Skip to main content
ವಿಡಿಯೋ
1/2
sports

🎂 'ಕಿಂಗ್‌' ವಿರಾಟ್‌ ಕೊಹ್ಲಿಗೆ 37ನೇ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ!

By Gireesh Vasishta
🎂 'ಕಿಂಗ್‌' ವಿರಾಟ್‌ ಕೊಹ್ಲಿಗೆ 37ನೇ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ!

ಆರ್‌ಸಿಬಿ: "ವಿಶ್ವ ಕ್ರಿಕೆಟ್‌ನ ಅತ್ಯಂತ ನಿರ್ಭೀತ ಆಟಗಾರರಲ್ಲಿ ಒಬ್ಬರಾದ 'ನಮ್ಮ ವಿರಾಟ ರಾಜ'ನಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ವಿಶೇಷ ವಿಡಿಯೋದೊಂದಿಗೆ ಶುಭ ಕೋರಿದೆ.

ನವದೆಹಲಿ: ಭಾರತೀಯ ಕ್ರಿಕೆಟ್ ದಂತಕಥೆ ಹಾಗೂ ವಿಶ್ವಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರು ಇಂದು (ನವೆಂಬರ್ 5, 2025) ತಮ್ಮ 37ನೇ ವಸಂತಕ್ಕೆ ಕಾಲಿರಿಸಿದ್ದಾರೆ. ರನ್ಮೆಷಿನ್‌, ಚೇಸ್ಮಾಸ್ಟರ್ಎಂದೇ ಖ್ಯಾತಿ ಪಡೆದಿರುವ 'ಕಿಂಗ್ಕೊಹ್ಲಿ' ಅವರ ಜನ್ಮದಿನದ ಪ್ರಯುಕ್ತ ಕ್ರಿಕೆಟ್ಜಗತ್ತಿನಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.YOHO Bubbles Men Ortho slippers | Soft comfortable and stylish flip flop slippers for Men in exciting colors

🏏 ಕ್ರಿಕೆಟ್ಲೋಕದಿಂದ ಶುಭಾಶಯ-

ಬಿಸಿಸಿಐ: "ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್‌ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಟ್ವೀಟ್‌ ಮಾಡಿದೆ.

ಆರ್ಸಿಬಿ: "ವಿಶ್ವ ಕ್ರಿಕೆಟ್ ಅತ್ಯಂತ ನಿರ್ಭೀತ ಆಟಗಾರರಲ್ಲಿ ಒಬ್ಬರಾದ 'ನಮ್ಮ ವಿರಾಟ ರಾಜ'ನಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ವಿಶೇಷ ವಿಡಿಯೋದೊಂದಿಗೆ ಶುಭ ಕೋರಿದೆ.

ಮಾಜಿ ಆಟಗಾರರು: ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಸೇರಿದಂತೆ ಹಲವು ದಿಗ್ಗಜರು ಕೊಹ್ಲಿಯವರ ದಾಖಲೆಗಳು ಮತ್ತು ಸಾಧನೆಗಳನ್ನು ಸ್ಮರಿಸಿ ಶುಭ ಹಾರೈಸಿದ್ದಾರೆ.ಇದನ್ನು ಓದಿ; ಪ್ರಧಾನಿ ಮೋದಿಯಿಂದ ಕಾರ್ತಿಕ ಪೂರ್ಣಿಮಾ, ದೇವ ದೀಪಾವಳಿ ಶುಭಾಶಯ: ಸಂದೇಶದ ಸಾರಾಂಶ ಹೀಗಿದೆ

🏅 ದಾಖಲೆಗಳ ಸರದಾರ ಕಿಂಗ್ ಕೊಹ್ಲಿ- ನವೆಂಬರ್ 5, 1988 ರಂದು ನವದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ, ಕಠಿಣ ಪರಿಶ್ರಮ ಮತ್ತು ಆಕ್ರಮಣಕಾರಿ ಆಟದ ಶೈಲಿಯಿಂದ ವಿಶ್ವ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

ಇವರು ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 80 ಶತಕಗಳು ಸೇರಿದಂತೆ ಹಲವು ಪ್ರಮುಖ ದಾಖಲೆಗಳನ್ನು ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು (50 ಶತಕಗಳು) ಗಳಿಸಿದ ದಾಖಲೆ ಇವರ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕರಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ. ವಿರಾಟ್ಕೊಹ್ಲಿ ಅವರು ಇಂದು (ನವೆಂಬರ್ 5, 2025) ತಮ್ಮ 37ನೇ ವರ್ಷಕ್ಕೆ ಕಾಲಿರಿಸಿದ್ದು, ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ.