ಮೈಸೂರು, 9: ಮೈಸೂರು ಜಿಲ್ಲೆಯ ಖ್ಯಾತಿ ಹೊಂದಿರುವ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ನಡೆಸಿದ ಭಯಂಕರ ರ್ಯಾಗಿಂಗ್ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 25ರಂದು ಘಟನೆ ನಡೆದಿದ್ದರೂ, ಇದುವರೆಗೆ ಯಾವುದೇ ಪೊಲೀಸ್ ದಾಖಲೆಯಾಗಿಲ್ಲ.
ಹಲ್ಲೆಯಿಂದ ಬಾಲಕನ ವೃಷಣಕ್ಕೆ ಗಂಭೀರ ಗಾಯವಾಗಿದ್ದು, ಈ ಪ್ರಕರಣವು ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್‌ನ ಭೀತಿಯನ್ನು ಹೆಚ್ಚಿಸಿದೆ. 8ನೇ ತರಗತಿಯ ಲೀಡರ್ ಆಗಿದ್ದ 13 ವರ್ಷದ ಈ ಅಪ್ರಾಪ್ತ ಬಾಲಕನನ್ನು ಮೂವರು ವಿದ್ಯಾರ್ಥಿಗಳು ಪ್ರತಿದಿನ ಹಣ ಕೊಡಿಸಿ, ಮೊಬೈಲ್ ತರಲು ಒತ್ತಾಯ ಮಾಡುತ್ತಾ ರ್ಯಾಗಿಂಗ್ ಮಾಡುತ್ತಿದ್ದರು. 'ನಾವು ಹೇಳಿದಂತೆ ಮಾಡು' ಎಂದು ಧಮ್ಕಿ ಹಾಕುತ್ತಿದ್ದರು. INHEAVEN Bridal Princess Girl Tiara and Rhinestone Crown Headband Hair Accessories for Women Wedding Ceremony Party (Multicolor)
ಅಕ್ಟೋಬರ್ 25ರಂದು ಸಹ ಆತನನ್ನು ಪೀಡಿಸಿದ್ದರು. ಬಾಲಕ ಇದರ ಬಗ್ಗೆ ಪ್ರಶ್ನಿಸಿದಾಗ, ಮೂವರು ಬಾಲಕರು ಅವನನ್ನು ಶೌಚಾಲಯಕ್ಕೆ ಕರೆತಂದು, ಗುಪ್ತಾಂಗಗಳಿಗೆ ಒದ್ದು ಹೊಡೆದು ಗಂಭೀರವಾಗಿ ಗಾಯಪಡಿಸಿದ್ದರು. ಈ ಹಲ್ಲೆಯಿಂದ ಬಾಲಕನ ವೃಷಣಕ್ಕೆ ತೀವ್ರ ಗಾಯವಾಗಿ, ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಈ ಘಟನೆಯು ಶಾಲಾ ಆಡಳಿತ ಮತ್ತು ಪೋಲೀಸ್ ಇಲಾಖೆಯಲ್ಲಿ ಚರ್ಚೆಗೆ ಒಳಗಾಗಿದ್ದು, ತ್ವರಿತವಾಗಿ ತನಿಖೆ ನಡೆಸಿ ಕಾರ್ಯವಾಹಿಗಳು ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.