Skip to main content
ವಿಡಿಯೋ
1/2
general

ರಾಹುಲ್ ಗಾಂಧಿ ಆರೋಪಗಳು 'ಸುಳ್ಳು, ಆಧಾರರಹಿತ': ಆಕ್ರೋಶ ವ್ಯಕ್ತಪಡಿಸಿದ ಚುನಾವಣಾ ಆಯೋಗ!

By Vinutha U
ರಾಹುಲ್ ಗಾಂಧಿ ಆರೋಪಗಳು 'ಸುಳ್ಳು, ಆಧಾರರಹಿತ': ಆಕ್ರೋಶ ವ್ಯಕ್ತಪಡಿಸಿದ ಚುನಾವಣಾ ಆಯೋಗ!

ಚುನಾವಣೆ ಸಂದರ್ಭದಲ್ಲಿ ಜನಸಾಮಾನ್ಯರನ್ನು ಭೇಟಿಯಾಗುವ ಬದಲು ರಾಹುಲ್ ವಿದೇಶಕ್ಕೆ ಹೋಗುತ್ತಾರೆ, ಮತ್ತು ಪಕ್ಷ ಸೋತಾಗ ಚುನಾವಣಾ ಅಕ್ರಮದ ಸುಳ್ಳು ಆರೋಪ ಮಾಡುತ್ತಾರೆ.

ನವದೆಹಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮತಗಳವು ನಡೆದಿದೆ ಎಂಬ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಗಂಭೀರ ಆರೋಪವನ್ನು ಚುನಾವಣಾ ಆಯೋಗ (ECI) ಮತ್ತು ಬಿಜೆಪಿ ಸ್ಪಷ್ಟವಾಗಿ ನಿರಾಕರಿಸಿವೆ. ರಾಹುಲ್ ಅವರ ಆರೋಪವು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಎಂದು ಬಿಜೆಪಿ ಹೇಳಿದ್ದರೆ, ಚುನಾವಣಾ ಆಯೋಗವು ಕಾಂಗ್ರೆಸ್‌ನ ನಿಷ್ಕ್ರಿಯತೆಯನ್ನು ಪ್ರಶ್ನಿಸಿದೆ. "2024ರಲ್ಲಿ ಚುನಾವಣೆ ನಡೆದಾಗ ಹರ್ಯಾಣ ಮತದಾರರ ಪಟ್ಟಿ ಕುರಿತು ಕಾಂಗ್ರೆಸ್ ಏಕೆ ಯಾವುದೇ ಆಕ್ಷೇಪ ಎತ್ತಿರಲಿಲ್ಲ? ಈಗ ಏಕೆ ಎತ್ತುತ್ತಿದೆ?" ಎಂದು ಆಯೋಗ ಸ್ಪಷ್ಟವಾಗಿ ಕೇಳಿದೆ.

ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ಪ್ರಕಟವಾಗಿದ್ದರೂ ಸಹ, ಮತದಾನ ಕೇಂದ್ರದಲ್ಲಿದ್ದ ಕಾಂಗ್ರೆಸ್‌ನ ಬೂತ್ ಏಜೆಂಟರು ಏಕೆ ಆ ಸಂದರ್ಭದಲ್ಲಿ ಆಕ್ಷೇಪಿಸಲಿಲ್ಲ? ಎರಡನೇ ಬಾರಿ ಮತದಾನದ ಬಗ್ಗೆ ಅನುಮಾನಗಳಿದ್ದರೆ ಆಗಲೇ ಆಕ್ಷೇಪಣೆ ಎತ್ತಲು ಅವಕಾಶವಿತ್ತು."ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ 22 ಸಲ ಮತದಾನ ಮಾಡಿದ್ದಾನೆ ಎಂದು ರಾಹುಲ್ ಆರೋಪಿಸಿದ್ದಾರೆ. ಅದು ಹೇಗೆ ಸಾಧ್ಯ?" ಎಂದು ಆಯೋಗ ಪ್ರಶ್ನಿಸಿದೆ. ಅಲ್ಲದೆ, ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕೂಡ ಎರಡು ಮತದಾರ ಚೀಟಿ ಹೊಂದಿದ್ದರು. ಹಾಗಿದ್ದರೆ ಅವರು ಎರಡು ಕಡೆ ಮತದಾನ ಮಾಡಿದಂತೆಯೇ? ಎಂದೂ ಆಯೋಗ ಮರುಪ್ರಶ್ನಿಸಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ:

"ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಹುಲ್ ಗಾಂಧಿ ಅವರು ದೇಶದ ಪ್ರಜಾಪ್ರಭುತ್ವದ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತ ವಿರೋಧಿ ಶಕ್ತಿಗಳೊಂದಿಗೆ ಸೇರಿಕೊಂಡು ದೇಶದ ಹೆಸರು ಹಾಳು ಮಾಡಲು ಆಟವಾಡುತ್ತಿದ್ದಾರೆ," ಎಂದು ಆರೋಪಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನಸಾಮಾನ್ಯರನ್ನು ಭೇಟಿಯಾಗುವ ಬದಲು ರಾಹುಲ್ ವಿದೇಶಕ್ಕೆ ಹೋಗುತ್ತಾರೆ, ಮತ್ತು ಪಕ್ಷ ಸೋತಾಗ ಚುನಾವಣಾ ಅಕ್ರಮದ ಸುಳ್ಳು ಆರೋಪ ಮಾಡುತ್ತಾರೆ. Shining Diva Fashion Crystal Tiara and Crown for Women Stylish Headband Crowns with Comb Tiaras for Girls Kids Queen Princess Wedding Bridal Birthday Gift Hair Accessories

ಮತದಾನದಲ್ಲಿ ಯಾವುದೇ ಅಕ್ರಮ ನಡೆದಿದ್ದರೆ, ಅವರು ಚುನಾವಣಾ ಆಯೋಗ ಅಥವಾ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ರಾಹುಲ್ ಗಾಂಧಿ ಯಾವತ್ತೂ ಆ ರೀತಿ ಮಾಡುವುದಿಲ್ಲ.ಬಿಜೆಪಿ ವಕ್ತಾರೆ ರಾಧಿಕಾ ಖೇರಾ ಅವರು ವೈಯಕ್ತಿಕ ಟೀಕೆ ಮಾಡಿ, "ಹಿಂದೂಸ್ತಾನದಲ್ಲಿ 'ಇಟಾಲಿಯನ್' ಮಹಿಳೆಯೊಬ್ಬರು ಮತ ಚಲಾಯಿಸಿದ್ದಾರೆ. ನಿಮಗೆ ಅವರ ಹೆಸರು ತಿಳಿದಿದೆಯೇ?" ಎಂದು ಪ್ರಶ್ನಿಸಿದ್ದಾರೆ. ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸಹ ರಾಹುಲ್ ಅವರ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.