೀಸನ್‌ಗಳಲ್ಲಿ ಇಂತಹ ಘಟನೆಗಳು ನಡೆದಾಗ ಸ್ಪರ್ಧಿಗಳನ್ನು ತಕ್ಷಣವೇ ಮನೆಯಿಂದ ಹೊರಹಾಕಲಾಗಿತ್ತು. ಈ ಸೀಸನ್‌ನಲ್ಲೂ ಅದೇ ಕ್ರಮ ಕೈಗೊಳ್ಳಲಾಗುವುದೇ ಎಂಬ ಪ್ರಶ್ನೆ ಎದ್ದಿದೆ.
ತೆಲುಗು ಬಿಗ್ ಬಾಸ್‌ನಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಒಬ್ಬ ಪುರುಷ ಸ್ಪರ್ಧಿ ಮಹಿಳಾ ಸ್ಪರ್ಧಿಯ ಮೇಲೆ ಕಠಿಣವಾಗಿ ನಡೆದುಕೊಂಡಿದ್ದ. ಈ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿ, ವೀಕೆಂಡ್ ಎಪಿಸೋಡ್‌ನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಆ ಸ್ಪರ್ಧಿಯನ್ನು ಹೊರಹಾಕಿದ್ದರು.
ಕನ್ನಡ ಬಿಗ್ ಬಾಸ್‌ನಲ್ಲೂ ಇದೇ ರೀತಿ ಮಾಡಲಾಗುವುದೇ ಅಥವಾ ಈ ಬಗ್ಗೆ ಬಿಗ್ ಬಾಸ್ ಯಾವ ರೀತಿಯ ಆದೇಶ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಹೆಚ್ಚಿನ ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.