Skip to main content
ವಿಡಿಯೋ
1/3
politics

ಕಡ್ಡಾಯ ರಜೆ ಕೊಡಿ - ವೋಟ್ ಹಾಕಲಿ - DCM ಡಿ.ಕೆ‌.ಶಿವಕುಮಾರ್ ..!

By Sushmitha R
ಕಡ್ಡಾಯ ರಜೆ ಕೊಡಿ - ವೋಟ್ ಹಾಕಲಿ -  DCM ಡಿ.ಕೆ‌.ಶಿವಕುಮಾರ್ ..!

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಹೊಸ ಆದೇಶ ಹೊರಡಿಸಿದ್ದಾರೆ . ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ 2025 ನವೆಂಬರ್ 06 ರಿಂದ 11 ರಂದು ನಡೆಯಲಿದೆ.

ಬೆಂಗಳೂರು - ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಹೊಸ ಆದೇಶ ಹೊರಡಿಸಿದ್ದಾರೆ . ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ 2025 ನವೆಂಬರ್ 06 ರಿಂದ 11 ರಂದು ನಡೆಯಲಿದೆ.

ಬಿಹಾರದ ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಕಂಪನಿಗಳು, ವಾಣಿಜ್ಯ ಉದ್ಯಮಿಗಳು, ಹೋಟೆಲ್‌ಗಳು, ಗುತ್ತಿಗೆದಾರರು, ಬಿಲ್ಡರ್ಗಗಳು ಅಂಗಡಿ ಮುಂಗಟ್ಟುಗಳು ಹಾಗೂ ಇತರೆ ಉದ್ದಮೆದಾರರು ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ಅನುವಾಗುವಂತೆ ಅವಕಾಶ ನೀಡಬೇಕಿದೆ. Miraggio Womens Denice Large Sized Tote Bag With Adjustable & Detachable Sling Strap And Top Handles | Fits Upto 14" Laptop | Tote Bags for Women For Office Use, Work

ಬಿಹಾರ ರಾಜ್ಯದ ಮತದಾರರಾದವರಿಗೆ ಕನಿಷ್ಟ ಮೂರು ದಿನಗಳ ವೇತನ ಸಹಿತ ರಜೆ ಯನ್ನು ನೀಡಲು ಮತ್ತು ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಹಕರಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕೋರುತ್ತೇನೆ ಎಂದು ಆದೇಶಿಸಿದ್ದಾರೆ.

ತಮ್ಮ ತವರು ರಾಜ್ಯದ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಗತ್ಯ ಸಹಕಾರ ನೀಡಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೋರಿದ್ದಾರೆ. ಈ ಆದೇಶವು ಬಿಹಾರದ ಮತದಾರರು ಯಾವುದೇ ಆರ್ಥಿಕ ಅಥವಾ ಔದ್ಯೋಗಿಕ ಸಮಸ್ಯೆಯಿಲ್ಲದೆ ತಮ್ಮ ಹಕ್ಕನ್ನು ಚಲಾಯಿಸಲು ನೆರವಾಗುತ್ತದೆ.ಇದನ್ನು ಓದಿ: ಒಳ ಮೀಸಲಾತಿ ನಿರ್ಣಯಕ್ಕೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಎಲ್ಲಾ ಉದ್ಯಮದಾರರು ಮತ್ತು ಸಂಸ್ಥೆಗಳು ಈ ಆದೇಶವನ್ನು ಪಾಲಿಸಿ, ಬಿಹಾರ ರಾಜ್ಯದ ಮತದಾರರಿಗೆ ಮತ ಚಲಾಯಿಸಲು ಸಹಕರಿಸಬೇಕು ಎಂದು ಕೋರಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಯಶಸ್ವಿ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರ ನೀಡಿದ ಬೆಂಬಲವಾಗಿದೆ.ಇದನ್ನು ಓದಿ: ಕಲ್ಯಾಣ ಕರ್ನಾಟಕದಲ್ಲಿ ಶಕ್ತಿ ಯೋಜನೆ ಪ್ರಯೋಜನ ಶೂನ್ಯ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್. ಅಶೋಕ್ ವಾಗ್ದಾಳಿ!