Skip to main content
ವಿಡಿಯೋ
1/3
politics

ರಾಹುಲ್ ಗಾಂಧಿ ‘ಹೈಡ್ರೋಜನ್ ಬಾಂಬ್’ ಸುದ್ದಿಗೋಷ್ಠಿ: ಚುನಾವಣಾ ಆಯೋಗ-ಬಿಜೆಪಿ ಸಂಚು ಆರೋಪಕ್ಕೆ ಬೃಹತ್ ಸಾಕ್ಷ್ಯ..!!

By Pavitra Ganapathi Baradavalli
ರಾಹುಲ್ ಗಾಂಧಿ ‘ಹೈಡ್ರೋಜನ್ ಬಾಂಬ್’ ಸುದ್ದಿಗೋಷ್ಠಿ: ಚುನಾವಣಾ ಆಯೋಗ-ಬಿಜೆಪಿ ಸಂಚು ಆರೋಪಕ್ಕೆ ಬೃಹತ್ ಸಾಕ್ಷ್ಯ..!!

ಲೋಕಸಭಾ ವಿರೋಧಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ನವದೆಹಲಿ: ಲೋಕಸಭಾ ವಿರೋಧಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕಾಂಗ್ರೆಸ್ ಗೋಷ್ಠಿಯನ್ನುಹೈಡ್ರೋಜನ್ ಬಾಂಬ್ಎಂದು ಕರೆದಿದ್ದು, ಚುನಾವಣಾ ಆಯೋಗದೊಂದಿಗೆ ಬಿಜೆಪಿ ನಡೆಸಿದ್ದಾದ ಕೂಟ ಆರೋಪಕ್ಕೆ ಬೃಹತ್ ಸಾಕ್ಷ್ಯಗಳನ್ನು ಬಿಚ್ಚಿಡಲಾಗುವುದು ಎಂದು ಪಕ್ಷ ಸೂಚಿಸಿದೆ.ಇದನ್ನೂ ಓದಿ: ರಾಹುಲ್ 'ವೋಟ್ ಚೋರಿ' ಬಾಂಬ್: ಬಿಜೆಪಿ ಕಂಪಿಸಿದೆ, ಸಿದ್ದು ಕೇಸರಿ ಕಾಲುಮುರಿಯಲು ಸಿದ್ಧ..!

ಹಿಂದಿನ ಎರಡು ಸುದ್ದಿಗೋಷ್ಠಿಗಳಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಮತ್ತು ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿ, ಕೆಲವು ದಾಖಲೆಗಳನ್ನು ಬಿಡುಗಡೆಗೊಳಿಸಿದ್ದರು. ಆದರೆ ಮಹದೇವಪುರದ ದಾಖಲೆ ಕೇವಲ ಆಟಂ ಬಾಂಬ್ ಆಗಿದ್ದು, ಇದೀಗ ಬರುತ್ತಿರುವುದು ನಿಜವಾದಹೈಡ್ರೋಜನ್ ಬಾಂಬ್ಎಂದು ಅವರು ಹೇಳಿದ್ದರು.ಇದನ್ನೂ ಓದಿ: ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳು ಹೆಚ್ಚಳ: ಗೊಂದಲ ಇಲ್ಲ ಎಂದ ಎಚ್.ಸಿ. ಬಾಲಕೃಷ್ಣ..!

ಬಿಹಾರದಲ್ಲಿ ನಾಳೆ ಮೊದಲ ಹಂತದ ಮತದಾನ ನಡೆಯಲಿರುವ ಹೊತ್ತಿನಲ್ಲಿ ಸುದ್ದಿಗೋಷ್ಠಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಸಂವಿಧಾನವನ್ನೇ ನಾಶಪಡಿಸಲು ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ಸಿದ್ಧತೆಯ ಛಾಯಾಚಿತ್ರಗಳನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೇದಿಕೆ ಮೇಲೆ ದಾಖಲೆಗಳ ದೊಡ್ಡ ರಾಶಿಯನ್ನು ಇರಿಸಲಾಗಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece