ವಾಷಿಂಗ್ಟನ್ ಡಿ.ಸಿ./ಓಹಿಯೋ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಓಹಿಯೋ ರಾಜ್ಯದ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸಿರುವ ಭಾರತೀಯ ಮೂಲದ ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ ಅವರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಟ್ರಂಪ್ ಅವರು, ರಾಮಸ್ವಾಮಿ ಅವರನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.Safari Flip 32L Casual Printed Backpack, 2 Compartments, Bottle Holder,
ಟ್ರಂಪ್ ಹೇಳಿದಂತೆ: "ವಿವೇಕ್ ವಿಶೇಷ ವ್ಯಕ್ತಿ. ಆತ ಯುವ, ಪ್ರಬಲ ಮತ್ತು ಬುದ್ಧಿವಂತ! ದೇಶವನ್ನು ನಿಜವಾಗಿ ಪ್ರೀತಿಸುವ ಉತ್ತಮ ವ್ಯಕ್ತಿ. ವಿವೇಕ್, ಆರ್ಥಿಕತೆಯನ್ನು ಬೆಳೆಸಲು, ತೆರಿಗೆ ಕಡಿತ ಮಾಡಲು, ಗಡಿಗಳನ್ನು ಭದ್ರಪಡಿಸಲು ಮತ್ತು 'ಮೇಡ್ ಇನ್ ಯುಎಸ್‌ಎ' ಪ್ರಚಾರ ಮಾಡಲು ಅವಿರತವಾಗಿ ಹೋರಾಡುತ್ತಾರೆ. ಅವರು ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ!" ಎಂದು ಸೋಷಿಯಲ್ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.ಇದನ್ನು ಓದಿ; ರಾಜಕೀಯ ಧುರೀಣ ಎಲ್.ಕೆ. ಅಡ್ವಾಣಿ ಅವರ ಜನ್ಮದಿನ; PM ಮೋದಿರಿಂದ X ಮೂಲಕ ಶುಭಾಶಯ
"ವಿವೇಕ್ ರಾಮಸ್ವಾಮಿ ಅವರು ಓಹಿಯೋದ ಶ್ರೇಷ್ಠ ರಾಜ್ಯಕ್ಕೆ ಗವರ್ನರ್ ಆಗಿ ಸ್ಪರ್ಧಿಸುತ್ತಿದ್ದಾರೆ. ಇದು ನಾನು ಪ್ರೀತಿಸುವ ಮತ್ತು 2016, 2020 ಮತ್ತು 2024 ರಲ್ಲಿ ಮೂರು ಬಾರಿ ಗೆದ್ದ ಸ್ಥಳವಾಗಿದೆ" ಎಂದು ಟ್ರಂಪ್ ತಮ್ಮ ಬೆಂಬಲವನ್ನು ದೃಢಪಡಿಸಿದರು.