ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧಿಕಾರ ಮತ್ತು ಹಣದ ಲಾಲಸೆಗೆ ಪೌರಕಾರ್ಮಿಕರು ಬಳಲಿದ್ದಾರೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ಪೌರಕಾರ್ಮಿಕರಿಂದ ಹಣ ವಸೂಲಿ ಮಾಡುವ ವಿಚಾರವಾಗಿ ಮುಖ್ಯ ಆಯುಕ್ತರಾಗಿರುವ ಮಹೇಶ್ವರರಾವ್ ಅವರಿಗೆ ಕಾರ್ಮಿಕ ಸಂರಕ್ಷಣಾ ಟ್ರೇಡ್ ಯೂನಿಯನ್ ದೂರು ಸಲ್ಲಿಸಿದೆ.
ಪೌರಕಾರ್ಮಿಕರಿಂದ ತಿಂಗಳಿಗೆ 2 ರಿಂದ 3 ಸಾವಿರ ರೂ ಹಣ ವಸೂಲಿ ಮಾಡಿದ ಆರೋಪದಡಿ, ಸೂಪರ್ ವೈಸರ್ ಗಳಾದ ವೆಂಕಟೇಶ್ ಹಾಗೂ ಮೋಶಿಸ್ ಅಲಿಯಾಸ್ ಬಾಬ ಎನ್ನುವವರು ಹಣ ವಸೂಲಿ ಮಾಡುತ್ತಿರುವುದಾಗಿ ತಿಳಿದುಬಂದಿದೆ. ವೇತನ ಪಡೆಯುವುದಲ್ಲದೆ, ಜಿಬಿಎ ಹಾಗೂ ಗುತ್ತಿಗೆದಾರರಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಆಸ್ತಿ ಗಳಿಕೆ ಮಾಡಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. SPAZY CASE® Oppo K13 5g Premium Adavnced Tempered Glass | HD clarity Full Edge Protection for Oppo K13 5g 5G
ಈ ಬಗ್ಗೆ ಜಿಬಿಎಗೆ ಈ ಹಿಂದೆಯೂ ದೂರು ನೀಡಲಾಗಿತ್ತಾದರೂ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿಸಲಾಗಿದೆ. ಹೀಗಾಗಿ ಕೂಡಲೇ ಇದಕ್ಕೆ ಸಂಬಂಧಪಟ್ಟವರ ಜಾಲವನ್ನು ಬಯಲಿಗೆಳೆದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ, ಅಧಿಕಾರಿಗಳಿಗೆ ಮನವಿಯನ್ನು ತಿಳಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಜೈಲಲ್ಲಿ ಖೈದಿಗಳಿಗೆ ರಾಜಾತಿಥ್ಯ - ಉನ್ನತ ಮಟ್ಟದ ಸಮಿತಿ ರಚನೆ ಹಾಗೂ ತನಿಖೆಗೆ ಆದೇಶ - ಜಿ.ಪರಮೇಶ್ವರ್