ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಕುಟುಂಬದವರಿಂದ ಪತ್ರಗಳು ಬರಲಾರಂಭಿಸಿವೆ. ಈ ಪತ್ರ ಪಡೆದವರು ನಾಮಿನೇಷನ್ ಪ್ರಕ್ರಿಯೆಯಿಂದ ಸುರಕ್ಷಿತರಾಗುತ್ತಾರೆ. ಆದರೆ, ಪತ್ರ ಪಡೆಯಲು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಒಬ್ಬರು ಪತ್ರ ಪಡೆದರೆ, ಇನ್ನೊಬ್ಬರು ತಮ್ಮ ಪತ್ರ ಕಳೆದುಕೊಂಡು ದುಃಖಪಡಬೇಕಾಗುತ್ತದೆ. ಕಣ್ಮುಂದೆಯೇ ಕುಟುಂಬದ ಪತ್ರಗಳು ಚೂರುಚೂರಾಗುವುದನ್ನು ನೋಡಿದಾಗ ಅನೇಕ ಸ್ಪರ್ಧಿಗಳು ಕಣ್ಣೀರು ಸುರಿಸಿದ್ದಾರೆ. ಇದನ್ನು ಓದಿ:ಬಿಗ್‌ಬಾಸ್ ಮನೆಯಲ್ಲಿ ಭಾರಿ ಹೊಡೆದಾಟ...ಕಂಗಾಲಾದ ಸ್ಪರ್ಧಿಗಳು! ಯಾರ್ಯಾರ ನಡುವೆ ಹೊಡೆದಾಟ?
ಪತ್ರ ಪಡೆದವರು ಅದನ್ನು ಓದಿ ಭಾವುಕರಾಗಿ ಅತ್ತಿದ್ದಾರೆ. ಈ ಬಾರಿ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ಇಬ್ಬರಲ್ಲಿ ಒಬ್ಬರಿಗೆ ಪತ್ರ ಸಿಗುವ ಅವಕಾಶವಿದೆ. ರಕ್ಷಿತಾ ಮತ್ತು ರಾಶಿಕಾ ಹೊರತುಪಡಿಸಿ, ಮನೆಯ ಉಳಿದ ಸದಸ್ಯರು ಒಮ್ಮತದಿಂದ ಯಾರು ಪತ್ರ ಪಡೆಯಲು ಅರ್ಹರು ಎಂದು ನಿರ್ಧರಿಸಬೇಕಿದೆ. ಬಿಗ್‌ಬಾಸ್ ಈ ಚರ್ಚೆಗೆ ನಿರ್ದಿಷ್ಟ ಸಮಯ ನೀಡಿದ್ದು, ಆ ಸಮಯದೊಳಗೆ ತಮ್ಮ ನಿರ್ಧಾರವನ್ನು ಸ್ಪರ್ಧಿಗಳು ತಿಳಿಸಬೇಕು. Arayna Women's Cotton Printed Floral Straight Kurta with Palazzo Pants and Dupatta
ಗಾರ್ಡನ್ ಏರಿಯಾದಲ್ಲಿ ರಕ್ಷಿತಾ ಮತ್ತು ರಾಶಿಕಾ ಪೈಕಿ ಯಾರಿಗೆ ಪತ್ರ ನೀಡಬೇಕು ಎಂಬುದರ ಬಗ್ಗೆ ಮತದಾನ ನಡೆಯಿತು. ರಘು ಅವರ ಪ್ರಕಾರ, ರಾಶಿಕಾಗಿಂತ ರಕ್ಷಿತಾಗೆ ಪತ್ರದ ಅವಶ್ಯಕತೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು. ಈ ವಿಷಯದ ಬಗ್ಗೆ ಮನೆಯ ಸದಸ್ಯರು ಎರಡು ಗುಂಪುಗಳಾಗಿ ವಿಭಜಿತರಾದರು. ಅಶ್ವಿನಿ ಗೌಡ ಅವರು, "ಈ ಮನೆಯಲ್ಲಿ ಮನಸ್ಸು ಮತ್ತು ಮನಸ್ಥಿತಿ ಹಾಳಾಗಲು ರಕ್ಷಿತಾ ಮೂಲ ಕಾರಣ. ಹಾಗಾಗಿ ನನ್ನ ವೋಟ್ ರಾಶಿಕಾಗೆ ನೀಡುವೆ" ಎಂದು ತಮ್ಮ ನಿರ್ಧಾರ ತಿಳಿಸಿದರು. ಪತ್ರ ಯಾರಿಗೆ ಸಿಗಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಒಮ್ಮತದ ನಿರ್ಧಾರ ಮೂಡಬೇಕಿದೆ.