Skip to main content
ವಿಡಿಯೋ
1/2
politics

ಮುಸ್ಲಿಮರಲ್ಲಿ ಒಳ್ಳೆಯ ಮತ್ತು ಕೆಟ್ಟವರನ್ನು ಪ್ರತ್ಯೇಕಿಸಬೇಕು: ಮೋಹನ್ ಭಾಗ್ವತ್

By Gireesh Vasishta
ಮುಸ್ಲಿಮರಲ್ಲಿ ಒಳ್ಳೆಯ ಮತ್ತು ಕೆಟ್ಟವರನ್ನು ಪ್ರತ್ಯೇಕಿಸಬೇಕು: ಮೋಹನ್ ಭಾಗ್ವತ್

ಮುಖ್ಯ ಹೇಳಿಕೆಗಳು:- ಒಂದೇ ವರ್ಗೀಕರಣ ಸರಿಯಲ್ಲ: "ಎಲ್ಲರನ್ನೂ ಒಂದೇ ವರ್ಗಕ್ಕೆ ಹಾಕುವುದು ಸರಿಯಲ್ಲ. ನಾವು ಹಿಂದೂಗಳು, ನಾವು ಆ ರೀತಿ ಯೋಚಿಸುವುದಿಲ್ಲ" ಎಂದು ಭಾಗವತ್ ಸ್ಪಷ್ಟಪಡಿಸಿದರು. ಒಂದು ವೇಳೆ ಇಡೀ ಸಮುದಾಯವನ್ನು ದೂಷಿಸಿದರೆ, ಕಟುವಾದ (fundamentalists) ಜನರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಅವರು ಎಚ್ಚರಿಸಿದರು.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗ್ವತ್ ಅವರು ಮುಸ್ಲಿಂ ಸಮುದಾಯದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಎಲ್ಲ ಮುಸ್ಲಿಮರನ್ನು ಒಂದೇ ವರ್ಗಕ್ಕೆ ಸೇರಿಸುವುದು ಸರಿಯಲ್ಲ, ಬದಲಿಗೆ ಒಳ್ಳೆಯ ಮತ್ತು ಕೆಟ್ಟ ಜನರನ್ನು ಪ್ರತ್ಯೇಕಿಸಿ ನೋಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

WEET Cotton T-Shirt and Pyjama Set for Men,Night Wear for Men,Men's Pyjama Set 122

ಆರ್ಎಸ್ಎಸ್ ಶತಮಾನೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ 'ನ್ಯೂ ಹಾರಿಜಾನ್ಸ್' ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಭಾಗ್ವತ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಹೇಳಿಕೆಗಳು:-‌ ಒಂದೇ ವರ್ಗೀಕರಣ ಸರಿಯಲ್ಲ: "ಎಲ್ಲರನ್ನೂ ಒಂದೇ ವರ್ಗಕ್ಕೆ ಹಾಕುವುದು ಸರಿಯಲ್ಲ. ನಾವು ಹಿಂದೂಗಳು, ನಾವು ರೀತಿ ಯೋಚಿಸುವುದಿಲ್ಲ" ಎಂದು ಭಾಗವತ್ ಸ್ಪಷ್ಟಪಡಿಸಿದರು. ಒಂದು ವೇಳೆ ಇಡೀ ಸಮುದಾಯವನ್ನು ದೂಷಿಸಿದರೆ, ಕಟುವಾದ (fundamentalists) ಜನರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಅವರು ಎಚ್ಚರಿಸಿದರು.ಇದನ್ನು ಓದಿ; ಗೋವಾ ಐರನ್ ಮ್ಯಾನ್ 70.3 ಯುವ ಉತ್ಸಾಹಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ: ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯಗೆ ಅಭಿನಂದನೆ

"ಲವ್ ಜಿಹಾದ್" ಮತ್ತು "ಗಝವಾ--ಹಿಂದ್"ಗೆ ಹೆಚ್ಚಿನ ಮುಸ್ಲಿಮರ ವಿರೋಧ: ಭಾರತದಲ್ಲಿರುವ ಹೆಚ್ಚಿನ ಮುಸ್ಲಿಮರು 'ಲವ್ ಜಿಹಾದ್' (Love Jihad) ಅಥವಾ 'ಗಝವಾ--ಹಿಂದ್' (Ghazwa-e-Hind) ನಂತಹ ವಿಚಾರಗಳನ್ನು ಬೆಂಬಲಿಸುವುದಿಲ್ಲ. ಆದರೆ, ಸಮುದಾಯದಲ್ಲಿ ಗಮನಾರ್ಹ ಸಂಖ್ಯೆಯ ಕಟ್ಟರ್ಪಂಥಿಗಳು ಇರುವುದನ್ನು ಅವರು ಒಪ್ಪಿಕೊಂಡರು. "ಒಳ್ಳೆಯ ಜನರನ್ನು, ಕೆಟ್ಟ ಜನರ ಗುಂಪಿನಿಂದ ಪ್ರತ್ಯೇಕಿಸಬೇಕು. ಒಳ್ಳೆಯ ಮತ್ತು ಕೆಟ್ಟವರ ನಡುವೆ ವ್ಯತ್ಯಾಸವಿರಬೇಕು. ಅವರಿಬ್ಬರನ್ನು ಬೇರ್ಪಡಿಸಬೇಕು. ಎಲ್ಲರನ್ನೂ ಸಮಾನವಾಗಿ ನಡೆಸಲು ಸಾಧ್ಯವಿಲ್ಲ. ಬೇರೆ ಬೇರೆ ಜನರಿಗೆ ಬೇರೆ ಬೇರೆ ರೀತಿಯಲ್ಲಿ ವರ್ತಿಸಬೇಕು. ನಾವು ಇದನ್ನು ಮಾಡಬೇಕು" ಎಂದು ಭಾಗವತ್ ಹೇಳಿದರು.

ಸಂಘಕ್ಕೆ ಪ್ರವೇಶದ ಕುರಿತು: ಮುಸ್ಲಿಮರು, ಕ್ರೈಸ್ತರು ಸೇರಿದಂತೆ ಬೇರೆ ಧರ್ಮದವರು ಕೂಡ ಸಂಘಕ್ಕೆ ಬರಬಹುದು. ಆದರೆ, ಶಾಖೆಗೆ ಬಂದಾಗ 'ಭಾರತ ಮಾತೆಯ ಮಗ' ನಾಗಿ ಮತ್ತು ವಿಶಾಲ 'ಹಿಂದೂ ಸಮಾಜ' ಸದಸ್ಯನಾಗಿ ಗುರುತಿಸಿಕೊಳ್ಳಬೇಕು ಎಂದು ಅವರು ಪುನರುಚ್ಚರಿಸಿದರು.