Skip to main content
ವಿಡಿಯೋ
1/3
crime

ಬ್ರೇಕಿಂಗ್ ನ್ಯೂಸ್ | ದೆಹಲಿ ಕೆಂಪು ಕೋಟೆ ಸ್ಫೋಟ: ಪುಲ್ವಾಮಾ ಸಂಪರ್ಕ ಬಯಲು!

By Gireesh Vasishta
ಬ್ರೇಕಿಂಗ್ ನ್ಯೂಸ್ | ದೆಹಲಿ ಕೆಂಪು ಕೋಟೆ ಸ್ಫೋಟ: ಪುಲ್ವಾಮಾ ಸಂಪರ್ಕ ಬಯಲು!

ಸ್ಫೋಟಗೊಂಡ ಹರಿಯಾಣ ನೋಂದಣಿ ಹೊಂದಿರುವ ಹ್ಯುಂಡೈ ಐ20 (Hyundai i20) ಕಾರು ಹಲವು ಬಾರಿ ಕೈ ಬದಲಾಗಿದೆ. ಈ ಕಾರು ಇತ್ತೀಚೆಗೆ ಪುಲ್ವಾಮಾದ ತಾರಿಕ್ ಎಂಬುವವರಿಗೆ ಮಾರಾಟವಾಗಿತ್ತು ಎಂದು ಮೂಲಗಳು ತಿಳಿಸಿವೆ. ತನಿಖಾಧಿಕಾರಿಗಳು ಸದ್ಯ ಕಾರಿನ ಮಾರಾಟದ ಹಾದಿಯನ್ನು ಪತ್ತೆಹಚ್ಚುತ್ತಿದ್ದು, ತಾರಿಕ್ ಬಳಿಯೇ ವಾಹನ ಇತ್ತೇ ಅಥವಾ ಅದನ್ನು ಮತ್ತಷ್ಟು ಮಾರಾಟ ಮಾಡಿದ್ದಾನೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ದೆಹಲಿ: ನವದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಿನ್ನೆ ಸಂಭವಿಸಿದ ಭೀಕರ ಕಾರು ಸ್ಫೋಟದ ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯವಾಗಿದೆ. ಸ್ಫೋಟಗೊಂಡ ಕಾರು (ಹ್ಯುಂಡೈ 20) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ನಿವಾಸಿ ತಾರಿಕ್ ಎಂಬಾತನ ಮಾಲೀಕತ್ವದಲ್ಲಿತ್ತು ಎಂದು ತಿಳಿದುಬಂದಿದೆ. i20 ಕಾರ್‌ ಸ್ಪೋಟಕ್ಕೂ ಮುಂಚೆ ರೆಡ್‌ಪೋರ್ಟ್‌ ಬಳಿಯ ಸಿಗ್ನಲ್‌ ಬಳಿ ಕಾಣಿಸಿಕೊಂಡಿದೆ.

🚘 ಸ್ಫೋಟಗೊಂಡ ವಾಹನ ಮತ್ತು ಮಾಲೀಕತ್ವ

ಸ್ಫೋಟಗೊಂಡ ಹರಿಯಾಣ ನೋಂದಣಿ ಹೊಂದಿರುವ ಹ್ಯುಂಡೈ 20 (Hyundai i20) ಕಾರು ಹಲವು ಬಾರಿ ಕೈ ಬದಲಾಗಿದೆ. ಕಾರು ಇತ್ತೀಚೆಗೆ ಪುಲ್ವಾಮಾದ ತಾರಿಕ್ ಎಂಬುವವರಿಗೆ ಮಾರಾಟವಾಗಿತ್ತು ಎಂದು ಮೂಲಗಳು ತಿಳಿಸಿವೆ. ತನಿಖಾಧಿಕಾರಿಗಳು ಸದ್ಯ ಕಾರಿನ ಮಾರಾಟದ ಹಾದಿಯನ್ನು ಪತ್ತೆಹಚ್ಚುತ್ತಿದ್ದು, ತಾರಿಕ್ ಬಳಿಯೇ ವಾಹನ ಇತ್ತೇ ಅಥವಾ ಅದನ್ನು ಮತ್ತಷ್ಟು ಮಾರಾಟ ಮಾಡಿದ್ದಾನೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ತನಿಖೆಯ ಪ್ರಮುಖ ಅಂಶಗಳು-

ದೆಹಲಿ ಪೊಲೀಸರು (Delhi Police), ಎನ್ಐಎ (NIA), ಮತ್ತು ಎನ್ಎಸ್ಜಿ (NSG) ತಂಡಗಳು ತನಿಖೆ ಮುಂದುವರೆಸಿವೆ. ಘಟನೆಯ ಸಂಬಂಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಸೆಕ್ಷನ್ 16 ಮತ್ತು 18 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.TRASE Block Heels Sandals For Women, Dusky Stylish & Comfortable Footwear

ಸ್ಫೋಟಕ್ಕೆ ಸಂಬಂಧಿಸಿ ಫರಿದಾಬಾದ್ ಮಾಡ್ಯೂಲ್ ಶಂಕಿತ ಉಮರ್ ಎಂಬಾತನ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರು ನಿಲುಗಡೆ ಪ್ರದೇಶಕ್ಕೆ ಪ್ರವೇಶಿಸಿ ನಿರ್ಗಮಿಸುವ ದೃಶ್ಯಗಳು ಸೇರಿದಂತೆ 100ಕ್ಕೂ ಹೆಚ್ಚು ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ಒಂಬತ್ತು ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಫೋಟದ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.  ದೆಹಲಿಯ ಪ್ರಮುಖ ಸ್ಥಳಗಳು, ರೈಲ್ವೆ ನಿಲ್ದಾಣಗಳು ಮತ್ತು ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿ, ವಾಹನ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.