Skip to main content
ವಿಡಿಯೋ
1/3
general

ಸಿನಿಮಾದಿಂದ ಸಮಾಜಕ್ಕೆ ಬೆಳಕು ಚೆಲ್ಲಬೇಕು: ನಟ ದರ್ಶನ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರಾ ಸಿಎಂ ಸಿದ್ದರಾಮಯ್ಯ?!

By Shravanthi R
ಸಿನಿಮಾದಿಂದ ಸಮಾಜಕ್ಕೆ ಬೆಳಕು ಚೆಲ್ಲಬೇಕು: ನಟ ದರ್ಶನ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರಾ ಸಿಎಂ ಸಿದ್ದರಾಮಯ್ಯ?!

ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮೈಸೂರಿನಲ್ಲಿ ಮಾತನಾಡುವ ಸಂದರ್ಭದಲ್ಲಿ ಸಿನಿಮಾ ಹಾಗೂ ಸಿನಿಮಾ ನಟರ ಕುರಿತಾಗಿ ಅವರ ಪ್ರಭಾವವು ಹೇಗೆ ಸಮಾಜಕ್ಕೆ ಪರಿಣಮಿಸುವುದೆಂದು ಹೇಳುವಾಗ ಎರಡೂ ಆಯಾಮಗಳಲ್ಲೂ ಒಂದೇ ಆಗಿರುವುದರ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಮೈಸೂರು: ಇತ್ತೀಚೆಗೆ ನಟ ದರ್ಶನ್ ಅವರ ಸುತ್ತ ನಡೆದ ಬೆಳವಣಿಗೆಗಳು ಚಲನಚಿತ್ರ ಮಂದಿಗೆ ಬಾಯಿಬೀಗ ಹಾಕಿದಂತಾಗಿದೆ. ಈ ಮಧ್ಯೆ, ಕರ್ನಾಟಕ ಆಡಳಿತ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. “ನಾಯಕ ನಟರು ಸಿನಿಮಾ ಪರದೆಯ ಮೇಲಿರುವಂತೆಯೇ, ನಿಜ ಜೀವನದಲ್ಲೂ ಇರಬೇಕು" ಎಂದು ಪ್ರತಿಪಾದಿಸಿರುವ ಅವರು, ನಟರ ನಡವಳಿಕೆ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಹೇಳಿಕೆಯ ಮುಖ್ಯಾಂಶಗಳು -

ಮೈಸೂರಿನಲ್ಲಿ, 2018  ಹಾಗೂ 2019 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವಭವನದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಿನಿಮಾದ ನಾಯಕ ನಟರ ನಡವಳಿಕೆ ಕುರಿತು ಕೆಲವು ಮಹತ್ವದ ಮಾತುಗಳನ್ನಾಡಿದರು:

"ನಾವು ಸಿನಿಮಾ ನೋಡಿ ಪರಿವರ್ತನೆ ಆದವರನ್ನು ನೋಡಿದ್ದೇವೆ. ಆದರೆ, ಈಗ ಸಿನಿಮಾ ನೋಡಿ ಬದಲಾವಣೆ ಆಗುವುದು ಕಡಿಮೆ ಆಗಿದೆ. ಈಗಿನ ಹೀರೋಗಳಿದಾರಲ್ಲ..ಅವರಿಗೆ ಜನರಿಂದ ಗೌರವ, ಅನುಸರಣೆ ಆಗುತ್ತದೆ. ಆದ್ದರಿಂದ ಸಿನಿಮಾದಲ್ಲಿದ್ದಂತೆ, ನಿಜಜೀವನದಲ್ಲೂ ಕೂಡ ಇರಬೇಕು. ಅಂತಹ ನಡವಳಿಕೆ ಇದ್ದಾಗ, ಅದು ಸಮಾಜಕ್ಕೆ ಬೆಳಕನ್ನು ಚೆಲ್ಲುತ್ತದೆ." ಎಂದಿದ್ದಾರೆ. Trading in the Zone: Master the Market with Confidence, Discipline, and a Winning Attitude Hardcover – 25 May 2022

"ಸಿನಿಮಾ ಪರದೆ ಮೇಲೆ ಒಂದು ತರ, ಜೀವನದಲ್ಲಿ ಒಂದು ತರ ಇರುವುದು ಸರಿಯೇ? ಹಾಗಾಗಬಾರದಲ್ಲವೇ?" ಎಂದು ಪ್ರಶ್ನಿಸುವ ಮೂಲಕ, ನಟರ ದ್ವಂದ್ವ ನಡವಳಿಕೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು."ಡಾ. ರಾಜ್‌ಕುಮಾರ್ ಹೇಗಿದ್ದರು? ಅವರು ಎರಡೂ ರೀತಿ ಒಂದೇ ಆಗಿದ್ರು," ಎಂದು ಸ್ಮರಿಸಿದ ಸಿಎಂ, ನಟರು ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದಲ್ಲಿ ಸಮಾನ ಮೌಲ್ಯಗಳನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ: ಮೂರನೇ ದಿನವೂ 'ತೀರಾ ಕಳಪೆ' ವಿಭಾಗದಲ್ಲಿ ಎಕ್ಯೂಐ, 309ಕ್ಕೆ ತಲುಪಿದ ಮಾಪನ

ಮುಖ್ಯಮಂತ್ರಿಗಳ ಈ ಹೇಳಿಕೆ, ಪ್ರಸ್ತುತ ನಟ ದರ್ಶನ್ ಅವರು ಭಾಗಿಯಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ, ಹೇಳಿದ್ದರೆ? ಎನ್ನುವುದು ಕುತೂಹಲ ಮೂಡಿಸಿದೆ ಎನ್ನಲಾಗಿದೆ. ಜನಪ್ರಿಯ ವ್ಯಕ್ತಿಗಳು ಸಮಾಜದಲ್ಲಿ ನೈತಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು ಎಂಬುದು ಸಿಎಂ ಅವರ ಮಾತಿನ ತಾತ್ಪರ್ಯವಾಗಿದೆ ಎನ್ನಬಹುದಾಗಿದೆ. ಇದನ್ನೂ ಓದಿ: 🌍 ವಿಜಯಪುರದಲ್ಲಿ ಮತ್ತೆ ನಡುಗಿದ ಭೂಮಿ, 3.1 ತೀವ್ರತೆಯ ಭೂಕಂಪನ ದಾಖಲು