Skip to main content
ವಿಡಿಯೋ
1/3
entertainment

ʼಡೆವಿಲ್‌ʼನಲ್ಲಿ ಗಿಲ್ಲಿ ನಟನ ಸರ್ಪ್ರೈಸ್‌ ಎಂಟ್ರಿ...ದರ್ಶನ್‌ ಸಿನಿಮಾದಲ್ಲಿ ದೊಡ್ಡ ಪಾತ್ರ! ಈ ಸುದ್ದಿ ನಿಜನಾ?

By Ram Chethan
ʼಡೆವಿಲ್‌ʼನಲ್ಲಿ ಗಿಲ್ಲಿ ನಟನ ಸರ್ಪ್ರೈಸ್‌ ಎಂಟ್ರಿ...ದರ್ಶನ್‌ ಸಿನಿಮಾದಲ್ಲಿ ದೊಡ್ಡ ಪಾತ್ರ! ಈ ಸುದ್ದಿ ನಿಜನಾ?

BBK 12ರಲ್ಲಿ ಮಿಂಚುತ್ತಿರುವ ಗಿಲ್ಲಿ ನಟ, ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್ ಬಿಡುಗಡೆಯಿಂದ ಅಭಿಮಾನಿಗಳಲ್ಲಿ ಹೈಪ್ ಹೆಚ್ಚಾಗಿದ್ದು, ಸಿನಿಮಾ ಡಿಸೆಂಬರ್ 12ರಂದು ತೆರೆಗೆ ಬರಲು ಸಿದ್ಧವಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಜನಪ್ರಿಯ ಸ್ಪರ್ಧಿ ಗಿಲ್ಲಿ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ಡೆವಿಲ್' ಚಿತ್ರದಲ್ಲಿ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುದ್ದಿ ಗಿಲ್ಲಿ ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ. ಡಿಸೆಂಬರ್ 12ರಂದು ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯ ಪ್ರಜ್ಞೆ ಮತ್ತು ಸ್ಪಷ್ಟ ಮಾತುಗಳಿಂದ ಗಮನ ಸೆಳೆಯುತ್ತಿರುವ ಗಿಲ್ಲಿ, ರಿಯಾಲಿಟಿ ಶೋನಲ್ಲಿ ಮಿಂಚುತ್ತಿರುವಾಗಲೇ, ಅವರ ಚಿತ್ರದ ಕುರಿತಾದ ಈ ರೋಮಾಂಚಕಾರಿ ಮಾಹಿತಿ ಹೊರಬಿದ್ದಿದೆ. 'ಡೆವಿಲ್' ಚಿತ್ರತಂಡ ಗಿಲ್ಲಿಯ ವಿಭಿನ್ನ ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದೆ.Titan Zeal 1.85" AMOLED Metal Case Smart Watch with BT Calling, SpO2, 100+ Sports Modes, Auto Sports Recognition, Fast Charging Smartwatch for Men & Women with – Brown Leather Strap (Rose Gold)

ಕಳೆದ ವರ್ಷ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧಿತರಾಗಿ ಜೈಲು ಸೇರಿದ್ದರು. ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿದ್ದರೂ, ಸುಪ್ರೀಂ ಕೋರ್ಟ್ ಆದೇಶದಂತೆ ಅವರು ಮತ್ತೆ ಜೈಲು ಪಾಲಾಗಬೇಕಾಯಿತು. ಆದರೆ, ಅದೃಷ್ಟವಶಾತ್, ದರ್ಶನ್ 'ಡೆವಿಲ್' ಚಿತ್ರದ ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸಗಳನ್ನು ಅದಕ್ಕೂ ಮೊದಲೇ ಪೂರ್ಣಗೊಳಿಸಿದ್ದರು.ಗಿಲ್ಲಿ ಮೇಲಾಯ್ತು..ಈಗ ಸೂರಜ್‌ ಮೇಲೆ ತಿರುಗಿದ ರಿಷಾ ಜಗಳ! ಬಿಗ್‌ಬಾಸ್‌ ಮನೆಯಲ್ಲಿ ಬಿಸಿ ವಾತಾವರಣ!

ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಈ ಹಂತದಲ್ಲಿ, ಚಿತ್ರದಲ್ಲಿ ನಟಿಸಿದ ಕಲಾವಿದರ ಪೋಸ್ಟರ್‌ಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ. ಗಿಲ್ಲಿ ನಟನ ಪೋಸ್ಟರ್‌ನಲ್ಲಿ ಅವರು ಫುಲ್ ಸ್ಲೀವ್ ಶರ್ಟ್, ಟೈ ಧರಿಸಿ ಗಂಭೀರ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಚಿತ್ರದಲ್ಲಿ ಅವರು ವಿಶೇಷ ಮತ್ತು ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸುಳಿವು ನೀಡಿದೆ ಎಂದು ಚಿತ್ರತಂಡ ತಿಳಿಸಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಪತಿಯ ಚಿತ್ರದ ಪೋಸ್ಟರ್‌ಗಳು ಮತ್ತು ಹಾಡುಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರಚಾರಕ್ಕೆ ಕೈಜೋಡಿಸಿದ್ದಾರೆ. 'ಡೆವಿಲ್' ಆಗಿ ತೆರೆ ಮೇಲೆ ಬರಬೇಕಿದ್ದ ದರ್ಶನ್, ಅನಿರೀಕ್ಷಿತವಾಗಿ ಆರೋಪಿಯಾಗಿ ಜೈಲು ಸೇರಿ ಸಂಕಷ್ಟ ಎದುರಿಸುತ್ತಿದ್ದಾರೆ. ಕುಟುಂಬಸ್ಥರನ್ನೂ ಭೇಟಿ ಮಾಡಲು ಸಾಧ್ಯವಾಗದ ಈ ಪರಿಸ್ಥಿತಿ, ಅವರ ಸಿನಿ ಜೀವನದ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.