Skip to main content
ವಿಡಿಯೋ
1/3
politics

ಜಿಬಿಎ ಅನುದಾನ ಅರ್ಧದಷ್ಟು ಕಡಿತ: ಬೆಂಗಳೂರಿಗೆ ಮತ್ತೊಂದು ಹೊಡೆತ! ಇದಕ್ಕೆಲ್ಲಾ ಸಿಎಂ-ಡಿಸಿಎಂ ಜಗಳವೇ ಕಾರಣ ಆರ್‌ ಅಶೋಕ್‌ ಕಿಡಿ?

By Pavitra Ganapathi Baradavalli
ಜಿಬಿಎ ಅನುದಾನ ಅರ್ಧದಷ್ಟು ಕಡಿತ: ಬೆಂಗಳೂರಿಗೆ ಮತ್ತೊಂದು ಹೊಡೆತ! ಇದಕ್ಕೆಲ್ಲಾ ಸಿಎಂ-ಡಿಸಿಎಂ ಜಗಳವೇ ಕಾರಣ ಆರ್‌ ಅಶೋಕ್‌ ಕಿಡಿ?

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಭೆಯಲ್ಲಿ ಅನುಮೋದನೆಗೊಂಡಿದ್ದ ಬಜೆಟ್‌ನ ಅರ್ಧದಷ್ಟು ಹಣವನ್ನು ನಗರಾಭಿವೃದ್ಧಿ ಇಲಾಖೆ ಕಡಿತಗೊಳಿಸಿದೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಭೆಯಲ್ಲಿ ಅನುಮೋದನೆಗೊಂಡಿದ್ದ ಬಜೆಟ್ ಅರ್ಧದಷ್ಟು ಹಣವನ್ನು ನಗರಾಭಿವೃದ್ಧಿ ಇಲಾಖೆ ಕಡಿತಗೊಳಿಸಿದೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ರಾಜಕೀಯ ಜಗಳದಿಂದ ಬೆಂಗಳೂರಿಗೆ ಮತ್ತೊಮ್ಮೆ ಅನ್ಯಾಯವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಬಿಹಾರದ ಅಭಿವೃದ್ಧಿ: ಸ್ವಾತಂತ್ರ್ಯ ನಂತರದ ಪಕ್ಷಗಳು ಬದಲಾವಣೆ ತರಲಿಲ್ಲ - ನಿತಿನ್ ಗಡ್ಕರಿ..!

ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿರುವ ಅಶೋಕ್, ಜಿಬಿಎ ಸಭೆಯಲ್ಲಿ ಅನುಮೋದನೆಗೊಂಡಿದ್ದ ಬಜೆಟ್ ಅನ್ನೇ ಕೊಡಿಸಲು ಕೈಲಾಗದ ತಮಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ಹಾಜರಾತಿ ಇಲ್ಲದಿದ್ದರೂ ಕಾನೂನು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು; ದೆಹಲಿ ಹೈಕೋರ್ಟ್‌ನ ಮಹತ್ವದ ತೀರ್ಪು

ಅಲ್ಲದೆ, ನಿಮಗೆ ನಿಜವಾಗಿಯೂ ಬೆಂಗಳೂರಿನ ಬಗ್ಗೆ ಬದ್ಧತೆ ಇದ್ದರೆ, ಪೂರ್ತಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿಸಿ ಎಂದು ಆಗ್ರಹಿಸಿದ್ದಾರೆ. ಅನುದಾನ ಕಡಿತದ ನಿರ್ಧಾರವು ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದ್ದು, ಬಗ್ಗೆ ರಾಜಕೀಯ ಜಟಾಪಟಿ ತೀವ್ರಗೊಂಡಿದೆ.SGF11 Women's Kanjivaram Pure Soft Silk Saree With Unstitched Blouse Piece