Skip to main content
ವಿಡಿಯೋ
1/3
politics

ಬೆಳಗಾವಿಯಲ್ಲಿJDS ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ಅವರ ನೇತೃತ್ವದಲ್ಲಿ ಕಬ್ಬಿನ ಬೆಲೆಗಾಗಿ ಸರ್ಕಾರದ ವಿರುದ್ದ ಮುಂದುವರೆದ ಧರಣಿ

By Gireesh Vasishta
ಬೆಳಗಾವಿಯಲ್ಲಿJDS ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ಅವರ ನೇತೃತ್ವದಲ್ಲಿ ಕಬ್ಬಿನ ಬೆಲೆಗಾಗಿ ಸರ್ಕಾರದ ವಿರುದ್ದ ಮುಂದುವರೆದ ಧರಣಿ

6-11-2025 ರಂದು ಕಬ್ಬಿನ ಬೆಲೆ ನಿಗದಿಗಾಗಿ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿರೆಬಾಗೇವಾಡಿ ಗ್ರಾಮದಲ್ಲಿ ಬಸವೇಶ್ವರ ಸರ್ಕಲ್ ಬಳಿ ಇಂದು ರಾಜ್ಯ ಹೆದ್ದಾರಿ ರಸ್ತೆ ತಡೆದು, ನಡೆಸುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಇಂದು ಪಾಲ್ಗೊಂಡು, ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿ ಪ್ರತಿ ಟನ್‌ ಕಬ್ಬಿಗೆ 3500 ರೂ. ಕೊಡಬೇಕೆಂದು ಜಾತ್ಯಾತೀತ ಜನತಾದಳ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ಅವರು ಸರ್ಕಾರಕ್ಕೆ ಬತ್ತಾಯಿಸಿದರು..

ಬೆಳಗಾವಿ; ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಕಬ್ಬಿನ ಬೆಲೆಗಾಗಿ ರೈತರ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ತ್ಯಾತೀತ ಜನತಾದಳ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಮಾಡಲಗಿ ಅವರು ನೇತೃತ್ವವನ್ನು ವಹಿಸಿದ್ದಾರೆ. ಈ ಹೋರಾಟವು ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟಗಳಲ್ಲಿ ಒಂದಾಗಿದೆ.BULLMER Trendy Clothing Set with Shirt & Pants Co-ords for Men

 6-11-2025 ರಂದು ಕಬ್ಬಿನ ಬೆಲೆ ನಿಗದಿಗಾಗಿ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿರೆಬಾಗೇವಾಡಿ ಗ್ರಾಮದಲ್ಲಿ  ಬಸವೇಶ್ವರ ಸರ್ಕಲ್  ಬಳಿ  ಇಂದು ರಾಜ್ಯ ಹೆದ್ದಾರಿ ರಸ್ತೆ ತಡೆದು, ನಡೆಸುತ್ತಿರುವ  ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಇಂದು ಪಾಲ್ಗೊಂಡು, ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿ ಪ್ರತಿ ಟನ್ಕಬ್ಬಿಗೆ 3500 ರೂ. ಕೊಡಬೇಕೆಂದು ಜಾತ್ಯಾತೀತ ಜನತಾದಳ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಮಾಡಲಗಿ ಅವರು  ಸರ್ಕಾರಕ್ಕೆ ಬತ್ತಾಯಿಸಿದರು. ಈ ಹೋರಾಟವು ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವ ತನಕವೂ ನಡೆಯುವ ನಿರಂತರ ಹೋರಾಟವಾಗಿದೆ.

ರೈತ ಮುಖಂಡರಾದ ಶ್ರೀ ಮೋಹನ  ಮೇಲಿಕೆರಿ ಈರಣ್ಣ ರೋಟಿ ಪ್ರಶಾಂತ ದೆಸಾಯಿ ರಾಜ್ಯು ರೋಟಿ ಹಿರೆಬಾಗೇವಾಡಿ ಗ್ರಾಮದ ಸಮಸ್ತ ರೈತರು ಹಾಜರಿದ್ದರು.

ಬೇಡಿಕೆ: ರೈತರು ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ. ಸಕ್ಕರೆ ಕಾರ್ಖಾನೆಗಳು ನೀಡಿರುವ ₹3,200 ದರವನ್ನು ಅವರು ತಿರಸ್ಕರಿಸಿದ್ದಾರೆ.

ಪ್ರತಿಭಟನೆ ಸ್ವರೂಪ: ಪ್ರತಿಭಟನೆಯು ಹಲವು ದಿನಗಳಿಂದ ಮುಂದುವರಿದಿದೆ (ಇತ್ತೀಚಿನ ವರದಿಗಳ ಪ್ರಕಾರ ಮೂರನೇ ದಿನಕ್ಕೆ ಮುಂದುವರಿದಿದೆ, ಅಥವಾ ಬೆಳಗಾವಿ ಜಿಲ್ಲೆಯಾದ್ಯಂತದ ಪ್ರತಿಭಟನೆಯು 8ನೇ ದಿನಕ್ಕೆ ತಲುಪಿದೆ). ಹಿರೇಬಾಗೇವಾಡಿ ಗ್ರಾಮದ ಬಸವ ವೃತ್ತದ ಬಳಿ ಪ್ರತಿಭಟನೆ ನಡೆಯುತ್ತಿದ್ದು, ರೈತರು ಬೆಳಗಾವಿ-ಸವದತ್ತಿ ರಾಜ್ಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯು ಉಗ್ರ ಸ್ವರೂಪ ತಾಳುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

ಬೆಂಬಲ: ರೈತರ ಹೋರಾಟಕ್ಕೆ ವಿವಿಧ ಮಠಾಧೀಶರು ಮತ್ತು ರೈತ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯು ಕಬ್ಬಿಗೆ ನ್ಯಾಯಯುತ ಬೆಲೆ ಸಿಗುವವರೆಗೂ ಮುಂದುವರಿಯುವ ಸಾಧ್ಯತೆ ಇದೆ.