Skip to main content
ವಿಡಿಯೋ
1/3
politics

ಬಿಹಾರ ವಿಧಾನಸಭಾ ಚುನಾವಣೆ: ನಾಳೆ ಎರಡನೇ ಹಾಗೂ ಕೊನೆಯ ಹಂತದ ಮತದಾನ!

By Bhavana Gowda
ಬಿಹಾರ ವಿಧಾನಸಭಾ ಚುನಾವಣೆ: ನಾಳೆ ಎರಡನೇ ಹಾಗೂ ಕೊನೆಯ ಹಂತದ ಮತದಾನ!

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಕೊನೆಯ ಹಂತದ ಮತದಾನಕ್ಕೆ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ.

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಕೊನೆಯ ಹಂತದ ಮತದಾನಕ್ಕೆ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ನಾಳೆ, ಅಂದರೆ ನವೆಂಬರ್ 11 ರಂದು, ರಾಜ್ಯದ 20 ಜಿಲ್ಲೆಗಳ ಒಟ್ಟು 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಸುಮಾರು 3.7 ಕೋಟಿ ಮತದಾರರು ನಾಳೆ ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಒಟ್ಟು 1,302 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಆಡಳಿತಾರೂಢ ಎನ್‌ಡಿಎ ಮತ್ತು ಮಹಾ ಮೈತ್ರಿಕೂಟ (INDIA) ದ ಪ್ರಮುಖ ನಾಯಕರು ಭಾನುವಾರ ತಮ್ಮ ಅಬ್ಬರದ ಪ್ರಚಾರಕ್ಕೆ ತೆರೆ ಎಳೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎನ್‌ಡಿಎ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಅವರು ಮಹಾ ಮೈತ್ರಿಕೂಟದ ಪರವಾಗಿ ರ‍್ಯಾಲಿಗಳನ್ನು ನಡೆಸಿ ಮತಯಾಚಿಸಿದ್ದಾರೆ.

ಮೊದಲ ಹಂತದ (ನವೆಂಬರ್ 6) ಮತದಾನವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಶೇ. 65.1ರಷ್ಟು ಮತ ಚಲಾವಣೆಯಾಗಿದೆ. ಎರಡೂ ಹಂತಗಳ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶವು ನವೆಂಬರ್ 14 ರಂದು ಪ್ರಕಟವಾಗಲಿದೆ. ಬಿಹಾರದ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಈ ಹಂತದ ಮತದಾನವು ಎಲ್ಲರ ಗಮನ ಸೆಳೆದಿದೆ.