ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ಬೈಕ್ ಸವಾರನಿಂದ ಹಣ ವಸೂಲಿ ಮಾಡುತ್ತಿದ್ದ ಟ್ರಾಫಿಕ್ ಕಾನ್ಸ್‌ಟೇಬಲ್‌ನ ವಿಡಿಯೋವೊಂದು ವೈರಲ್ ಆಗಿದ್ದು, ಆತನ ವಿರುದ್ಧ ಭ್ರಷ್ಟಾಚಾರದ ಆರೋಪ ದಾಖಲಾಗಿದೆ.
ಬೆಂಗಳೂರಿನ ಕೆ.ಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರ ಸಮೀಪದ ಪುಪ್ಪಾಂಜಲಿ ಥಿಯೇಟರ್ ಬಳಿ. ಬುಧವಾರ ಸಂಜೆ 5:30 ರ ಸುಮಾರಿಗೆ ಈ ಘಟನೆ ನಡೆದಿದೆ.ಕೆ.ಜಿ. ಹಳ್ಳಿ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್. INHEAVEN Bridal Princess Girl Tiara and Rhinestone Crown Headband Hair Accessories for Women Wedding Ceremony Party (Multicolor)
ಸರಿಯಾದ ಹೆಲ್ಮೆಟ್ ಧರಿಸದ ಕಾರಣಕ್ಕೆ ಕಾನ್ಸ್‌ಟೇಬಲ್ ಬೈಕ್ ಸವಾರನನ್ನು ತಡೆದು ನಿಲ್ಲಿಸಿದ್ದಾರೆ. ನಂತರ ದಂಡ ಹಾಕುವ ಬದಲು, ಆತನನ್ನು ಬಿಡುವುದಕ್ಕೆ ನೇರವಾಗಿ ಹಣ ಪಡೆದಿದ್ದಾರೆ. ಕಾನ್ಸ್‌ಟೇಬಲ್ ಲಂಚ ಪಡೆಯುವ ಈ ಕೃತ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದಾರೆ, ಈ ವಿಡಿಯೋ ಸಾಕ್ಷಿಯು ಪೊಲೀಸರ ಲಂಚ ಪ್ರಕರಣಗಳಿಗೆ ಜೀವಂತ ನಿದರ್ಶನವಾಗಿದೆ.