ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜಿನಿ ಹಾಗೂ ಜಿಮ್ ತರಬೇತುದಾರ ಅರುಣ್, ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 10 ರಂದು ಬೆಳಗ್ಗೆ 9:30 ರಿಂದ 10:30 ರ ಶುಭ ಮುಹೂರ್ತದಲ್ಲಿ, ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇವರ ವಿವಾಹವು ಬೆಂಗಳೂರಿನಲ್ಲಿ ನೆರವೇರಿದೆ. ಇವರ ಮದುವೆಯ ಹೆಚ್ಚಿನ ವಿವರಗಳು ಇಲ್ಲಿವೆ.
ಜಿಮ್ ತರಬೇತುದಾರ ಅರುಣ್ ಅವರೊಂದಿಗೆ ರಜಿನಿ ಮದುವೆಯಾಗಿದ್ದಾರೆ. ಈ ಜೋಡಿ ಕಳೆದ ಎರಡು-ಮೂರು ವರ್ಷಗಳಿಂದ ರೀಲ್ಸ್‌ಗಳ ಮೂಲಕ ಗಮನ ಸೆಳೆದಿತ್ತು. ರೀಲ್ಸ್‌ಗಳಲ್ಲಿ ಇವರ ಜೋಡಿ ನೋಡಿ ಹಲವರು ಇವರು ಪ್ರೇಮಿಗಳು ಎಂದು ಊಹಿಸಿದ್ದರು. ಆದರೆ, ಇವರಿಬ್ಬರೂ ತಮ್ಮನ್ನು "ಸ್ನೇಹಿತರು" ಎಂದೇ ಪರಿಚಯಿಸಿಕೊಂಡಿದ್ದರು.
ಅರುಣ್ ಮತ್ತು ರಜಿನಿ ರೀಲ್ಸ್‌ನಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಇವರ ರೀಲ್ಸ್ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸದ್ದು ಮಾಡಿದ್ದವು. ಈ ಮೂಲಕವೇ ಈ ಜೋಡಿ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು.American Tourister Large Icor () 82Cms|Soft Spinner Carry On Trolley Bag for Travel|Wet Pocket| Expandable|Polyester Luggage|Combination Lock| 4 Wheel Suitcase for Men&Women (Teal)|Light Weight&Durable
ಆದರೆ, ಇವರಿಬ್ಬರು ಕೇವಲ ಸ್ನೇಹಿತರೇ ಅಥವಾ ಪ್ರೇಮಿಗಳೇ ಎಂಬ ಗೊಂದಲ ಹಲವರಲ್ಲಿತ್ತು. ಈಗ ಆ ಗೊಂದಲಕ್ಕೆ ತೆರೆ ಬಿದ್ದಿದೆ. ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ, ಸರಳವಾಗಿ ವಿವಾಹವಾದ ಮೂಲಕ ರಜಿನಿ ಮತ್ತು ಅರುಣ್ ದಂಪತಿಗಳಾಗಿದ್ದಾರೆ.
ಈ ಮದುವೆಯ ಫೋಟೊಗಳು ಮತ್ತು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸದ್ಯ ರಜಿನಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ನೀ ಇರಲು ಜೊತೆಯಲ್ಲಿ' ಧಾರಾವಾಹಿಯಲ್ಲಿ ಖಡಕ್ ಅತ್ತಿಗೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ: ರೇಣುಕಾಸ್ವಾಮಿ ಪ್ರಕರಣ: ದರ್ಶನ್ ಸೇರಿದಂತೆ 7 ಆರೋಪಿಗಳ ವಿಚಾರಣೆ ಮುಂದೂಡಿಕೆ
ರಜಿನಿ ತಮ್ಮ ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪ್ರತಿದಿನ ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕಾಮೆಂಟ್ ಮಾಡುವವರನ್ನು ನಿರ್ಬಂಧಿಸುವ ಕೆಲಸವನ್ನೂ ಅವರು ಮಾಡುತ್ತಾರೆ.
ಒಟ್ಟಾರೆ, ರಜಿನಿ ಅವರ ಜೀವನದಲ್ಲಿ ಸ್ನೇಹಿತ ಅರುಣ್ ಗೌಡ ಈಗ ಪತಿಯಾಗಿ ಹೊಸ ಅಧ್ಯಾಯ ಶುರುಮಾಡಿದ್ದಾರೆ. ಈ ಜೋಡಿಗೆ ಶುಭ ಹಾರೈಕೆಗಳು.