ಬೆಂಗಳೂರು - ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಇಂದು ಚಾರ್ಜ್ ಫ್ರೇಮ್ ಗಾಗಿ ಸಮಯ ನಿಗದಿಯಾಗಿದೆ. ಇಂದು ಖುದ್ದು ಕೋರ್ಟ್ ಗೆ ಹಾಜರಾಗಲಿರುವ ಎಲ್ಲಾ ಆರೋಪಿಗಳು ತಮ್ಮ ವಿರುದ್ಧದ ಎಲ್ಲ ಅಂಶಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ದರ್ಶನ್ ,ಪವಿತ್ರಗೌಡ, ಅನುಕುಮಾರ್, ಜಗದೀಶ್, ಲಕ್ಷ್ಮಣ್, ನಾಗರಾಜ್ ಎಂಬ ಆರೋಪಿಗಳನ್ನ ಇಂದು ಜೈಲಿನಿಂದ ಕರೆದುಕೊಂಡು ಬಂದು ಜೈಲು ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. ಉಳಿದ ಆರೋಪಿಗಳು ನೇರವಾಗಿ ವಕೀಲರ ಮುಖಾಂತರ ಕೋರ್ಟ್ ಗೆ ಆರೋಪಿಗಳು ಹಾಜರಾಗಲಿದ್ದಾರೆ.
ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ನೀಡಬೇಕೆಂದು ಈಗಾಗಲೇ ಸಲಹೆ ಸೂಚನೆ ವಕೀಲರು ನೀಡಬೇಕಾಗುತ್ತದೆ. ನಿಮ್ಮ ಮೇಲೆ ಕೊಲೆ, ಕೊಲೆ ಮಾಡುವ ಉದ್ದೇಶ ಕಿಡ್ನಾಪ್, ಸಾಕ್ಷಿನಾಶ, ಪಿತೂರಿಯಂತಹ ಆರೋಪಗಳಿಗೆ ಎಂದು ಮಾಹಿತಿ ನೀಡಿರುತ್ತಾರೆ.
ಆರೋಪಗಳ ಸಂಬಂಧ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿರುವ ಸೆಕ್ಷನ್ ಗಳನ್ನ ಓದಿ ಹೇಳುವ ನ್ಯಾಯಾಧೀಶರು ಹೇಳುತ್ತಾರೆ. ಆ ವೇಳೆ ನಾವು ಏನು ತಪ್ಪು ಮಾಡಿಲ್ಲವೆಂದು ಹೇಳುವಂತೆ ಸೂಚನೆ ನೀಡುವ ಸಾಧ್ಯತೆ ಇದೆ. ನ್ಯಾಯಾಧೀಶರು ದೋಷಾರೋಪ ಓದಿ ತಪ್ಪೊಪ್ಪಿಕೊಳ್ಳುತ್ತಿರ ಎಂದಾಗ ನಿರಾಕರಿಸುತ್ತಾರಾ ? ಒಪ್ಪುತ್ತಾರಾ ನೋಡಬೇಕಿದೆ. KLOSIA Women's Rayon Printed Anarkali Kurta and Pant with Dupatta Set
ಹಾಗೇ ಒಂದು ವೇಳೆ ಒಪ್ಪಿಕೊಂಡರೆ ಶಿಕ್ಷೆ ಪ್ರಕಟಿಸೋ ಸಾಧ್ಯತೆ ಇರುವ ಬಗ್ಗೆ ಸಲಹೆ ಸೂಚನೆಯೂ ನೀಡಿರುತ್ತಾರೆ. ಆತುರ ಪಡದೆ ತಾಳ್ಮೆಯಿಂದ ನ್ಯಾಯಾಧೀಶರು ಏನು ಕೇಳುತ್ತಾರೆ ಎಂದು ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ನೀಡುವಂತೆ ಸೂಚನೆ ವಕೀಲರು ನೀಡಿರುತ್ತಾರೆ.