Skip to main content
ವಿಡಿಯೋ
1/3
crime

ಡಬಲ್ ಮ*ರ್ಡರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಕರ್ನಾಟಕ ಪೊಲೀಸರು!

By Gireesh Vasishta
ಡಬಲ್ ಮ*ರ್ಡರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಕರ್ನಾಟಕ ಪೊಲೀಸರು!

ಎರಡೇ ದಿನಗಳ ಒಳಗಾಗಿ ಎರಡು ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ತಿಂಗಳ 4 ರಂದು ಭೀಕರ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಅದಾದ ನಂತರ 6 ರಂದು ಉದ್ಯಮಿಯನ್ನು ಕಿಡ್ನಾಪ್‌ ಮಾಡಿ ಕೊಲೆ ಮಾಡಿದ್ದ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಉದ್ಯಮಿ ಬಾಲಪ್ಪ ಅಲಿಯಾಸ್‌ ಬಾಲಪ್ಪ ರೆಡ್ಡಿಯನ್ನು ಕಿಡ್ನಾಪ್‌ ಮಾಡಿ ಕೊಲೆ ಮಾಡಿದ್ದ.

ಬೆಂಗಳೂರು ಗ್ರಾಮಾಂತರ, ನವೆಂಬರ್ 9, 2025: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನಲ್ಲಿ ನಡೆದ ಡಬಲ್ ಮರ್ಡರ್ (ಎರಡು ಕೊಲೆ) ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಕರ್ನಾಟಕ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆನೇಕಲ್‌ನಲ್ಲಿ ಉದ್ಯಮಿ ಸೇರಿದಂತೆ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಎಂಬಾತನೇ ಈ ಕೃತ್ಯ ಎಸಗಿದ್ದು, ಬಂಧನದ ವೇಳೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.TRASE Block Heels Sandals For Women, Dusky Stylish & Comfortable Footwear

ಘಟನೆಯ ವಿವರ-

ಎರಡೇ ದಿನಗಳ ಒಳಗಾಗಿ ಎರಡು ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ತಿಂಗಳ 4 ರಂದು ಭೀಕರ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಅದಾದ ನಂತರ 6 ರಂದು ಉದ್ಯಮಿಯನ್ನು ಕಿಡ್ನಾಪ್ಮಾಡಿ ಕೊಲೆ ಮಾಡಿದ್ದ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಉದ್ಯಮಿ ಬಾಲಪ್ಪ ಅಲಿಯಾಸ್ಬಾಲಪ್ಪ ರೆಡ್ಡಿಯನ್ನು ಕಿಡ್ನಾಪ್ಮಾಡಿ ಕೊಲೆ ಮಾಡಿದ್ದ.

ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಆರೋಪಿ ರವಿ ಬಂಧನ ಮಾಡಲಾಗಿದ್ದು. ಬಂಧನದ ಬಳಿಕ ಸ್ಥಳ ಮಹಜರು ವೇಳೆ ಹೆಡ್ ಕಾನ್ಸ್ಟೇಬಲ್ ಆಶೋಕ್ ಮೇಲೆ ದಾಳಿ ಮಾಡಿದ್ದಾನೆ. ವೇಳೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಆತನಿಗೆ ಎಚ್ಚರಿಕೆ ನೀಡಲಾಗಿತ್ತು. ದಾಳಿ ನಿಲ್ಲಿಸದೇ ಇದ್ದಾಗ ಕಾಲಿಗೆ ಎರಡು ಸುತ್ತು ಗುಂಡು ಹೊಡೆದು ಬಂಧನ ಮಾಡಲಾಗಿದೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನು ಓದಿ; ಉತ್ತರಾಖಂಡದ 25ನೇ ಸಂಸ್ಥಾಪನಾ ದಿನ: ರಾಜ್ಯದ ಜನತೆಗೆ ಗಣ್ಯರಿಂದ ಶುಭಾಶಯ

ಪ್ರಕರಣದ ಹಿನ್ನೆಲೆ: ಆನೇಕಲ್ನಲ್ಲಿ ಇತ್ತೀಚೆಗೆ ನಡೆದ  ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದರು.ಬಂಧನದ ವೇಳೆ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮಾಡಲು ಅಥವಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಮತ್ತು ಆರೋಪಿಯನ್ನು ಸೆರೆ ಹಿಡಿಯಲು ಅವನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಕಿಡ್ನಾಪ್ ಅಂಡ್ ಮರ್ಡರ್ ಕೇಸ್ ಆರೋಪಿ ಮೇಲೆ ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಫೈರ್ಮಾಡಿದ್ದಾರೆ.

ಆರೋಪಿಯ ಸ್ಥಿತಿ: ಗುಂಡಿನ ದಾಳಿಯಿಂದ ಗಾಯಗೊಂಡ ಆರೋಪಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣದ ಆರೋಪಿಯ ಮೇಲೆ ಗುಂಡು ಹಾರಿಸಿದ ಘಟನೆಯು ಪೊಲೀಸ್ ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿದೆ. ಇದರಿಂದಾಗಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.