Skip to main content
ವಿಡಿಯೋ
1/3
cinema

ಜಾಹ್ನವಿ–ಅಶ್ವಿನಿ ಭಿನ್ನಾಭಿಪ್ರಾಯಕ್ಕೆ ಬ್ರೇಕ್...ಕಣ್ಣೀರಿನಿಂದ ಮರು ಹುಟ್ಟಿದ ಸ್ನೇಹ..!

By Ram Chethan
ಜಾಹ್ನವಿ–ಅಶ್ವಿನಿ ಭಿನ್ನಾಭಿಪ್ರಾಯಕ್ಕೆ ಬ್ರೇಕ್...ಕಣ್ಣೀರಿನಿಂದ ಮರು ಹುಟ್ಟಿದ ಸ್ನೇಹ..!

ಪತ್ರ ಟಾಸ್ಕ್ ವೇಳೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಪರಸ್ಪರ ತಬ್ಬಿಕೊಂಡು ಕಣ್ಣೀರು ಬಿಡುವ ದೃಶ್ಯ ಅಭಿಮಾನಿಗಳನ್ನು ಸ್ಪರ್ಶಿಸಿದೆ. ದೂರವಾದ ಸ್ನೇಹ ಮತ್ತೆ ಜೋಡಿಸಿಕೊಂಡಿದ್ದು, ಮುಂದಿನ ಆಟದಲ್ಲಿ ಇವರ ಜೋಡಿ ಹೇಗೆ ಮೆಚ್ಚಿಸುವುದು ಎಂಬ ನಿರೀಕ್ಷೆ ಹೆಚ್ಚಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭದಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಚೆನ್ನಾಗಿ ಹೊಂದಿಕೊಂಡಿದ್ದರು. ಇಬ್ಬರೂ ಒಂದಕ್ಕೊಂದು ಬೆಂಬಲವಾಗಿ ಆಟ ಆಡುತ್ತಿದ್ದರು. ಆದರೆ ದಿನಗಳು ಕಳೆದಂತೆ ಅವರ ನಡುವೆ ಅಂತರ ಹೆಚ್ಚಾಗಿ, ಮಾತನಾಡಿಕೊಳ್ಳದೇ ದೂರ ಉಳಿದಿದ್ದರು. ಇದರಿಂದ ಮನೆ ಸದಸ್ಯರಿಗೂ, ಪ್ರೇಕ್ಷಕರಿಗೂ ಅಚ್ಚರಿ ಆಯ್ತು.Arayna Women's Cotton Printed Floral Straight Kurta with Palazzo Pants and Dupatta

ಇತ್ತೀಚೆಗೆ ಮನೆಯಲ್ಲಿಯೇ ವಿಶೇಷ ಟಾಸ್ಕ್ ನಡೆದಿದ್ದು, ಕುಟುಂಬದವರಿಂದ ಬಂದ ಪತ್ರವನ್ನು ಪಡೆಯಬೇಕಾ ಅಥವಾ ತ್ಯಾಗ ಮಾಡಬೇಕಾ ಎಂಬ ಗೊಂದಲ ಎಲ್ಲರಲ್ಲೂ ಕಂಡುಬಂದಿತು. ಈ ಕ್ಷಣದಲ್ಲಿ ಅಶ್ವಿನಿ ಮತ್ತು ಜಾಹ್ನವಿ ಭಾವನೆ ಮಿಡಿದು ಪರಸ್ಪರ ತಬ್ಬಿಕೊಂಡು ಕಣ್ಣೀರಿಟ್ಟರು. ಚಿಕ್ಕ ವಿಷಯಕ್ಕೆ ದೂರವಾದರೂ, ಮನದಾಳದ ಸಂಬಂಧ ಎಂದಿಗೂ ಕಟಕಲಾಗುವುದಿಲ್ಲ ಎಂಬುದನ್ನು ಅವರು ತೋರಿಸಿದರು.ಇದನ್ನು ಓದಿ:‘ದಿ ಗರ್ಲ್‌ಫ್ರೆಂಡ್’ ಬಿಡುಗಡೆ: ನವೆಂಬರ್ 7ರಿಂದ ಹಿಂದಿ-ತೆಲುಗು, 14ರಿಂದ ಕನ್ನಡ, ತಮಿಳು, ಮಲಯಾಳಂನಲ್ಲಿ ರಿಲೀಸ್‌!

ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ನವೆಂಬರ್ 6ರ ಪ್ರೋಮೋ ನೋಡಿ, ಮನೆಯೊಳಗಿನ ವಾತಾವರಣ ಮತ್ತೊಮ್ಮೆ ಮೃದುವಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸ್ನೇಹ ಇನ್ನಷ್ಟು ಗಾಢವಾಗುತ್ತದೆಯೇ ಎಂಬುದನ್ನು ನೋಡಬೇಕಾಗಿದೆ.