ನವೆಂಬರ್ 10, 2025 ರಂದು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಡಿ-ಗ್ಯಾಂಗ್' ಗೆ ಮಹತ್ವದ ದಿನವಾಗಿದೆ. ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್ ಪ್ರಕ್ರಿಯೆ ನಡೆಯಲಿದ್ದು, ಇಂದು ನ್ಯಾಯಾಲಯವು ಟ್ರಯಲ್ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆಯಿದೆ.Arayna Women's Cotton Printed Floral Straight Kurta with Palazzo Pants and Dupatta
ಕಳೆದ ವಿಚಾರಣೆಯಲ್ಲಿ ಆರೋಪಿಗಳ ವಿರುದ್ಧದ ಆರೋಪ ಪಟ್ಟಿಯನ್ನು ನ್ಯಾಯಾಧೀಶರು ಓದಿ ಹೇಳಿದಾಗ, ಆರೋಪಿಗಳು ಅವು ಸುಳ್ಳು ಎಂದು ಪ್ರತಿಕ್ರಿಯಿಸಿದ್ದರು. ನಂತರ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿತ್ತು.
ಇಂದು, 64 ಸಿಸಿಹೆಚ್ ನ್ಯಾಯಾಲಯವು ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ. ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದ್ದು, ದರ್ಶನ್ ಸೇರಿದಂತೆ ಆರು ಮಂದಿ ಜೈಲಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ. ಉಳಿದ ಆರೋಪಿಗಳು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.ಇದನ್ನು ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಗೌಡ ಪುನರ್ ಪರಿಶೀಲನಾ ಅರ್ಜಿ ಸುಪ್ರೀಂ ಕೋರ್ಟ್‍ನಲ್ಲಿ ವಜಾ
ದೋಷಾರೋಪಣೆಯನ್ನು ಸುಳ್ಳು ಎಂದು ಹೇಳಿದ ಡಿ-ಗ್ಯಾಂಗ್‌ಗೆ ಇಂದು ಮಹತ್ವದ ದಿನವಾಗಿದ್ದು, ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಲಿದೆ. ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾದ ಸಾಕ್ಷಿಗಳ ಹೆಸರು ಮತ್ತು ವಿವರಗಳನ್ನು ನೀಡಲಾಗುವುದು.
ಚಾರ್ಜ್ ಶೀಟ್‌ನಲ್ಲಿ 272ಕ್ಕೂ ಹೆಚ್ಚು ಸಾಕ್ಷ್ಯಗಳಿದ್ದು, ಅವುಗಳ ಸಂಪೂರ್ಣ ಪಟ್ಟಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ. ಟ್ರಯಲ್ ಸಮಯದಲ್ಲಿ ಪ್ರಮುಖ ಸಾಕ್ಷ್ಯಗಳನ್ನು ಪರಿಗಣಿಸಿ ವಿಚಾರಣೆ ನಡೆಸಲಾಗುವುದು.
272 ಸಾಕ್ಷ್ಯಗಳಲ್ಲಿ 70ಕ್ಕೂ ಹೆಚ್ಚು ಪ್ರಮುಖ ಸಾಕ್ಷ್ಯಗಳ ವಿಚಾರಣೆ ಇಂದೇ ನಡೆಯುವ ಸಾಧ್ಯತೆಯಿದೆ. ನಾಲ್ವರು ಪ್ರತ್ಯಕ್ಷದರ್ಶಿಗಳು, ಡಿಜಿಟಲ್ ಸಾಕ್ಷ್ಯಗಳು, ತಾಂತ್ರಿಕ ಸಾಕ್ಷ್ಯಗಳು, ಸಂದರ್ಭಾನುಸಾರ ಸಾಕ್ಷ್ಯಗಳು, ಮರಣೋತ್ತರ ಪರೀಕ್ಷೆ ವರದಿ, ಎಫ್‌ಎಸ್‌ಎಲ್ ವರದಿಗಳು, ಆರೋಪಿಗಳ ಕಾಲ್ ಡಿಟೇಲ್ಸ್, ಮೊಬೈಲ್ ರಿಟ್ರೀವ್ ವರದಿ, ಮಹಜರು ವರದಿಗಳು, ಎಫ್‌ಎಸ್‌ಎಲ್ ಅಧಿಕಾರಿಗಳು ಮತ್ತು ಪಂಚರ ಹೇಳಿಕೆಗಳು, ಬಟ್ಟೆ ಮತ್ತು ಪಾದರಕ್ಷೆಗಳ ಎಫ್‌ಎಸ್‌ಎಲ್ ವರದಿಗಳನ್ನು ಇಟ್ಟುಕೊಂಡು ಇಂದು ವಿಚಾರಣೆ ನಡೆಸಲಾಗುವುದು.