ಭಾರತದ ಹೃದಯಭಾಗವೆಂದೇ ಕರೆಯಲ್ಪಡುವ ಮಧ್ಯಪ್ರದೇಶ ನೈಸರ್ಗಿಕ ಸೌಂದರ್ಯ, ಪೌರಾಣಿಕ ಸ್ಮಾರಕಗಳು ಮತ್ತು ಸಂಸ್ಕೃತಿಯ ವೈಭವದಿಂದ ತುಂಬಿದ ರಾಜ್ಯ. ಆದರೆ ಇಲ್ಲಿ ಇನ್ನೂ ಬಹುತೇಕ ಜನರಿಗೆ ಪರಿಚಯವಾಗದ ಕೆಲವು ಅಪರೂಪದ ಸ್ಥಳಗಳಿವೆ. ಇವು ಪ್ರಕೃತಿ ಮತ್ತು ಇತಿಹಾಸವನ್ನು ಪ್ರೀತಿಸುವವರಿಗೊಂದು ಅಮೂಲ್ಯ ಅನುಭವ ನೀಡುವ ತಾಣಗಳಾಗಿವೆ.
ಪನ್ನಾದ ಬೃಹಸ್ಪತಿ ಕುಂಡ್ :
ಪನ್ನಾದ ಬೃಹಸ್ಪತಿ ಕುಂಡ್ ಎಂಬುದು ಪ್ರಕೃತಿಯ ಅತ್ಯಂತ ಆಕರ್ಷಕ ಸೃಷ್ಟಿಗಳಲ್ಲಿ ಒಂದು. ಇದು ಒಂದು ಆಳವಾದ ಕಂದರ ಮತ್ತು ಅದ್ಭುತ ಜಲಪಾತದಿಂದ ಕೂಡಿದ್ದು, ದೂರದಿಂದ ನೋಡಿದರೆ ಜ್ವಾಲಾಮುಖಿಯ ಬಾಯಿಯಂತೆಯೇ ಕಾಣಿಸುತ್ತದೆ. ಇಲ್ಲಿ ಸುತ್ತಮುತ್ತಲಿನ ಹಸಿರು ಪರಿಸರ ಮತ್ತು ಶಾಂತ ವಾತಾವರಣ ಮನಸ್ಸಿಗೆ ನೆಮ್ಮದಿ ನೀಡುತ್ತದೆ.Titan Smart 3 Premium Smart Watch|1.96" Super AMOLED Display with 410x502 Pixel Resolution|SingleSync BT Calling|NitroFast Charging|110+ Sports Modes|200+ Watchfaces|Upto 7 Days Battery (Wine Red)
ಶಾಹ್ದೋಲ್‌ನ ಸರ್ಸಿ ಐಲ್ಯಾಂಡ್ ರೆಸಾರ್ಟ್:
ಶಾಹ್ದೋಲ್‌ನ ಸರ್ಸಿ ಐಲ್ಯಾಂಡ್ ರೆಸಾರ್ಟ್ ಪ್ರಕೃತಿ ಪ್ರೇಮಿಗಳು ಹಾಗೂ ವಿಶ್ರಾಂತಿ ಹುಡುಕುವವರಿಗೊಂದು ಪರಿಪೂರ್ಣ ತಾಣ. ನೀರಿನ ಮಧ್ಯದಲ್ಲಿರುವ ಈ ದ್ವೀಪದಂತ ರೆಸಾರ್ಟ್‌ನಲ್ಲಿ ಸಮಯ ಕಳೆಯುವುದು ನಿಜಕ್ಕೂ ವಿಶಿಷ್ಟ ಅನುಭವ. ನಗರದ ಗದ್ದಲದಿಂದ ದೂರವಾದ ಈ ಪ್ರದೇಶದಲ್ಲಿ ಶಾಂತಿ ಮತ್ತು ತಾಜಾತನ ತುಂಬಿಕೊಂಡಿರುತ್ತದೆ.
ಧುಬೇಲಾ ಮ್ಯೂಸಿಯಂ:
ಧುಬೇಲಾ ಮ್ಯೂಸಿಯಂ ಅಥವಾ ಮಹಾರಾಜ ಛತ್ರಸಾಲ ಮ್ಯೂಸಿಯಂ, ಬುಂದೇಲಾ ರಾಜವಂಶದ ವೈಭವವನ್ನು ಜೀವಂತವಾಗಿ ಪ್ರದರ್ಶಿಸುತ್ತದೆ. ಹಳೆಯ ಶಸ್ತ್ರಾಸ್ತ್ರಗಳು, ಮೂರ್ತಿಗಳು, ಚಿತ್ರಗಳು ಹಾಗೂ ರಾಜವಂಶದ ಕಥೆಗಳು ಇಲ್ಲಿ ಸಂಗ್ರಹವಾಗಿವೆ. ಇತಿಹಾಸ ಪ್ರಿಯರಿಗೆ ಇದು ಒಮ್ಮೆ ತಪ್ಪದೆ ನೋಡಬೇಕಾದ ಸ್ಥಳ.ಡುಬ್ರೊವ್ನಿಕ್‌ನಲ್ಲಿ ಸೂರ್ಯನ ಶಾಖ, ಖಾಸಗಿ ಬೀಚ್ ಮತ್ತು ಲಕ್ಷುರಿ ! ವಾಲ್ಮಾರ್ ಪ್ರೆಸಿಡೆಂಟ್ ಹೋಟೆಲ್‌ಗಾಗಿ ಪ್ರಯಾಣಿಸಿ
ರಾಣೆಹ್ ಜಲಪಾತ:
ರಾಣೆಹ್ ಜಲಪಾತ, ಖಜುರಾಹೋ ಬಳಿಯ ಕೇನ್ ನದಿಯಿಂದ ನಿರ್ಮಿತವಾದ ಒಂದು ವಿಶಿಷ್ಟ ನೈಸರ್ಗಿಕ ತಾಣ. ಬಣ್ಣ ಬಣ್ಣದ ಶಿಲೆಗಳು ಮತ್ತು ಆಳವಾದ ಕಂದರಗಳು ಈ ಸ್ಥಳವನ್ನು “ಮಧ್ಯಪ್ರದೇಶದ ಗ್ರ್ಯಾಂಡ್ ಕ್ಯಾನ್ಯನ್” ಎಂದು ಕರೆಯಲು ಕಾರಣವಾಗಿವೆ. ಮಳೆಗಾಲದಲ್ಲಿ ಇಲ್ಲಿ ನೀರಿನ ಹೊಳೆಯು ತೀವ್ರವಾಗಿ ಹರಿದು ನೋಟಕ್ಕೆ ಮನಮೋಹಕವಾಗುತ್ತದೆ.
ಕೂನೋ-ಪಾಲ್ಪುರ್ ವನ್ಯಜೀವಿ ಅಭಯಾರಣ್ಯ:
ಕೂನೋ-ಪಾಲ್ಪುರ್ ವನ್ಯಜೀವಿ ಅಭಯಾರಣ್ಯ, ಭಾರತದಲ್ಲಿ ಆಫ್ರಿಕನ್ ಚೀತಾಗಳಿಗೆ ಹೊಸ ಮನೆ ನೀಡಿರುವ ಪ್ರಖ್ಯಾತ ಸ್ಥಳವಾಗಿದೆ. ಸುಮಾರು 70 ವರ್ಷಗಳ ನಂತರ ಚೀತಾಗಳು ಮತ್ತೆ ಭಾರತೀಯ ಮಣ್ಣಿಗೆ ಕಾಲಿಟ್ಟಿದ್ದು, ಈ ಪ್ರದೇಶ ವನ್ಯಜೀವಿ ಸಂರಕ್ಷಣೆಗೆ ಪ್ರಮುಖ ತಾಣವಾಗಿದೆ.
ಮುಕುಂದ್‌ಪುರ ವೈಟ್ ಟೈಗರ್ ಸಫಾರಿ:
ಮುಕುಂದ್‌ಪುರ ವೈಟ್ ಟೈಗರ್ ಸಫಾರಿ ವಿಶ್ವದ ಏಕೈಕ ಬಿಳಿ ಹುಲಿ ಸಫಾರಿಯಾಗಿದ್ದು, ಪ್ರಕೃತಿ ಮತ್ತು ಪ್ರಾಣಿಪ್ರಿಯರಿಗೆ ರೋಮಾಂಚನಕಾರಿ ಅನುಭವ ನೀಡುತ್ತದೆ. ಈ ಪ್ರದೇಶದಲ್ಲಿಯೇ ಭಾರತದ ಮೊದಲ ಬಿಳಿ ಹುಲಿ ಕಂಡುಬಂದಿತ್ತು ಎಂಬುದೇ ಇದರ ವಿಶೇಷತೆ.
ಘುಘ್ವಾ ಫಾಸಿಲ್ ಪಾರ್ಕ್:
ಘುಘ್ವಾ ಫಾಸಿಲ್ ಪಾರ್ಕ್ (ಮಂಡ್ಲಾ ಜಿಲ್ಲೆ) ಭಾರತದಲ್ಲಿ ಅತ್ಯಂತ ಹಳೆಯ ಫಾಸಿಲ್‌ಗಳನ್ನು ಸಂಗ್ರಹಿಸಿರುವ ಪುರಾತನ ಪಾರ್ಕ್. ಇಲ್ಲಿ ಲಕ್ಷಾಂತರ ವರ್ಷಗಳ ಹಳೆಯ ಗಿಡಮೂಲಗಳು ಮತ್ತು ಜೀವಿಗಳ ಅವಶೇಷಗಳನ್ನು ನೋಡಬಹುದು. ಇತಿಹಾಸ ಹಾಗೂ ವಿಜ್ಞಾನ ಪ್ರೇಮಿಗಳಿಗೆ ಇದು ಅಚ್ಚರಿ ಉಂಟುಮಾಡುವ ಸ್ಥಳ.
ಉದಯಗಿರಿ ಗುಹೆಗಳು:
ಉದಯಗಿರಿ ಗುಹೆಗಳು, ವಿದಿಶಾದ ಸಮೀಪವಿರುವ ಪೌರಾಣಿಕ ಸ್ಮಾರಕಗಳ ಸಂಕೀರ್ಣ. ಇಲ್ಲಿ ಹಿಂದೂ, ಜೈನ ಹಾಗೂ ಬೌದ್ಧ ಧರ್ಮಗಳ ಪುರಾತನ ಶಿಲ್ಪಗಳು ಮತ್ತು ಶಿಲಾಲೇಖನಗಳಿವೆ. ಈ ಗುಹೆಗಳು ಕ್ರಿ.ಶ. 5ನೇ ಶತಮಾನದ ಇತಿಹಾಸವನ್ನು ಹೇಳುತ್ತವೆ. ಪುರಾತತ್ವ ಪ್ರೇಮಿಗಳಿಗೆ ಇದು ನಿಜವಾದ ಖಜಾನೆ.
ಮಧ್ಯಪ್ರದೇಶವು ಖಜುರಾಹೋ ದೇವಸ್ಥಾನಗಳು ಅಥವಾ ಸಾಂಚಿ ಸ್ತೂಪಗಳಷ್ಟೇ ಅಲ್ಲ, ಇಂತಹ ಅಪರೂಪದ ಸೌಂದರ್ಯಗಳೂ ಹೊಂದಿರುವ ರಾಜ್ಯ. ಪ್ರಕೃತಿ, ಇತಿಹಾಸ ಮತ್ತು ಸಂಸ್ಕೃತಿಯ ಸಂಯೋಜನೆಯನ್ನು ಹುಡುಕುವವರು ಈ ಸ್ಥಳಗಳನ್ನು ಒಮ್ಮೆ ಭೇಟಿನೀಡಲೇಬೇಕು.