Skip to main content
ವಿಡಿಯೋ
1/4
general

ಬಿಹಾರದಲ್ಲಿಂದು ಮೊದಲ ಹಂತದ ಮತಸಮರ - 121 ಕ್ಷೇತ್ರದಲ್ಲಿ ಮತಚಲಾವಣೆ

By Vinutha U
ಬಿಹಾರದಲ್ಲಿಂದು ಮೊದಲ ಹಂತದ ಮತಸಮರ - 121 ಕ್ಷೇತ್ರದಲ್ಲಿ ಮತಚಲಾವಣೆ

​ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಹೊಸ ಪಕ್ಷ ಜನಶಕ್ತಿ ಜನತಾ ದಳ , ​ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ ಸೂರಜ್ ಪಕ್ಷ ಕೂಡ ಪ್ರಬಲ ಸ್ಪರ್ಧೆ ಒಡ್ಡಲಿವೆ.

ಪಾಟ್ನಾ - ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗಾಗಿ ಮತದಾನ ಪ್ರಕ್ರಿಯೆ ಇಂದು ನಡೆಯಲಿದೆ. 8 ಜಿಲ್ಲೆಗಳ 121 ಕ್ಷೇತ್ರಗಳ ಮತದಾರರು ಇಂದು ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ.

121 ಕ್ಷೇತ್ರ, 3.75 ಕೋಟಿ ಮತದಾರರು

​ಬಿಹಾರದ 8 ಜಿಲ್ಲೆಗಳ ಒಟ್ಟು 121 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ​ಬರೋಬ್ಬರಿ 3.75 ಕೋಟಿ ಮತದಾರರು ಇಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

​ಪ್ರಮುಖ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!

​ಒಟ್ಟು 1,314 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಪ್ರಮುಖವಾಗಿ - ​ತೇಜಸ್ವಿ ಯಾದವ್ (ಮಹಾಘಟಬಂಧನ ಮುಖ್ಯಮಂತ್ರಿ ಅಭ್ಯರ್ಥಿ) , ​ತೇಜ್ ಪ್ರತಾಪ್ ಯಾದವ್ (ಜನಶಕ್ತಿ ಜನತಾ ದಳ) , ​ಸಾಮ್ರಾಟ್ ಚೌಧರಿ (ಬಿಜೆಪಿ ಉಪಮುಖ್ಯಮಂತ್ರಿ) ​ಮೈಥಿಲಿ ಠಾಕೂರ್ (ಗಾಯಕಿ, ಬಿಜೆಪಿ ಅಭ್ಯರ್ಥಿ) ,​ಎನ್‌ಡಿಎಗೆ ಮಹಾಘಟಬಂಧನದಿಂದ ಪ್ರಬಲ ಸ್ಪರ್ಧೆ ಇದ್ದು, ಆಡಳಿತಾರೂಢ ಎನ್‌ಡಿಎ (NDA) ಮತ್ತು ಮಹಾಘಟಬಂಧನ ನಡುವೆ ತೀವ್ರ ಪೈಪೋಟಿ ಇದೆ.

​ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಹೊಸ ಪಕ್ಷ ಜನಶಕ್ತಿ ಜನತಾ ದಳ , ​ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ ಸೂರಜ್ ಪಕ್ಷ ಕೂಡ ಪ್ರಬಲ ಸ್ಪರ್ಧೆ ಒಡ್ಡಲಿವೆ.

​ಆರ್‌ಜೆಡಿಯೇ ಪ್ರಬಲ!

​ಮೊದಲ ಹಂತದ ಕ್ಷೇತ್ರಗಳಲ್ಲಿ ಆರ್‌ಜೆಡಿ ಪಕ್ಷ ಹೆಚ್ಚು ಪ್ರಾಬಲ್ಯ ಹೊಂದಿದೆ. ​2020 ರ ಚುನಾವಣೆಯಲ್ಲಿ ಆರ್‌ಜೆಡಿ 42 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗ ​ಬಿಜೆಪಿ 32 ಸ್ಥಾನಗಳು , ​ಜೆಡಿ ಯು23 ಸ್ಥಾನಗಳು, ​ಇತರೆ ಕಾಂಗ್ರೆಸ್, ಎಡ ಪಕ್ಷಗಳು 19 ಸ್ಥಾನಗಳು ಪಡೆದಿತ್ತು. ಎರಡನೇ ಹಂತದ ಚುನಾವಣೆ ನ.11 ರಂದು ನಡೆಯಲಿದ್ದು ಮತ ಎಣಿಕೆ ನ.14 ರಂದು ನಡೆಯಲಿದೆ.ಆಗ ಕಣದಲ್ಲಿದ್ದ ಅಭ್ಯರ್ಥಿಗಳ ಭವಿಷ್ಯವು ನಿರ್ಧಾರ ಆಗಲಿದೆ.