Skip to main content
ವಿಡಿಯೋ
1/3
sports

ಆರ್‌ಸಿಬಿಗಾಗಿ ಪೈಪೋಟಿ: ಫ್ರಾಂಚೈಸಿ ಖರೀದಿಯಲ್ಲಿ ನಾ ಮುಂದು ತಾ ಮುಂದು ಎಂದ ಕನ್ನಡಿಗರು ಯಾರು ಗೊತ್ತಾ?

By Shravanthi R
ಆರ್‌ಸಿಬಿಗಾಗಿ ಪೈಪೋಟಿ: ಫ್ರಾಂಚೈಸಿ ಖರೀದಿಯಲ್ಲಿ ನಾ ಮುಂದು ತಾ ಮುಂದು ಎಂದ ಕನ್ನಡಿಗರು ಯಾರು ಗೊತ್ತಾ?

ಐಪಿಎಲ್‌ ಸೀಸನ್‌ 18 ರಲ್ಲಿ ಚೊಚ್ಚಲ ಕಪ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಮಾರಾಟ ಮಾಡಲು ನಿರ್ಧಿರಿಸಿರುವ ಬೆನ್ನಲ್ಲೇ ಕನ್ನಡದ ಬಿಲಿಯನೇರ್‌ ಉದ್ಯಮಿಗಳು ಖರೀದಿಗಾಗಿ ಮಹದಾಸೆ ತೋರಿದ್ದಾರೆ ಎನ್ನಲಾಗಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಸೀಸನ್‌ 19 ಮುಂದಿನ ವರ್ಷ( 2026 )ರ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಕಾದಾಟ ಶುರುವಾಗಿದೆ. ಇದು ಇನ್ನಿಂಗ್ಸ್‌ ಲೆಕ್ಕದಲ್ಲಲ್ಲ, ಬದಲಾಗಿ ಅದರ ಮಾಲೀಕತ್ವದ ಕಾದಾಟ ಆರಂಭಗೊಂಡಿದೆ ಎನ್ನಲಾಗಿದೆ. ಈ ಮೂಲಕ, ಕರ್ನಾಟಕವನ್ನು ಪ್ರತಿನಿಧಿಸುವ ಆರ್‌ಸಿಬಿಯನ್ನು ಕನ್ನಡಿಗರೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚೆನ್ನಲಾಗಿದೆ. 

ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಬ್ರಿಟನ್‌ನ ಡಿಯಾಗೋ ಕಂಪನಿಯ ಒಡೆತನದಲ್ಲಿತ್ತು. ಈಗಿದರ ಫ್ರಾಂಚೈಸಿ ಖರೀದಿಗೆ ಪೈಪೋಟಿ ನಡೆದಿದ್ದು, ಜೆರೋಧಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್‌ ಕಾಮತ್‌ ಹಾಗೂ ಮಣಿಪಾಲ್‌ ಗ್ರೂಪ್‌ ಮುಖ್ಯಸ್ಥ ರಂಜನ್‌ ಪೈ ಅವರು ಈ ಸಾಲಿನಲ್ಲಿದ್ದಾರೆ ಎನ್ನಲಾಗಿದೆ. OnePlus Nord CE4 (Celadon Marble, 8GB RAM, 128GB Storage) | Lifetime Display Warranty | Qualcomm® Snapdragon™ 7 Gen 3 - Best in The Segment | 50 MP Camera with OIS

ಡಿಯಾಗೊ ಆರ್‌ಸಿಬಿಯನ್ನು ಬರೋಬ್ಬರಿ 2 ಬಿಲಿಯನ್‌ ಡಾಲರ್‌ಗೆ ಮಾರಾಟ ಮಾಡಲು ಮುಂದಾಗಿದೆ ಎನ್ನಲಾಗಿದೆ. ದೇಸಿ ಕ್ರಿಕೆಟ್‌ ಲೋಕದಲ್ಲಿ ಕುತೂಹಲ ಮೂಡಿಸಿರುವ ಈ ವಿದ್ಯಮಾನವು; ಆರ್‌ಸಿಬಿಯು ಅತಿ ಹೆಚ್ಚು ಬ್ರಾಂಡ್ ಮೌಲ್ಯವನ್ನು ಹೊಂದಿರುವ ಐಪಿಎಲ್ ಫ್ರಾಂಚೈಸಿಗಳ ಪೈಕಿ ಒಂದೆನ್ನಲಾಗಿದೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್ ದುರ್ದೆಸೆ: ಭಿಕ್ಷೆ ಬೇಡುತ್ತಿದ್ದ ಬಾಲಕನ ಸಾವು; ಕ*ತ್ತರಿಸಲ್ಪಟ್ಟ ಸಹೋದರನ ಕೈಗಳು!