ಬೆಂಗಳೂರು/ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದವರ ಬಂಧನ ಮತ್ತು ತನಿಖೆಗಳ ಸಂದರ್ಭದಲ್ಲಿ ಜೈವಿಕ ಯುದ್ಧಕ್ಕೆ (Bio-War) ಬಳಸುವ ಅತ್ಯಂತ ಮಾರಕ ವಿಷವಾದ 'ರಿಸಿನ್' (Ricin) ಕುರಿತು ಮಾಹಿತಿ ಬಹಿರಂಗಗೊಂಡಿರುವುದು ದೇಶಾದ್ಯಂತ ಆತಂಕ ಮೂಡಿಸಿದೆ. ಕೆಲ ಉಗ್ರಗಾಮಿ ಗುಂಪುಗಳು ರಿಸಿನ್ ವಿಷವನ್ನು ಬಳಸಿ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ.ಇದನ್ನು ಓದಿ; ಸಂಜುಗಾಗಿ ಜಡೇಜಾರನ್ನು ಕಳೆದುಕೊಳ್ಳಬೇಡಿ: ಚೆನ್ನೈ ಫ್ರಾಂಚೈಸಿಗೆ ಎಚ್ಚರಿಕೆ ಕೊಟ್ಟ ಮಾಜಿ ಕ್ರಿಕೆಟರ್; ಏನಿದು ಡೀಲ್?
ಏನಿದು ರಿಸಿನ್ (Ricin) ಪಾಯ್ಸನ್?
ರಿಸಿನ್ ಎಂಬುದು ಕ್ಯಾಸ್ಟರ್ ಬೀನ್ಸ್ (Castor Beans) ಅಥವಾ ಹರಳು ಬೀಜಗಳಿಂದ ತಯಾರಿಸಲಾಗುವ ನೈಸರ್ಗಿಕ ವಿಷವಾಗಿದೆ. ಹರಳು ಬೀಜಗಳನ್ನು ಎಣ್ಣೆ ತೆಗೆಯಲು ಬಳಸಿದ ನಂತರ ಉಳಿದಿರುವ ತಿರುಳಿನಿಂದ ಈ ಪುಡಿಯನ್ನು ಹೊರತೆಗೆಯಲಾಗುತ್ತದೆ. ಇದು ಪ್ರಪಂಚದ ಅತ್ಯಂತ ಮಾರಕ ವಿಷಗಳಲ್ಲಿ ಒಂದಾಗಿದೆ. ದೇಶದಲ್ಲಿ ಅಪಯಕಾರಿ ಕೆಮಿಕಲ್‌ಗಳನ್ನು ಬಳಸಿ ಉಗ್ರರು ಬಯೋ ವಾರ್‌ಗೆ ಮುಂದಾಗಿರುವ ಆಘಾತಕಾರಿ ಸಂಗತಿಯೊಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS)ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.
ರಿಸಿನ್ ಏಕೆ ಅಪಾಯಕಾರಿ?
ತೀವ್ರ ವಿಷಕಾರಿ: ರಿಸಿನ್ ವಿಷವು ಸೈನೈಡ್ಗಿಂತ ಸಾವಿರಾರು ಪಟ್ಟು ಹೆಚ್ಚು ವಿಷಕಾರಿಯಾಗಿದೆ. ಇದರ ಒಂದು ಸಣ್ಣ ಕಣ (ಉಪ್ಪುಕಾಳಿನಷ್ಟು) ಕೂಡ ವಯಸ್ಕ ವ್ಯಕ್ತಿಯನ್ನು ಕೊಲ್ಲಲು ಸಾಕು. ಕಾರ್ಯನಿರ್ವಹಣೆ: ಇದು ದೇಹದೊಳಗೆ ಪ್ರವೇಶಿಸಿದ ನಂತರ ಕೋಶಗಳ (Cells) ಒಳಗೆ ಪ್ರೋಟೀನ್ ಉತ್ಪಾದನೆಯನ್ನು ತಡೆಯುತ್ತದೆ. ಇದರಿಂದ ದೇಹದ ಅಂಗಾಂಗಗಳು ನಿಷ್ಕ್ರಿಯಗೊಂಡು ವ್ಯಕ್ತಿ ಕೆಲವೇ ಕ್ಷಣ ಅಥವಾ ಗಂಟೆಗಳಲ್ಲಿ ಸಾವನ್ನಪ್ಪುತ್ತಾನೆ.
ಚಿಕಿತ್ಸೆ ಇಲ್ಲ: ರಿಸಿನ್ ವಿಷಕ್ಕೆ ಇದುವರೆಗೆ ಯಾವುದೇ ನಿರ್ದಿಷ್ಟ ಮದ್ದು (Antidote) ಲಭ್ಯವಿಲ್ಲ. ವೈದ್ಯರು ರೋಗಲಕ್ಷಣಗಳ ಆಧಾರದ ಮೇಲೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯ.BULLMER Trendy Clothing Set with Shirt & Pants Co-ords for Men
⚠️ ಭಯೋತ್ಪಾದಕರ ಸಂಚು ಮತ್ತು ಆತಂಕ-
ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ISKP) ಗೆ ಸಂಬಂಧಿಸಿದ ಶಂಕಿತ ಭಯೋತ್ಪಾದಕ ಯೋಜನೆಯ ಭಾಗವಾಗಿ, ಅತ್ಯಂತ ಮಾರಕ ರಾಸಾಯನಿಕ ವಿಷವಾದ ರಿಸಿನ್ ಅನ್ನು ತಯಾರಿಸಿದ ಆರೋಪದ ಮೇಲೆ ಚೀನಾದಿಂದ ವೈದ್ಯಕೀಯ ಪದವಿ ಪಡೆದ ವೈದ್ಯನನ್ನು ATS ಬಂಧಿಸಿದೆ. ATS ಅಧಿಕಾರಿಗಳ ಪ್ರಕಾರ ಬಂಧಿತ ಆರೋಪಿಗಳನ್ನು ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್, ಆಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಮೊಹಮ್ಮದ್ ಸಲೀಮ್ ಎಂದು ಗುರುತಿಸಲಾಗಿದೆ.