Skip to main content
ವಿಡಿಯೋ
1/3
cinema

ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಅಶ್ವಿನಿ ಗೌಡ ಹೊರಗೆ! ಎಲಿಮಿನೇಷನ್ ಆಘಾತವೋ ಅಥವಾ ಸೀಕ್ರೆಟ್ ರೂಂ ಟ್ವಿಸ್ಟೋ?

By Ram Chethan
ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಅಶ್ವಿನಿ ಗೌಡ ಹೊರಗೆ!  ಎಲಿಮಿನೇಷನ್ ಆಘಾತವೋ ಅಥವಾ ಸೀಕ್ರೆಟ್ ರೂಂ ಟ್ವಿಸ್ಟೋ?

ಈ ವಾರ ಎಲ್ಲರೂ ನಾಮಿನೇಟ್ ಆಗಿರುವ ನಡುವೆಯೇ, ಬಿಗ್‌ಬಾಸ್ ಮಸಿ ಬಳಿಯುವ ಟಾಸ್ಕ್ ಮೂಲಕ ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಅಶ್ವಿನಿ ಗೌಡ ಸೂಟ್‌ಕೇಸ್ ಜೊತೆ ಮನೆಯಿಂದ ಹೊರಬಂದರೂ, ಅದು ನಿಜವಾದ ಎಲಿಮಿನೇಷನ್‌ನಾ ಅಥವಾ ಸೀಕ್ರೆಟ್ ರೂಂ ಚಾಲೆಂಜ್‌ನಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

ಈ ವಾರ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರೂ ಸುದೀಪ್ ಅವರ ಹೇಳಿಕೆಯಂತೆ ನಾಮಿನೇಟ್ ಆಗಿದ್ದಾರೆ. ಬಿಗ್‌ಬಾಸ್ ಯಾವುದೇ ಟಾಸ್ಕ್‌ ನೀಡದೇ ಇರುವುದರಿಂದ, ಸ್ಪರ್ಧಿಗಳು ತಮ್ಮ ವ್ಯಕ್ತಿತ್ವದಿಂದಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಅನಿರೀಕ್ಷಿತ ಘಟನೆ ಮನೆಮಂದಿಯ ಗಮನ ಸೆಳೆದಿದೆ.

ಸೋಮವಾರದ ಸಂಚಿಕೆಯಲ್ಲಿ, ಬಿಗ್‌ಬಾಸ್ ಸ್ಪರ್ಧಿಗಳಿಗೆ ಅರ್ಹರಲ್ಲದ ಇಬ್ಬರ ಮುಖಕ್ಕೆ ಮಸಿ ಬಳಿಯುವ ಟಾಸ್ಕ್ ನೀಡಿದರು. ಈ ಪ್ರಕ್ರಿಯೆ ಮುಗಿದ ನಂತರ, ಸೂಟ್‌ಕೇಸ್‌ಗಳೊಂದಿಗೆ ಗಾರ್ಡನ್ ಏರಿಯಾಗೆ ಬರುವಂತೆ ಸೂಚಿಸಿದರು. ಎಲ್ಲ ಸ್ಪರ್ಧಿಗಳು ತಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಗಾರ್ಡನ್ ಏರಿಯಾಗೆ ಬಂದರು.Titan Quartz Analog With Date White Dial Gold Metal Strap Watch for Men - NT9264YM01

ಎಲ್ಲರೂ ಗಾರ್ಡನ್ ಏರಿಯಾದಲ್ಲಿ ನಿಂತಿದ್ದಾಗ, ಬಿಗ್‌ಬಾಸ್ ಅಶ್ವಿನಿ ಗೌಡ ಅವರ ಹೆಸರು ಹೇಳಿದರು. ತಕ್ಷಣವೇ ಮನೆಯ ಮುಖ್ಯದ್ವಾರ ತೆರೆದುಕೊಂಡಿತು. ಅಶ್ವಿನಿ ಗೌಡ ಅವರು ಸೂಟ್‌ಕೇಸ್ ಹಿಡಿದುಕೊಂಡು ಹೊರಗೆ ಬರುತ್ತಾರೆ. ಅಶ್ವಿನಿ ಗೌಡ ನಿಜವಾಗಿಯೂ ಮನೆಯಿಂದ ಹೊರಬಂದಿದ್ದಾರೆಯೇ ಅಥವಾ ಸೀಕ್ರೆಟ್ ರೂಂಗೆ ಹೋಗಿದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.ಇದನ್ನು ಓದಿ:ಬಿಗ್ ಬಾಸ್ ಕನ್ನಡ ಸೀಸನ್ 12: ಕಣ್ಣೀರು ತರಿಸಿದ ಮನೆಯವರ ಪತ್ರ! ಆದರೆ ಬಿಗ್ ಬಾಸ್ ಮಾಡಿದ ತೀರ್ಮಾನದಿಂದ ಶಾಕ್!

ಮುಖಕ್ಕೆ ಮಸಿ ಬಳಿಯುವ ಪ್ರಕ್ರಿಯೆಯಲ್ಲಿ ಅಶ್ವಿನಿ ಗೌಡ ಮತ್ತು ರಿಷಾ ಗೌಡ ಅವರ ಮುಖಗಳಿಗೆ ಹೆಚ್ಚು ಕಪ್ಪು ಬಳಿಯಲಾಯಿತು. ಅಶ್ವಿನಿ ಗೌಡ ಅವರು ಮಾತುಗಳನ್ನು ತಿರುಚಿ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಲಾಯಿತು. ರಿಷಾ ಗೌಡ ಅವರಿಂದ ಮನೆಯಲ್ಲಿ ನೆಮ್ಮದಿ ಇಲ್ಲವಾಗಿದೆ ಎಂಬ ಕಾರಣಗಳನ್ನು ನೀಡಲಾಯಿತು.

ಗಿಲ್ಲಿ ನಟನ ಮೇಲೆ ರಿಷಾ ಹಲ್ಲೆ ನಡೆಸಿರುವುದು ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಘಟನೆ ಮನೆಯಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ.