Skip to main content
ವಿಡಿಯೋ
1/2
general

ವೀಸಾ ನಿಯಮ ಮತ್ತಷ್ಟು ಬಿಗಿ: ಮಧುಮೇಹ, ಹೃದಯ ಕಾಯಿಲೆ ಇರುವವರಿಗೆ ಅಮೆರಿಕ ವೀಸಾ ರದ್ದು.!

By Vinutha U
ವೀಸಾ ನಿಯಮ ಮತ್ತಷ್ಟು ಬಿಗಿ: ಮಧುಮೇಹ, ಹೃದಯ ಕಾಯಿಲೆ ಇರುವವರಿಗೆ ಅಮೆರಿಕ ವೀಸಾ ರದ್ದು.!

ಅಮೆರಿಕ ಸರ್ಕಾರವು ತನ್ನ ರಾಯಭಾರ ಕಚೇರಿಗಳಿಗೆ ಕಳುಹಿಸಿರುವ ಹೊಸ ವೀಸಾ ಮಾರ್ಗಸೂಚಿಯಲ್ಲಿ ಕೆಲವು ಮುಖ್ಯ ಅಂಶಗಳನ್ನು ಸ್ಪಷ್ಟವಾಗಿ ನಮೂದಿಸಿದೆ. ಇದರಲ್ಲಿ ವೈದ್ಯಕೀಯ ತಪಾಸಣೆಯ ಬಗ್ಗೆ ಕಟ್ಟುನಿಟ್ಟು ನಿಯಮಗಳು ಮತ್ತು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ವಿನಾಯಿತಿಗಳು ಸೇರಿವೆ.

ಕಡ್ಡಾಯ ವೈದ್ಯಕೀಯ ತಪಾಸಣೆ: ಅಮೆರಿಕ ವೀಸಾ ಪಡೆಯಲು ಅಭ್ಯರ್ಥಿಗಳ ಆರೋಗ್ಯ ಪರೀಕ್ಷೆ ಈಗಾಗಲೇ ಕಡ್ಡಾಯವಾಗಿತ್ತು. ಆದರೆ ಹೊಸ ಮಾರ್ಗಸೂಚಿಗಳಲ್ಲಿ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಒತ್ತಿ ಹೇಳಲಾಗಿದೆ. ಇದರಿಂದ ರಾಯಭಾರಿ ಅಧಿಕಾರಿಗಳು ಅರ್ಜಿದಾರರ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ವೀಸಾ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿದೆ.

ಆರೋಗ್ಯ ಸಮಸ್ಯೆಗಳ ಸಂಪೂರ್ಣ ಪರಿಗಣನೆ: ಹೊಸ ಮಾರ್ಗಸೂಚಿಯಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ – "ಅರ್ಜಿದಾರರ ಆರೋಗ್ಯವನ್ನು ಕಡೆಗಣಿಸದೆ ಪರಿಗಣಿಸಬೇಕು. ಹೃದಯ ಕಾಯಿಲೆ, ಶ್ವಾಸಕೋಶ ಸಮಸ್ಯೆಗಳು, ಕ್ಯಾನ್ಸರ್, ಡಯಾಬಿಟಿಸ್, ನರರೋಗಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು ಮುಂತಾದ ಗಂಭೀರ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವವರ ಚಿಕಿತ್ಸೆಗೆ ಸಾವಿರಾರು ಡಾಲರ್‌ಗಳು ವ್ಯಯವಾಗಬಹುದು. ಅಲ್ಲದೆ, ಬೊಜ್ಜು, ಆಸ್ತಮಾ, ರಕ್ತದೊತ್ತಡ (ಬಿಪಿ) ಇತ್ಯಾದಿ ಸಾಮಾನ್ಯ ಕಾಯಿಲೆಗಳನ್ನೂ ಸಹ ಪರಿಶೀಲಿಸಿ ನಿರ್ಧಾರಿಸಬೇಕು" ಎಂದು ಹೇಳಲಾಗಿದೆ.

ಆರ್ಥಿಕ ಹೊರೆ ಕಡಿಮೆ ಮಾಡುವ ಉದ್ದೇಶ: ಅಮೆರಿಕ ಸರ್ಕಾರವು ತನ್ನ ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ ವಿಮಾ ಯೋಜನೆಗಳಿಗೆ ಭಾರೀ ಹಣ ಮತ್ತು ಸಬ್ಸಿಡಿಗಳನ್ನು ವ್ಯಯಿಸುತ್ತದೆ. ಅನಾರೋಗ್ಯಪೀಡಿತ ವಲಸಿಗರನ್ನು ದೇಶದೊಳಗೆ ಸೇರಿಸಿಕೊಂಡರೆ, ಸರ್ಕಾರದ ಮೇಲಿನ ವೆಚ್ಚ ಹೆಚ್ಚಾಗುತ್ತದೆ. ಇದನ್ನು ತಡೆಯಲು, ಆರೋಗ್ಯ ಸಮಸ್ಯೆಗಳಿರುವ ವಲಸಿಗರ ವೀಸಾ ಅರ್ಜಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ತಿರಸ್ಕರಿಸುವ ನೀತಿಯನ್ನು ಅಮೆರಿಕ ಅಳವಡಿಸಿಕೊಂಡಿದೆ. INHEAVEN Bridal Princess Girl Tiara and Rhinestone Crown Headband Hair Accessories for Women Wedding Ceremony Party (Multicolor)

ಒಂದು ವೇಳೆ ಅರ್ಜಿದಾರರಿಗೆ ಗಂಭೀರ ಆರೋಗ್ಯ ಸಮಸ್ಯೆಗಳಿದ್ದು, ಅದರಿಂದ ವೀಸಾ ತಿರಸ್ಕೃತಗೊಳ್ಳುವ ಸಾಧ್ಯತೆ ಇದ್ದರೆ, ಅವರ ಹಣಕಾಸು ಸಾಮರ್ಥ್ಯವನ್ನು ಸಹ ಪರಿಗಣಿಸಲಾಗುತ್ತದೆ. ಅರ್ಜಿದಾರರು ಅಮೆರಿಕದಲ್ಲಿ ಸರ್ಕಾರಿ ನೆರವು ಯಾವುದೇ ರೀತಿಯಲ್ಲಿ ಪಡೆಯದೆ, ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಚಿಕಿತ್ಸೆಯ ಖರ್ಚನ್ನು ಸಂಪೂರ್ಣವಾಗಿ ಸ್ವತಃ ಭರಿಸುವಷ್ಟು ಆರ್ಥಿಕ ಶಕ್ತಿ ಹೊಂದಿದ್ದರೆ, ಅಂತಹ ಅರ್ಜಿಗಳಿಗೆ ವೀಸಾ ನೀಡುವ ಅವಕಾಶ ಇದೆ.