ನವದೆಹಲಿ: ರಾಷ್ಟ್ರಗೀತೆ 'ವಂದೇ ಮಾತರಂ' 150 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಈ ಐತಿಹಾಸಿಕ ಕ್ಷಣವನ್ನು ಸ್ಮರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶವಾಸಿಗಳನ್ನು ಕೋರಿದ್ದಾರೆ. ಇಂದು (ನವೆಂಬರ್ , 2025) ದೆಹಲಿಯಲ್ಲಿ ನಡೆಯಲಿರುವ ವರ್ಷಪೂರ್ತಿ ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಲಿದ್ದಾರೆ.Levi's Men's Slim Fit Mid Rise 511 Mid-Rise Jeans
ಟ್ವಿಟರ್ (X) ಮೂಲಕ ಪ್ರಧಾನಿ ಮೋದಿ ಸಂದೇಶ: "ನಾಳೆ, ನವೆಂಬರ್ 7, ಪ್ರತಿಯೊಬ್ಬ ಭಾರತೀಯರಿಗೂ ಒಂದು ಐತಿಹಾಸಿಕ ದಿನ. ನಮ್ಮ ರಾಷ್ಟ್ರಗೀತೆ 'ವಂದೇ ಮಾತರಂ'ನ 150ನೆಯ ಶ್ರೇಷ್ಠ ವರ್ಷಗಳನ್ನು ನಾವು ಆಚರಿಸುತ್ತಿದ್ದೇವೆ. ಇದು ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ಮತ್ತು ನಮ್ಮ ರಾಷ್ಟ್ರದಾದ್ಯಂತ ದೇಶಭಕ್ತಿಯ ಅಚಲ ಮನೋಭಾವವನ್ನು ಪ್ರಜ್ವಲಿಸಿದ ಕರೆಯಾಗಿದೆ."ಇದನ್ನು ಓದಿ; ಭಾರತಕ್ಕೆ ಭರ್ಜರಿ ಜಯ, ಸರಣಿಯಲ್ಲಿ 2-1 ಮುನ್ನಡೆ! ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ವಾಶ್ ಮಾಡಿದ ವಾಷಿಂಗ್ಟನ್
"ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಈ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿ (Stamp) ಮತ್ತು ನಾಣ್ಯ (Coin) ಗಳನ್ನು ಸಹ ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ 'ವಂದೇ ಮಾತರಂ'ನ ಸಾಮೂಹಿಕ ಗಾಯನ! ದೇಶದಾದ್ಯಂತ ಎಲ್ಲರೂ ಈ ಗೀತೆಯನ್ನು ಹಾಡಿ, ಮಾತೃಭೂಮಿಗೆ ನಮಿಸೋಣ." "ವಂದೇ ಮಾತರಂ ನಮಗೆ ಕೇವಲ ಒಂದು ಗೀತೆಯಲ್ಲ, ಅದು ನಮ್ಮ ಸ್ವಾತಂತ್ರ್ಯ ಹೋರಾಟದ ಮೂಲ ಮಂತ್ರ. ಅದರ ಪ್ರೇರಣೆಯು 'ವಿಕಸಿತ ಭಾರತ'ದ ಸಂಕಲ್ಪವನ್ನು ಸಾಧಿಸಲು ನಮಗೆ ಶಕ್ತಿ ತುಂಬಲಿ ಎಂದಿದ್ದಾರೆ.#VandeMataram150"
ಪ್ರಧಾನಿ ಮೋದಿಯವರ ಈ ಕರೆಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.