ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಜನಮಾನಸವಾದ ಸಿನಿಮಾ ʻಯಜಮಾನʼ ಚಿತ್ರವು ಮತ್ತೊಮ್ಮೆ ರಿಲೀಸ್ ಆಗುತ್ತಿದ್ದು, 150 ಥಿಯೇಟರ್ನಲ್ಲಿ ಅವರ ಅಭಿನಯದ ಈ ಪ್ರಸಿದ್ಧ ಚಿತ್ರವು 25 ವರ್ಷಗಳ ಬಳಿಕ ಮರಳಿ ತೆರೆ ಕಾಣುತ್ತಿದೆ. ಆರ್. ಶೇಷಾದ್ರಿ ಹಾಗೂ ರಾಧಾ ಭಾರತಿ ನಿರ್ದೇಶನದ ಈ ಚಿತ್ರದಲ್ಲಿ ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ ಹಾಗೂ ಪ್ರೇಮ ಸೇರಿದಂತೆ ಮಹಾಕಲಾವಿದರು ನಟಿಸಿದ್ದಾರೆ.
ಸಂಬಂಧಗಳೇ ಕಳೆದು ಹೋಗುತ್ತಿರುವ ಸಂದರ್ಭದಲ್ಲಿ, ಸಂಬಂಧಗಳ ಹಾಗೂ ಸಾಮಾಜಿಕ ಮೌಲ್ಯಗಳ ಸಂತುಷ್ಟವಾಗಿರುವ ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಸಮಾಜದ ಮಾದರಿಯಲ್ಲಿ ಸಂಬಂಧಗಳ ಅನ್ಯೋನ್ಯತೆ, ವಾತ್ಸಲ್ಯ ಹಾಗೂ ಕಾರುಣ್ಯ ದೃಶ್ಯವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. The Power of Your Subconscious Mind: Original Edition | Premium Paperback Paperback – Sound Book, 12 October 2020
ಈ ಚಿತ್ರಕ್ಕೆ ಟೆಕ್ನಾಲಜಿಲಕಲ್ ಟಚ್ ನೀಡಲಾಗಿದ್ದು, ಮೋನೋ ಟ್ರ್ಯಾಕ್ ಅಲ್ಲಿದ್ದ ಕಲಾವಿದರ ಧ್ವನಿಗೆ 7.1 ಗೆ ಬದಲಾಯಿಸಲಾಗಿದೆ ಎನ್ನಲಾಗಿದೆ. ಚಿತ್ರಕ್ಕೆ ರಾಜೇಶ್ ರಾಮನಾಥ್ ಅವರು ಸಂಗೀತ ನೀಡಿದ್ದಾರೆ. ಕಲಾವಿದರ ಧ್ವನಿಗೆ ಹಾಗೂ ಸಂಗೀತಕ್ಕೆ ಹೊಸ ಟೆಕ್ನಾಲಜಿಯ ಸ್ಪರ್ಶ ನೀಡಲಾಗಿದೆ ಎನ್ನಲಾಗಿದೆ. ಇದರೊಟ್ಟಿಗೆ, ಉಪ್ಪಿ ಶಿಷ್ಯ ಐ ಯಾಮ್ ಗಾಡ್, ಐ ಲವ್ ಯು ಮುದ್ದು ಸೇರಿದಂತೆ ಒಟ್ಟು ಆರು ಚಿತ್ರಗಳು ತೆರೆಕಾಣಲಿದೆ ಎನ್ನಲಾಗಿದೆ. ಇದನ್ನೂ ಓದಿ: ಮಲೆನಾಡಿನ ಮೌನ ಸೌಂದರ್ಯ...ಉತ್ತರ ಕನ್ನಡದ ನಿಸರ್ಗ ರತ್ನ ವಿಭೂತಿ ಜಲಪಾತಕ್ಕೆ ಒಮ್ಮೆಯಾದ್ರೂ ಹೋಗಲೇಬೇಕು!