Skip to main content
ವಿಡಿಯೋ
1/2
general

RBI ಕ್ರಾಂತಿಕಾರಿ ಹೆಜ್ಜೆ - ಇನ್ಮುಂದೆ ಚಿನ್ನದಂತೆಯೇ ಬೆಳ್ಳಿ ಮೇಲೂ ಸಾಲ!

By Vinutha U
RBI ಕ್ರಾಂತಿಕಾರಿ ಹೆಜ್ಜೆ - ಇನ್ಮುಂದೆ ಚಿನ್ನದಂತೆಯೇ ಬೆಳ್ಳಿ ಮೇಲೂ ಸಾಲ!

ಈ ಕ್ರಮವು ಗ್ರಾಮೀಣ ಮತ್ತು ನಗರ ಪ್ರದೇಶಗಳ ಕೋಟ್ಯಂತರ ಜನರಿಗೆ ತುರ್ತು ಹಣಕಾಸಿನ ಅಗತ್ಯಗಳನ್ನು ಪೂರೈಸಲು ಒಂದು ಹೊಸ ಮಾರ್ಗವನ್ನು ತೆರೆಯಲಿದೆ. ಗ್ರಾಹಕರ ರಕ್ಷಣೆಗಾಗಿ ​RBI ಯು ಸಾಲಗಾರರ ಹಿತಾಸಕ್ತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಮುಂಬೈ - ​ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ವಲಯದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದೆ. ಚಿನ್ನಾಭರಣಗಳ ಮೇಲೆ ಮಾತ್ರವಲ್ಲದೆ, ಇನ್ಮುಂದೆ ಬೆಳ್ಳಿ ಆಭರಣಗಳು ಮತ್ತು ನಾಣ್ಯಗಳ ಮೇಲೂ ಸಾಲ ನೀಡಲು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಅವಕಾಶ ನೀಡುವ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಕ್ರಮವು ಗ್ರಾಮೀಣ ಮತ್ತು ನಗರ ಪ್ರದೇಶಗಳ ಕೋಟ್ಯಂತರ ಜನರಿಗೆ ತುರ್ತು ಹಣಕಾಸಿನ ಅಗತ್ಯಗಳನ್ನು ಪೂರೈಸಲು ಒಂದು ಹೊಸ ಮಾರ್ಗವನ್ನು ತೆರೆಯಲಿದೆ. ಗ್ರಾಹಕರ ರಕ್ಷಣೆಗಾಗಿ ​RBI ಯು ಸಾಲಗಾರರ ಹಿತಾಸಕ್ತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಬೆಳ್ಳಿಯ ಮೌಲ್ಯವನ್ನು ನಿರ್ಧರಿಸಲು, ಅಡವಿಡುವ ದಿನಾಂಕದ ಹಿಂದಿನ 30 ದಿನಗಳ ಸರಾಸರಿ ಮುಕ್ತಾಯ ಬೆಲೆ ಅಥವಾ ಹಿಂದಿನ ದಿನದ ಮುಕ್ತಾಯ ಬೆಲೆ ಪರಿಗಣಿಸಲಾಗುತ್ತದೆ. ಈ ದರವನ್ನು SEBI ವಿನಿಮಯ ಕೇಂದ್ರಗಳು ಪ್ರಕಟಿಸುತ್ತವೆ. ಸಾಲ ನೀಡುವ ಸಂಸ್ಥೆಗಳು ಸಾಲಗಾರರ ಸಮ್ಮುಖದಲ್ಲಿಯೇ ಬೆಳ್ಳಿಯ ಶುದ್ಧತೆ ಮತ್ತು ತೂಕವನ್ನು ಪರೀಕ್ಷಿಸಬೇಕು. ಬೆಲೆಯ ಪ್ರಮಾಣಪತ್ರವನ್ನು ಗ್ರಾಹಕರಿಗೆ ಒದಗಿಸುವುದು ಕಡ್ಡಾಯವಾಗಿದೆ. ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ ನಂತರ, ಅಡವಿಟ್ಟ ಬೆಳ್ಳಿಯನ್ನು ಹಿಂತಿರುಗಿಸಲು ತಡವಾದರೆ, ಆ ಸಂಸ್ಥೆಯು ಪ್ರತಿ ದಿನಕ್ಕೆ 5,000 ರೂ ದಂಡವನ್ನು ಗ್ರಾಹಕರಿಗೆ ಪಾವತಿಸಬೇಕಾಗುತ್ತದೆ.

​ಸಾಲ ಮರುಪಾವತಿಯಲ್ಲಿ ವಿಫಲವಾದರೆ, ಹರಾಜು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು. ಹರಾಜಿನ ಬಗ್ಗೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಕಡ್ಡಾಯ. ಹರಾಜಿನ ಕಾಯ್ದಿರಿಸಿದ ಬೆಲೆ ಬೆಳ್ಳಿಯ ಪ್ರಸ್ತುತ ಮೌಲ್ಯದ ಶೇ. 90ಕ್ಕಿಂತ ಕಡಿಮೆ ಇರಬಾರದು. ಈ ಹೊಸ ನಿಯಮವು ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಬೆಳ್ಳಿಯನ್ನು ಒಂದು ಆರ್ಥಿಕ ಸ್ವತ್ತು ಎಂದು ಗುರುತಿಸಿರುವುದರಿಂದ, ವಿಶೇಷವಾಗಿ ಗ್ರಾಮೀಣ ಮತ್ತು ಸಣ್ಣ ಉದ್ಯಮದಾರರಿಗೆ ಸಾಲದ ಲಭ್ಯತೆ ಹೆಚ್ಚುತ್ತದೆ. INHEAVEN Bridal Princess Girl Tiara and Rhinestone Crown Headband Hair Accessories for Women Wedding Ceremony Party (Multicolor)

RBIಯ ಹೊಸ ನಿಯಮದ ಪ್ರಕಾರ 2026ರ ಏಪ್ರಿಲ್ 1 ರಿಂದ ಬ್ಯಾಂಕ್‌ಗಳು ಬೆಳ್ಳಿ ಆಭರಣ ಮತ್ತು ನಾಣ್ಯಗಳನ್ನು ಗರಿಷ್ಠ 10 ಕೆ.ಜಿ. ಆಭರಣ, 500 ಗ್ರಾಂ ನಾಣ್ಯ ಅಡಮಾನವಾಗಿ ಸ್ವೀಕರಿಸಬಹುದು. 2.5 ಲಕ್ಷ ರೂ. ವರೆಗಿನ ಸಾಲಕ್ಕೆ ಬೆಳ್ಳಿಯ ಮೌಲ್ಯದ ಗರಿಷ್ಠ ಶೇ.85 ರವರೆಗೆ ಸಾಲ ಪಡೆಯಬಹುದು. 5 ಲಕ್ಷ ರೂ. ಗಿಂತ ಹೆಚ್ಚಿನ ಸಾಲಕ್ಕೆ 75% ರಷ್ಟು ಸಾಲ ಲಭ್ಯವಾಗಲಿದೆ. ಸಾಲ ಮರುಪಾವತಿ ನಂತರ ಬೆಳ್ಳಿ ಬಿಡುಗಡೆ ತಡವಾದರೆ, ಬ್ಯಾಂಕ್‌ಗಳು ಗ್ರಾಹಕರಿಗೆ ದಿನಕ್ಕೆ 5000 ರೂ. ದಂಡ ಪಾವತಿಸಬೇಕಾಗುತ್ತದೆ. ಹರಾಜು ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು.