Skip to main content
ವಿಡಿಯೋ
1/3
cinema

ಜೈಲಿನಲ್ಲಿ ರೇಪಿಸ್ಟ್‌ ಉಮೇಶ್‌ ರೆಡ್ಡಿಗೆ TV, ಮೊಬೈಲ್‌, ಬೇಕಾದ ಊಟ....ದರ್ಶನ್‌ಗೆ ಯಾಕಿಲ್ಲ? ಪಾಪ ದಾಸ!

By Ram Chethan
ಜೈಲಿನಲ್ಲಿ ರೇಪಿಸ್ಟ್‌ ಉಮೇಶ್‌ ರೆಡ್ಡಿಗೆ TV, ಮೊಬೈಲ್‌, ಬೇಕಾದ ಊಟ....ದರ್ಶನ್‌ಗೆ ಯಾಕಿಲ್ಲ? ಪಾಪ ದಾಸ!

ಕುಖ್ಯಾತ ಸೀರಿಯಲ್ ರೇಪಿಸ್ಟ್ ಉಮೇಶ್ ರೆಡ್ಡಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಫೈವ್ ಸ್ಟಾರ್ ಸೌಲಭ್ಯ, ಮೊಬೈಲ್–ಟಿವಿ–ಅಡುಗೆ ಸ್ವಾತಂತ್ರ್ಯ! ಇದೇ ವೇಳೆ ನಟ ದರ್ಶನ್ ದಿಂಬು-ಹಾಸಿಗೆಯಿಲ್ಲದೆ ಪರದಾಡುವ ಸ್ಥಿತಿ. ಕಾನೂನಿಗೆ ಇಬ್ಬರಿಗೆ ಎರಡು ಮುಖ? ಹಣ-ಪ್ರಭಾವದ ಆಟವೇ? ಜೈಲಿನ ಭ್ರಷ್ಟಾಚಾರದ ಮೇಲೆ ಜನರ ಕೋಪ ಗರಿಗೆದರಿದೆ.

ಕುಖ್ಯಾತ ಸೀರಿಯಲ್ ರೇಪಿಸ್ಟ್ ಮತ್ತು ಕೊಲೆಗಡುಕ ಉಮೇಶ್ ರೆಡ್ಡಿಗೆ ಜೈಲು ಅಕ್ಷರಶಃ ಸ್ವರ್ಗವಾಗಿದೆ. ಆತನ ಬಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಈ ಘಟನೆ ಪರಪ್ಪನ ಅಗ್ರಹಾರ ಜೈಲಿನ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಅತಿದೊಡ್ಡ ಜೈಲಾದ ಪರಪ್ಪನ ಅಗ್ರಹಾರ, ಇದೀಗ ಕೇವಲ ಶಿಕ್ಷೆ ನೀಡುವ ಸ್ಥಳವಾಗಿ ಉಳಿದಿಲ್ಲ; ಬದಲಾಗಿ 'ವಿಐಪಿ' ರೆಸಾರ್ಟ್ ಆಗಿ ಮಾರ್ಪಟ್ಟಿದೆ ಎಂಬ ಮಾತುಗಳು ಮತ್ತೆ ಸತ್ಯವೆಂದು ಸಾಬೀತಾಗುತ್ತಿವೆ. ಇಲ್ಲಿ ನಡೆಯುತ್ತಿರುವ ‘ರಾಜಾತಿಥ್ಯ’ ಕರ್ಮಕಾಂಡಕ್ಕೆ ಬ್ರೇಕ್ ಇಲ್ಲದಂತಾಗಿದೆ.

ಒಂದೆಡೆ ವಿಕೃತಕಾಮಿ ಉಮೇಶ್ ರೆಡ್ಡಿಗೆ ಸೆಲ್‌ನಲ್ಲೇ ಮೊಬೈಲ್ ಫೋನ್ ಮತ್ತು ಟಿವಿ ಸೌಲಭ್ಯ ನೀಡಿ, ಅರಮನೆಯಂತಹ ವಾತಾವರಣ ಕಲ್ಪಿಸಲಾಗಿದೆ. ಆದರೆ, ಇದೇ ಜೈಲಿನಲ್ಲಿರುವ ನಟ ದರ್ಶನ್‌ಗೆ ದಿಂಬು ಮತ್ತು ಹಾಸಿಗೆಗೂ ಪರದಾಡಬೇಕಾದ ಪರಿಸ್ಥಿತಿ ಬಂದಿದೆ ಎನ್ನಲಾಗುತ್ತಿದೆ. ಇದು ಹಲವರನ್ನು ಅಚ್ಚರಿಗೊಳಿಸಿದೆ.Wildcraft Men's RuNX TR Hugo Blue_Light_Blue Trekking&Hiking Shoes (51657)

ಉಮೇಶ್ ರೆಡ್ಡಿಗೆ ಫೈವ್ ಸ್ಟಾರ್ ಸೌಲಭ್ಯ! ಸೀರಿಯಲ್ ರೇಪಿಸ್ಟ್ ಮತ್ತು ಕೊಲೆಗಡುಕನೆಂದು ಕುಖ್ಯಾತಿ ಗಳಿಸಿರುವ ಉಮೇಶ್ ರೆಡ್ಡಿಗೆ ಜೈಲು ಸ್ವರ್ಗವಾಗಿದೆ. ಆತನ ಕೈಯಲ್ಲಿ ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ದೊರೆತಿವೆ. ಸೆಲ್‌ನಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುವ ವಿಡಿಯೋಗಳು ಈಗ ವೈರಲ್ ಆಗಿವೆ.

ಮನರಂಜನೆಗಾಗಿ ಆತನ ಕೊಠಡಿಯಲ್ಲಿ ಟಿವಿ ಸೌಲಭ್ಯವೂ ಇದೆ. ಇಷ್ಟಕ್ಕೇ ಈ ರಾಜಾತಿಥ್ಯ ನಿಂತಿಲ್ಲ, ತನಗೆ ಬೇಕಾದ ಅಡುಗೆಯನ್ನು ತಾನೇ ಮಾಡಿಕೊಂಡು ತಿನ್ನುವಷ್ಟು ಸ್ವಾತಂತ್ರ್ಯವನ್ನೂ ಆತನಿಗೆ ನೀಡಲಾಗಿದೆ. ಇದೆಲ್ಲವನ್ನೂ ನೋಡಿದಾಗ, ಇದು ಶಿಕ್ಷೆಯೋ ಅಥವಾ ಸುಖವಾಸವೋ ಎಂಬ ಪ್ರಶ್ನೆ ಮೂಡುತ್ತದೆ.

ಉಮೇಶ್ ರೆಡ್ಡಿಗೆ ಇಷ್ಟೆಲ್ಲಾ ಸೌಲಭ್ಯಗಳು ಹೇಗೆ ಸಿಗುತ್ತಿವೆ ಎಂಬುದು ಆಶ್ಚರ್ಯಕರ. ಹೊರಗಿನಿಂದ ಯಾರಾದರೂ ಬಿಸಾಕಿದ್ದಲ್ಲ. ಜೈಲಿನ ಹಿರಿಯ ಅಧಿಕಾರಿಗಳೇ ಈ 'ರಾಜಾತಿಥ್ಯ'ಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂದಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ, ಹಣದ ಆಸೆಗೆ ಈ ರೀತಿ ಮಾಡುತ್ತಿದ್ದಾರಾ?ಇದನ್ನು ಓದಿ:ʼಕಾಂತಾರ ಚಾಪ್ಟರ್‌ 1' ಗೆಲುವಿನ ಸಂಭ್ರಮದಲ್ಲಿ ಹೊಂಬಾಳೆ...ಖುಷಿಯಲ್ಲಿ ಭರವಸೆ ಏನು ಗೊತ್ತಾ?

ಒಬ್ಬ ವಿಕೃತ ಅಪರಾಧಿಗೆ ಇಷ್ಟೊಂದು 'ಕೇರ್' ನೀಡುವ ಅಧಿಕಾರಿಗಳು, ನಿಜವಾಗಿಯೂ ಜೈಲಿನ ಸುಧಾರಣೆ ಮಾಡುತ್ತಿದ್ದಾರಾ ಅಥವಾ ಭ್ರಷ್ಟಾಚಾರದ ಕೂಪವನ್ನಾಗಿ ಮಾರ್ಪಡಿಸುತ್ತಿದ್ದಾರಾ? ಎಂಬ ಅನುಮಾನ ಮೂಡುತ್ತದೆ.

ದರ್ಶನ್‌ಗೆ ಮಾತ್ರ ಯಾಕಿಲ್ಲ ದಿಂಬು-ಹಾಸಿಗೆ? ಈ ಕಥೆಯಲ್ಲೇ ಒಂದು ದೊಡ್ಡ ತಿರುವು ಇದೆ. ಒಂದೆಡೆ ಉಮೇಶ್ ರೆಡ್ಡಿ 'ಬಿಂದಾಸ್' ಜೀವನ ನಡೆಸುತ್ತಿದ್ದರೆ, ಇನ್ನೊಂದೆಡೆ ಇತ್ತೀಚೆಗೆ ಕೊಲೆ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲವಂತೆ.

ದಿಂಬು ಮತ್ತು ಹಾಸಿಗೆ ಇಲ್ಲದೆ ದರ್ಶನ್ ಪರದಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ದೊಡ್ಡ ಸೆಲೆಬ್ರಿಟಿ ಆಗಿದ್ದರೂ ದರ್ಶನ್‌ಗೆ ಈ ಸ್ಥಿತಿ. ಆದರೆ, ಕುಖ್ಯಾತ ಅಪರಾಧಿ ಉಮೇಶ್ ರೆಡ್ಡಿಯನ್ನು ಮಾತ್ರ ರಾಜನಂತೆ ನೋಡಿಕೊಳ್ಳಲಾಗುತ್ತಿದೆ.

ಇದು ಜೈಲೋ? ಅಥವಾ ಬ್ರಹ್ಮಾಂಡ ಭ್ರಷ್ಟಾಚಾರವೋ? ಪರಪ್ಪನ ಅಗ್ರಹಾರ ಜೈಲಿನ ಈ ಕಥೆ ಕೇಳಿದಾಗ, ಇಲ್ಲಿ ಕಾನೂನು ಅಂದರೆ ಏನು ಎಂಬ ಅನುಮಾನ ಬರುತ್ತದೆ. ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇಲ್ಲವಾ? ಹಣ ಮತ್ತು ಪ್ರಭಾವ ಇರುವವರಿಗೆ ಒಂದು ರೀತಿಯ, ಇಲ್ಲದವರಿಗೆ ಇನ್ನೊಂದು ರೀತಿಯ ನ್ಯಾಯವೇ?

ಉಮೇಶ್ ರೆಡ್ಡಿಗೆ ಸಿಗುವ ಸೌಲಭ್ಯಗಳು ದರ್ಶನ್‌ಗೆ ಯಾಕಿಲ್ಲ? ದರ್ಶನ್‌ಗೆ ಸಿಗದಿರುವುದು ಸರಿ, ಆದರೆ ಉಮೇಶ್ ರೆಡ್ಡಿಗೆ ಅದೆಲ್ಲ ಸಿಗುತ್ತಿರುವುದು ಹೇಗೆ? ಈ 'ರಾಜಾತಿಥ್ಯ'ದ ಕರ್ಮಕಾಂಡಕ್ಕೆ ಯಾವಾಗ ಅಂತ್ಯ? ಸದ್ಯಕ್ಕಂತೂ ಉತ್ತರ ಸಿಗುವುದು ಕಷ್ಟವಾಗಿದೆ.