Skip to main content
ವಿಡಿಯೋ
1/2
politics

ಸಿಎಂ ಕಾರಲ್ಲಿ ಬಿಜೆಪಿ MLC N. ರವಿಕುಮಾರ್‌: ಕೂತಿದ್ದು ಅಪರಾಧವೇ? ಕಾರಣ ʼಗೌಚರ್ʼ!

By Gireesh Vasishta
ಸಿಎಂ ಕಾರಲ್ಲಿ ಬಿಜೆಪಿ MLC N. ರವಿಕುಮಾರ್‌: ಕೂತಿದ್ದು ಅಪರಾಧವೇ? ಕಾರಣ ʼಗೌಚರ್ʼ!

ಕಾರಣ ರೋಗಪೀಡಿತರ ದೇಹ ಈ ಕೊಬ್ಬನ್ನು ಜೀರ್ಣ ಮಾಡುವ ಕಿಣ್ವ (ಎನ್ಜೈಮ್)ವನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇದು ಹುಟ್ಟಿನಿಂದಲೇ ಬರುವ ಕಾಯಿಲೆ. ಇದಕ್ಕೆ ವರ್ಷಕ್ಕೆ ತಗಲುವ ವೆಚ್ಚ 80 ಲಕ್ಷದಿಂದ 2 ಕೋಟಿ ರುಪಾಯಿ. ಈ ಚಿಕಿತ್ಸೆಯನ್ನು ಬಡವರು ಪಡೆಯಲು ಸಾಧ್ಯವೇ ಇಲ್ಲ.

ಬೆಂಗಳೂರು; ಬಿಜೆಪಿ MLC ಎನ್. ರವಿಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರ ಕಾರಿನಲ್ಲಿ ಕಾಣಿಸಿಕೊಂಡಿದ್ದು ಟೀಕೆಗೆ ಕಾರಣವಾಗಿತ್ತು. ಸಿಎಂರನ್ನ ಭೇಟಿ ಮಾಡಲು ಹೋಗಿದ್ದು, ಸಿಎಂ ಕಾರಿನಲ್ಲಿ ಕೂತಿದ್ದು ರಾಜಕೀಯ ಕಾರಣಕ್ಕಲ್ಲ. ಅದರ ಹಿಂದಿನ ಸತ್ಯ ರಾಜಕೀಯ ಮೀರಿದ ಸಮಾಜಮುಖಿ ಕಾರ್ಯ ಇಲ್ಲಿದೆ ಮಾಹಿತಿ. ವಿಧಾನಪರಿಷತ್ ಮುಖ್ಯ ಸಚೇತಕರಾಗಿರುವ N.ರವಿಕುಮಾರ್ ಅವರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ವಪಕ್ಷೀಯರಿಂದಲೇ ಅನೇಕ ಟೀಕೆಗಳು ಬರುತ್ತದೆ. ರವಿಕುಮಾರ್ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಕೂತಿರುವ ಫೋಟೋವೊಂದು ವೈರಲ್ ಆಗಿದೆ.Safari Flip 32L Casual Printed Backpack, 2 Compartments, Bottle Holder

ಸಿಎಂರನ್ನು ರವಿಕುಮಾರ್ಭೇಟಿ ಆಗಿದ್ದೇಕೆ?

ʼಗೌಚರ್ʼ ಎನ್ನುವ ಅತ್ಯಂತ ಮಾರಕ ವಂಶವಾಹಿನಿಯಿಂದ ಬರುವ ರೋಗವೊಂದಿದೆ. ಸದ್ಯಕ್ಕೆ ರೋಗವನ್ನು ಗುಣಪಡಿಸಲು ಯಾವುದೇ ಔಷಧಿ ಇಲ್ಲ. ಸರಳವಾಗಿ ಹೇಳಬೇಕೆಂದರೆ, ರೋಗಪೀಡಿತರಿಗೆ ದೇಹದೊಳಗೆ ಸಹಜವಾಗಿಗ್ಲುಕೋಸರಿಬ್ರೋಸೈಡ್ಎನ್ನುವ ಕೊಬ್ಬು ಜೀರ್ಣ ಆಗುವುದಿಲ್ಲ. ಕಾರಣ ರೋಗಪೀಡಿತರ ದೇಹ ಕೊಬ್ಬನ್ನು ಜೀರ್ಣ ಮಾಡುವ ಕಿಣ್ವ (ಎನ್ಜೈಮ್)ವನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇದು ಹುಟ್ಟಿನಿಂದಲೇ ಬರುವ ಕಾಯಿಲೆ. ಇದಕ್ಕೆ ವರ್ಷಕ್ಕೆ ತಗಲುವ ವೆಚ್ಚ 80 ಲಕ್ಷದಿಂದ 2 ಕೋಟಿ ರುಪಾಯಿ. ಈ ಚಿಕಿತ್ಸೆಯನ್ನು ಬಡವರು ಪಡೆಯಲು ಸಾಧ್ಯವೇ ಇಲ್ಲ.ಇದನ್ನು ಓದಿ; ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ಬಿಎಂಟಿಸಿ ಅಧಿಕಾರಿ; ಕೆ.ಬಿ. ರಾಮಕೃಷ್ಣರೆಡ್ಡಿಗೆ 3 ವರ್ಷ ಜೈಲು, ₹70 ಲಕ್ಷ ದಂಡ

2022ರಲ್ಲಿ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಿಂದ ಪ್ರತಿ ಕುಟುಂಬಕ್ಕೆ ₹50 ಲಕ್ಷದಂತೆ ಒಟ್ಟು 34 ರೋಗಿಗೆ ಸುಮಾರು ₹18 ಕೋಟಿ ಸಹಾಯಧನ ಕೊಡಿಸಿದ್ದರು. ಜೊತೆಗೆ ರಾಜ್ಯ ಸರಕಾರವೂ ಇದಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಅನುದಾನಗಳನ್ನು ಕೊಡುತ್ತಾ ಬಂದಿತು. ಸಿದ್ದರಾಮಯ್ಯನವರ ಸರಕಾರ ಸಾಲಿನಲ್ಲಿ ಕೊಡಬೇಕಾಗಿದ್ದ ₹14 ಕೋಟಿಯಲ್ಲಿ ಕೇವಲ ₹1.8 ಕೋಟಿ ಕೊಟ್ಟು ಉಳಿದ ಹಣವನ್ನು ಹಾಗೇ ಬಾಕಿ ಇಟ್ಟುಕೊಂಡಿದೆ. ಹೀಗಾಗಿ ಈ ವಿಚಾರವನ್ನು ತಿಳಿಸಲು ಅವರ ಸಿದ್ದರಾಮಯ್ಯನವರ ಕಾರಿನಲ್ಲಿ ತೆರಳಿದ್ದರು. ಇದನ್ನು ಅರಿಯದ ಕೆಲವರು ಬಾಯಿಗೆಬಂದಂತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ..