Skip to main content
ವಿಡಿಯೋ
1/3
cinema

ಇವರು ವಿಷನರಿ ಎಂದ ಚಿರಂಜೀವಿ...ಕ್ಷಮೆ ಕೇಳಿದ ರಾಮ್‌ ಗೋಪಾಲ್‌ ವರ್ಮಾ! ʼಶಿವʼ ಸಿನಿಮಾ ರೀ ರಿಲೀಸ್!‌

By Ram Chethan
ಇವರು ವಿಷನರಿ ಎಂದ ಚಿರಂಜೀವಿ...ಕ್ಷಮೆ ಕೇಳಿದ ರಾಮ್‌ ಗೋಪಾಲ್‌ ವರ್ಮಾ! ʼಶಿವʼ ಸಿನಿಮಾ ರೀ ರಿಲೀಸ್!‌

ಚಿರಂಜೀವಿ ‘ಶಿವ’ ಸಿನಿಮಾವನ್ನು ಪ್ರಶಂಸಿಸಿದ ವಿಡಿಯೋ ಹಂಚಿಕೊಂಡ ನಂತರ, ನಿರಂತರ ವ್ಯಂಗ್ಯ ಮಾಡುತ್ತಿದ್ದ ರಾಮ್ ಗೋಪಾಲ್ ವರ್ಮಾ ಕ್ಷಮೆಯಾಚಿಸಿದ್ದಾರೆ. “ನಾನು ನೋವುಂಟು ಮಾಡಿದಿದ್ದರೆ ಸಾರಿ” ಎಂದಿರುವ ವರ್ಮಾ, ಚಿರಂಜೀವಿಯ ಮೆಚ್ಚುಗೆಗೆ ಋಣಿಯಾಗಿದ್ದಾರೆ. ತೆಲುಗು ಸಿನಿರಂಗದಲ್ಲಿ ಇದು ಸ್ನೇಹದ ಹೊಸ ಹಾದಿ ಎನ್ನಲಾಗಿದೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ವಿವಾದಾತ್ಮಕ ಟ್ವೀಟ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದ ಕೆಲವರ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡುವುದು, ಟೀಕೆ ಮಾಡುವ ಸಿನಿಮಾಗಳನ್ನು ನಿರ್ಮಿಸಿ ಬಿಡುಗಡೆ ಮಾಡುವುದು ಅವರಿಗೆ ರೂಢಿ.

ವಿಶೇಷವಾಗಿ, ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಬಗ್ಗೆ ಅವರು ಹಲವು ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇದೀಗ ರಾಮ್ ಗೋಪಾಲ್ ವರ್ಮಾ ಮೆಗಾಸ್ಟಾರ್ ಚಿರಂಜೀವಿಗೆ ಕ್ಷಮಾಪಣೆ ಕೇಳಿದ್ದಾರೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿ, ನಾಗಾರ್ಜುನ ನಟಿಸಿದ್ದ 'ಶಿವ' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಕಲ್ಟ್ ಸ್ಥಾನ ಪಡೆದುಕೊಂಡಿದೆ. ಚಲನಚಿತ್ರದ ವ್ಯಾಕರಣವನ್ನೇ ಬದಲಿಸಿದ ಆ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳಾಗಿವೆ.

ಈ ಸಂದರ್ಭದಲ್ಲಿ ಸಿನಿಮಾದ ಮರು ಬಿಡುಗಡೆ ಆಗುತ್ತಿದ್ದು, ಅದಕ್ಕಾಗಿ ಅದ್ದೂರಿ ಪ್ರಚಾರಗಳು ನಡೆಯುತ್ತಿವೆ. ನಟ ಮೆಗಾಸ್ಟಾರ್ ಚಿರಂಜೀವಿ 'ಶಿವ' ಸಿನಿಮಾದ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.Safari Genius Alley Set of 3 (Cabin + Medium + Large) Trolley Bags, Hard Case Polypropylene, 4 Wheels, 360 Degree Wheeling Luggage, Suitcase for Travel, Black

"'ಶಿವ' ಕೇವಲ ಸಿನಿಮಾ ಅಲ್ಲ, ಅದೊಂದು ಕ್ರಾಂತಿ. ಆ ಸಿನಿಮಾ ನೋಡಿ ನಾನು ಮೂಕವಿಸ್ಮಿತನಾಗಿದ್ದೆ" ಎಂದು ಚಿರಂಜೀವಿ ಕೊಂಡಾಡಿದ್ದಾರೆ. ನಟ ನಾಗಾರ್ಜುನ, ನಾಯಕಿ ಅಮಲಾ ಸೇರಿದಂತೆ ಸಿನಿಮಾದಲ್ಲಿ ನಟಿಸಿರುವ ಎಲ್ಲರನ್ನೂ ಅವರು ಪ್ರಶಂಸಿಸಿದ್ದಾರೆ.

ಜೊತೆಗೆ, ರಾಮ್ ಗೋಪಾಲ್ ವರ್ಮಾ ಅವರನ್ನು 'ವಿಷನರಿ' ಎಂದು ಹೊಗಳಿದ್ದಾರೆ ಚಿರಂಜೀವಿ. ವರ್ಮಾ ತಮ್ಮ ವಿರುದ್ಧ ಅದೆಷ್ಟೇ ಕಟು ಟೀಕೆ ಮಾಡಿದ್ದರೂ, ಚಿರಂಜೀವಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ.“ಇದು ಕ್ಷಮಿಸಲಾಗದು!” ಧರ್ಮೇಂದ್ರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಿದವರಿಗೆ ಹೇಮಾ ಮಾಲಿನಿಯ ಎಚ್ಚರಿಕೆ

"'ಶಿವ' ಸಿನಿಮಾ ನೋಡಿದಾಗಲೇ ವರ್ಮಾ ಒಬ್ಬ ಅದ್ಭುತ ನಿರ್ದೇಶಕ, ತೆಲುಗು ಚಿತ್ರರಂಗದ ಭವಿಷ್ಯ ಆ ವ್ಯಕ್ತಿ ಎಂಬುದು ನನಗೆ ಅರ್ಥವಾಯಿತು. ಆ ವ್ಯಕ್ತಿ 'ಶಿವ' ಸಿನಿಮಾವನ್ನು ನಿರ್ದೇಶಿಸಿದ ರೀತಿ, ಕ್ಯಾಮೆರಾ ಆಂಗಲ್, ನೆರಳು-ಬೆಳಕಿನ ಕಂಪೋಸಿಷನ್, ಸೌಂಡ್ ಎಲ್ಲವೂ ಭಿನ್ನವಾಗಿತ್ತು. ಆಗಿನ ಕಾಲಕ್ಕೆ ಬಹಳ ನವೀನ ಎನಿಸಿತ್ತು" ಎಂದು ಅವರು ಹೇಳಿದ್ದಾರೆ.

ಚಿರಂಜೀವಿ ಅವರ ಈ ವಿಡಿಯೋವನ್ನು ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ, "ಚಿರಂಜೀವಿ ಅವರಿಗೆ ಧನ್ಯವಾದಗಳು. ಅಲ್ಲದೆ, ನಾನು ಈ ಸಮಯದಲ್ಲಿ ನಿಮ್ಮ ಕ್ಷಮೆ ಕೇಳಲೇಬೇಕು. ನಾನು ನಿಮಗೆ ಉದ್ದೇಶಪೂರ್ವಕವಾಗಿ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಿಮ್ಮ ವಿಶಾಲ ಹೃದಯಕ್ಕೆ ಮತ್ತೊಮ್ಮೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.