ಪಾಕಿಸ್ತಾನದ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂಕೋರ್ಟ್‌ನ ನೆಲಮಾಳಿಗೆಯಲ್ಲಿ, ಸಿಲಿಂಡರ್ ಸ್ಪೋಟವಾಗಿರುವ ಸುದ್ದಿ ವರದಿಯಾಗಿದೆ. ಘಟನೆ ಬಳಿಕ, 12 ಮಂದಿಗೆ ಗಾಯವಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ, ಅಲ್ಲಿನ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಕಟ್ಟೆಚರದಲ್ಲಿರಿಸಲಾಗಿದೆ ಎನ್ನಲಾಗಿದೆ.
ತಾಂತ್ರಿಕ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ, ಅಲ್ಲಿನ ತಳಅಂತಸ್ತಿನಲ್ಲಿರುವ ಹವಾನಿಯಂತ್ರಣ (ಏರ್‌ಕಂಡೀಷನರ್) ಅನಿಲ ಸ್ಥಾವರದ ಬಳಿ ಸ್ಫೋಟ ಸಂಭವಿಸಿದೆ. ಅನಿಲ ಸೋರಿಕೆಯಿಂದಾಗಿ, ಸ್ಪೋಟಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗಪಡಿಸಲಾಗಿದೆ. How to Win Friends and Influence People : Original Edition | Premium Paperback Paperback – 12 October 2020
ಅದಾದರೂ, ಪ್ರತ್ಯಕ್ಷದರ್ಶಿಗಳು ಹೇಳಿರುವ ಹಾಗೆ, ಅಲ್ಲಿನ ಕ್ಯಾಂಟೀನ್ ಬಳಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಕಾರಣ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ನ್ಯಾಯಾಲಯದ ಕೆಲ ಸಂಕೀರ್ಣ ಭಾಗಗಳು ಹಾನಿಗೊಂಡಿದ್ದು, ಹಲವಾರು ಉದ್ಯೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿಸಲಾಗಿದೆ.
ಗಾಬರಿಗೊಂಡ ನ್ಯಾಯಾಲಯದ ಸಿಬ್ಬಂದಿ ಹೊರನಡೆದಿದ್ದು, ಸ್ಪೋಟದ ಭೀಕರತೆಗೆ ಸುತ್ತಮುತ್ತಲಿನವರು ಭಯಭೀತರಾಗಿ ಓಡಿಹೋಗಿದ್ದಾರೆ. ಸ್ಥಳಕ್ಕೆ ಭದ್ರತಾ ಪಡೆಗಳು ತಕ್ಷಣ ಧಾವಿಸಿದರು. ನ್ಯಾಯಾಲಯದ ಪ್ರದೇಶವನ್ನು ಮುಚ್ಚಲಾಗಿದ್ದು, ಇದು ಭಯೋತ್ಪಾದಕ ದಾಳಿಯಲ್ಲವೆಂದು ಹೇಳಿವೆ. ಇದು ಬಾಂಬ್ ಸ್ಪೋಟವಲ್ಲ ಬದಲಾಗಿ ತಾಂತ್ರಿಕ ದೋಷದಿಂದುಂಟಾದ ಕೈಗಾರಿಕಾ ಅಪಘಾತವೆನ್ನಲಾಗಿದೆ. ಇದನ್ನೂ ಓದಿ: ₹100 ಕೋಟಿ ಭ್ರಷ್ಟಾಚಾರದ ಪ್ರಕರಣದಲ್ಲಿ ಉತ್ತರ ಪ್ರದೇಶದ ಟಾಪ್ ಪೊಲೀಸ್ ಅಧಿಕಾರಿ ಅಮಾನತು