Skip to main content
ವಿಡಿಯೋ
1/3
general

ಬಿಹಾರ ಚುನಾವಣೆ: ತೇಜಸ್ವಿ ಯಾದವ್‌ರ 'ಮಾಯಿ-ಬೆಹನ್‌' ಮಹಾಘೋಷಣೆ; ಮಹಿಳೆಯರಿಗೆ ₹30,000, ರೈತರಿಗೆ ಉಚಿತ ವಿದ್ಯುತ್!

By Vinutha U
ಬಿಹಾರ ಚುನಾವಣೆ: ತೇಜಸ್ವಿ ಯಾದವ್‌ರ 'ಮಾಯಿ-ಬೆಹನ್‌' ಮಹಾಘೋಷಣೆ; ಮಹಿಳೆಯರಿಗೆ ₹30,000, ರೈತರಿಗೆ ಉಚಿತ ವಿದ್ಯುತ್!

ನಾವು ರೈತರಿಗೆ ನೀರಾವರಿ ಉದ್ದೇಶಗಳಿಗಾಗಿ ಸಂಪೂರ್ಣ ಉಚಿತ ವಿದ್ಯುತ್ ನೀಡುತ್ತೇವೆ. ಎಲ್ಲಾ ಪ್ರಾಥಮಿಕ ಕೃಷಿ ಸಾಲ ಸಂಘಗಳು ಹಾಗೂ ಪ್ರಾಥಮಿಕ ಮಾರುಕಟ್ಟೆ ಸಹಕಾರ ಸಂಘಗಳ ಮುಖ್ಯಸ್ಥರಿಗೆ ಜನಪ್ರತಿನಿಧಿಗಳ ಸ್ಥಾನಮಾನ ನೀಡಲಾಗುವುದು.

ಚುನಾವಣೆ ನಡೆಯುತ್ತಿರುವ ಬಿಹಾರದಲ್ಲಿ ಗ್ಯಾರಂಟಿ ಮತ್ತು ಉಚಿತ ಕೊಡುಗೆಗಳ ಭರವಸೆಗಳ ಪೈಪೋಟಿ ತಾರಕಕ್ಕೇರಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದ ₹10,000 ಮಹಿಳಾ ಯೋಜನೆಗೆ ಪ್ರತಿಯಾಗಿ, ವಿಪಕ್ಷದ 'ಇಂಡಿಯಾ' ಕೂಟದ ಸಿಎಂ ಅಭ್ಯರ್ಥಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಬೃಹತ್ ಘೋಷಣೆ ಮಾಡಿದ್ದಾರೆ.

ತಮ್ಮ 'ಮಾಯಿ-ಬೆಹನ್‌' ಯೋಜನೆಯಡಿ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದ ಮಹಿಳೆಯರಿಗೆ ಒಂದೇ ಕಂತಿನಲ್ಲಿ ₹30,000 ನೀಡುವುದಾಗಿ ತೇಜಸ್ವಿ ಯಾದವ್ ಘೋಷಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್ ಅವರು ನೀಡಿದ ಭರವಸೆಗಳು ಮತ್ತು ಅವುಗಳ ವಿವರಗಳು ಇಲ್ಲಿವೆ:

"ಮಾಯಿ-ಬೆಹನ್‌ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ₹2,500 ವರ್ಗಾಯಿಸುವುದಾಗಿ ನಾವು ಈಗಾಗಲೇ ಭರವಸೆ ನೀಡಿದ್ದೇವೆ." ಬಿಲಾಸ್‌ಪುರ ರೈಲು ದುರಂತ: 8 ಮಂದಿ ಸಾವು, ಚಾಲಕನ ನಿರ್ಲಕ್ಷ್ಯವೇ ಕಾರಣ?

"ನಾವು ಅಧಿಕಾರಕ್ಕೆ ಬಂದರೆ, ಮುಂದಿನ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಸಂದರ್ಭದಲ್ಲಿ, ಈ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗಳಿಗೆ ಇಡೀ ವರ್ಷಕ್ಕೆ ಆಗುವ ₹30,000 ಗಳನ್ನು ಮುಂಗಡವಾಗಿ (ಒಂದೇ ಕಂತಿನಲ್ಲಿ) ವರ್ಗಾಯಿಸಲಿದ್ದೇವೆ."

ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತ (MSP) ಹೆಚ್ಚುವರಿಯಾಗಿ ಬೋನಸ್ ರೂಪದಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ ₹300 ಮತ್ತು ಗೋಧಿಗೆ ₹400 ನೀಡಲಾಗುವುದು. ಪ್ರಸ್ತುತ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಪ್ರತಿ ಯೂನಿಟ್‌ಗೆ ₹0.55 ದರ ವಿಧಿಸುತ್ತಿದೆ. Shining Diva Fashion Crystal Tiara and Crown for Women Stylish Headband Crowns with Comb Tiaras for Girls Kids Queen Princess Wedding Bridal Birthday Gift Hair Accessories

ನಾವು ರೈತರಿಗೆ ನೀರಾವರಿ ಉದ್ದೇಶಗಳಿಗಾಗಿ ಸಂಪೂರ್ಣ ಉಚಿತ ವಿದ್ಯುತ್ ನೀಡುತ್ತೇವೆ. ಎಲ್ಲಾ ಪ್ರಾಥಮಿಕ ಕೃಷಿ ಸಾಲ ಸಂಘಗಳು ಹಾಗೂ ಪ್ರಾಥಮಿಕ ಮಾರುಕಟ್ಟೆ ಸಹಕಾರ ಸಂಘಗಳ ಮುಖ್ಯಸ್ಥರಿಗೆ ಜನಪ್ರತಿನಿಧಿಗಳ ಸ್ಥಾನಮಾನ ನೀಡಲಾಗುವುದು.