ಮೈಸೂರಿನಲ್ಲಿ, 2018 ಹಾಗೂ 2019 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭವು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವಭವನದಲ್ಲಿ (KSOU) ನಡೆಯಿತು. ಇದೇ ವೇಳೆ ಸಿನಿ ಪ್ರಮುಖರ ಸೇರಿದಂತೆ, ರಾಜಕೀಯ ಗಣ್ಯರ ಸಮಾಗಮದಲ್ಲಿ ಕಾರ್ಯಕ್ರಮವು ನಡೆಯಿತು.
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇನ್ನು ಮುಂದೆ ಪ್ರತೀ ವರ್ಷ ಸಿನಿಮಾಗಳಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಮೈಸೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ನಿರ್ಮಾಣ ಕಾರ್ಯದ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ. The Art of Spending Money – Deluxe Edition: Simple Choices for a Richer Life Hardcover – 7 October 2025
ಚಿತ್ರ ರಸಿಕರು ಸಿನಿಮಾದಲ್ಲಿ ಕಾಣುವಂತೆಯೇ ನಿಜ ಜೀವನದಲ್ಲೂ ನಡೆದುಕೊಳ್ಳಬೇಕೆಂದು ಹೇಳಿದ ಸಿಎಂ, ಡಾ. ರಾಜ್‌ಕುಮಾರ್ ಅವರನ್ನು ಉದಾಹರಿಸಿ, ಜೀವನ ಮೌಲ್ಯ ಹಾಗೂ ಸಿನಿಮಾಯಾನದಲ್ಲಿಯೂ ಸಮತೋಲನ ಕಾಯ್ದುಕೊಳ್ಳುವಂತೆ ಸೂಚಿಸಿದರು ಎನ್ನಲಾಗಿದೆ. ಒಂದೇ ಸೂರಿನಡಿ ಚಿತ್ರರಂಗದ ಘಟಾನುಘಟಿಗಳು ಕಾಣಿಸಿಕೊಂಡಿದ್ದು, ಸಮಾರಂಭದ ಮೆರುಗು ಹೆಚ್ಚಿಸಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಷೇಶ ಗಣ್ಯಾತಿಥಿಗಳ ಉಪಸ್ಥಿತಿಯಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು
ಕೋವಿಡ್ ಹಾಗೂ ಇತರೆ ಕಾರಣಗಳಿಂದ ಐದು ವರ್ಷಗಳ ಕಾಲ ವಿಳಂಬವಾಗಿದ್ದ, ರಾಜ್ಯ ಚಲನಚಿತ್ರ ಪ್ರಶಸ್ತಿಗಳು; 2020 ರಿಂದ 2024ರ ಪ್ರಶಸ್ತಿಗಳನ್ನು ಇನ್ನಷ್ಟೇ ಘೋಷಿಸಬೇಕಿದೆ ಎನ್ನಲಾಗಿದೆ. 2018 ಹಾಗೂ 2019 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸೋಮವಾರ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು. ಹಿರಿಯ ನಟಿ ಉಮಾಶ್ರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಕನ್ನಡ ಚಿತ್ರರಂಗಕ್ಕೆ ವಿಶೇಷ ಕೊಡುಗೆ ನೀಡಿರುವ ರಿಷಬ್ ಶೆಟ್ಟಿ ಅವರಿಗೆ ವಿಶೇಷ ಗೌರವ, ಸೇರಿದಂತೆ ಹಲವರಿಗೆ ಪ್ರಮುಖ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಿನಿ ತಾರೆಯರ ದಂಡು ಸೇರಿತ್ತು. ಹಿರಿಯ ನಟಿ ಉಮಾಶ್ರೀ, ಕಿಚ್ಚ ಸುದೀಪ್, ಅನುಪಮಾಗೌಡ, ತಬಲಾ ನಾಣಿ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಡಾರ್ಲಿಂಗ್ ಕೃಷ್ಣ ಮೇಘನಾರಾಜ್, ವೀಣಾ ಸುಂದರ್, ರವಿ ಬಸೂರ್, ಜಯಂತ್ ಕಾಯ್ಕಿಣಿ, ಹರಿಕೃಷ್ಣ, ರಘು ದೀಕ್ಷಿತ್, ಬರಗೂರು ರಾಮಚಂದ್ರಪ್ಪ, ಪಿ.ಶೇಷಾದ್ರಿ ಸೇರಿದಂತೆ ಚಲನಚಿತ್ರ ರಂಗದ ಪ್ರಮುಖರು, ಹಿರಿಯ-ಕಿರಿಯ ನಟ-ನಟಿಯರು, ನಿರ್ದೇಶಕರು, ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಮಂಡ್ಯ ಡಿಸಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡ ರೈತ ಆತ್ಮಹ**ತ್ಯೆಗೆ ಯತ್ನ: ಭೂ ಸಮಸ್ಯೆ ಪರಿಹಾರವಾಗದಕ್ಕೆ ಮನನೊಂದು ಕೃತ್ಯ!