Skip to main content
ವಿಡಿಯೋ
1/3
cinema

ಕಸ-ಸಗಣಿ ಟಾಸ್ಕ್‌ ಹೋಗಿ ಬಿಗ್‌ಬಾಸ್‌ನಲ್ಲಿ ನಡೆದಿದ್ದು ಗಿಲ್ಲಿ Vs ರಾಶಿಕ ನಡುವಿನ ಥೂ...ಥೂ ಜಟಾಪಟಿ!

By Ram Chethan
ಕಸ-ಸಗಣಿ ಟಾಸ್ಕ್‌ ಹೋಗಿ ಬಿಗ್‌ಬಾಸ್‌ನಲ್ಲಿ ನಡೆದಿದ್ದು ಗಿಲ್ಲಿ Vs ರಾಶಿಕ ನಡುವಿನ ಥೂ...ಥೂ ಜಟಾಪಟಿ!

ಕಸ–ಸಗಣಿ ಟಾಸ್ಕ್ ಬಿಗ್ ಬಾಸ್ ಮನೆಯಲ್ಲಿ ದಂಗೆಯನ್ನೇ ಹುಟ್ಟುಹಾಕಿದೆ. ಸುಧಿಯ ಕಿಡಿ ಮಾತುಗಳು, ರಾಶಿಕಾ–ಮಾಳು ಕೋಪ, ಗಿಲ್ಲಿಯ ಅಸಮಾಧಾನ — ಈ ಎಲ್ಲ ಗಲಾಟೆಗಳು ಮನೆಯನ್ನು ಗದ್ದಲದ ರಣರಂಗವನ್ನಾಗಿಸಿದೆ. ರಿಷಾ ಮತ್ತು ಮಾಳು ನಡುವೆ ಎಲಿಮಿನೇಷನ್ ಯಾರಿಗೆ? ಕುತೂಹಲ ತುದಿಗೆರಿಸಿದೆ.

ಬಿಗ್ ಬಾಸ್ ಮನೆಯಲ್ಲಿ ನಡೆದ ಕಸ ಮತ್ತು ಸಗಣಿ ಟಾಸ್ಕ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿನೂತನ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಮನೆಯಲ್ಲಿ "ಕಸ" ಯಾರು ಮತ್ತು "ಸಗಣಿ ತುಂಬಿದ ತಲೆ" ಯಾರದು ಎಂದು ಗುರುತಿಸಬೇಕಿತ್ತು. ಗುರುತಿಸುವುದರ ಜೊತೆಗೆ, ಆಯ್ಕೆ ಮಾಡಿದವರ ಮೇಲೆ ನಿಜವಾಗಿಯೂ ಕಸ ಮತ್ತು ಸಗಣಿ ನೀರನ್ನು ಸುರಿಯಬೇಕಾಗಿತ್ತು. ಈ ಟಾಸ್ಕ್ ಮನೆಯಲ್ಲಿ ದೊಡ್ಡಮಟ್ಟದ ಗಲಾಟೆಗಳಿಗೆ ಕಾರಣವಾಗಿದೆ.

ಈ ವಾರಾಂತ್ಯದ ಬಿಗ್ ಬಾಸ್ ಸಂಚಿಕೆಯಲ್ಲಿ ನಡೆದ ಈ ವಿಭಿನ್ನ ಟಾಸ್ಕ್ ಸಾಕಷ್ಟು ಕುತೂಹಲ ಮೂಡಿಸಿದೆ. ಸ್ಪರ್ಧಿಗಳು ತಮ್ಮ ಆಯ್ಕೆಯನ್ನು ವ್ಯಕ್ತಪಡಿಸಲು ಕಸ ಮತ್ತು ಸಗಣಿ ನೀರನ್ನು ಬಳಸಬೇಕಾಗಿದ್ದರಿಂದ, ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಟಾಸ್ಕ್‌ನಿಂದಾಗಿ ರಾಶಿಕಾ ಶೆಟ್ಟಿ ಸಿಟ್ಟಿಗೆದ್ದಿದ್ದು, ಕ್ಯಾಪ್ಟನ್ ಮಾಳು ನಿಪ್ಪನಾಳ್ ಸಹ ಕೋಪಗೊಂಡಿದ್ದಾರೆ. ಕಾಕ್ರೋಚ್ ಸುಧಿ ಅವರ ಮಾತುಗಳು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿವೆ.

ಈ ಹಿಂದೆಂದೂ ಬಿಗ್ ಬಾಸ್ ಇತಿಹಾಸದಲ್ಲಿ ಇಂತಹ ಟಾಸ್ಕ್ ನಡೆದಿಲ್ಲ. ಸೀಸನ್ ೧೨ರಲ್ಲಿ ಮೊದಲ ಬಾರಿಗೆ ಸಗಣಿ ಮತ್ತು ಕಸ ಸುರಿಯುವ ಆಟ ಆಯೋಜಿಸಲಾಯಿತು. ಈ ಆಟದಿಂದ ರಾಶಿಕಾ ಶೆಟ್ಟಿ ಆಕ್ರೋಶಗೊಂಡರೆ, ಧ್ರುವಂತ್ ಮೌನವಾಗಿಯೇ ಉಳಿದಿದ್ದಾರೆ. ಆದರೆ, ಕಾಕ್ರೋಚ್ ಸುಧಿ ತಮ್ಮ ಟೀಕೆಗಳಿಂದ ಮತ್ತಷ್ಟು ಕಿಚ್ಚು ಹಚ್ಚಿದ್ದಾರೆ.Safari Genius Alley Set of 3 (Cabin + Medium + Large) Trolley Bags, Hard Case Polypropylene, 4 Wheels, 360 Degree Wheeling Luggage, Suitcase for Travel, Black

ಕಾಕ್ರೋಚ್ ಸುಧಿ ಅವರ ಟೀಕೆಗಳಿಗೆ ಕ್ಯಾಪ್ಟನ್ ಮಾಳು ನಿಪ್ಪನಾಳ್ ಸಹ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಶಿಕಾ ಶೆಟ್ಟಿ ತಮ್ಮ ಮೇಲೆ ಕಸ ಸುರಿದಿದ್ದಕ್ಕೆ, "ನನ್ನನ್ನು ಯಾಕೆ ಕಸ ಎಂದಿರಿ, ಕಾರಣ ಕೊಡಿ" ಎಂದು ಪ್ರಶ್ನಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ರಾಶಿಕಾ 'ಥೂ' ಎಂದು ಹೇಳಿದ್ದಾರೆ. ಇದರಿಂದ ಕೆರಳಿದ ಮಾಳು, "ದಯವಿಟ್ಟು 'ಥೂ' ಎಂದು ಹೇಳಬೇಡಿ" ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಗಲಾಟೆಯ ನಡುವೆ, ಗಿಲ್ಲಿ ನಟರು "ಯಾಕೆ ಹೀಗೆ ಆಡುತ್ತಾರೆ" ಎಂದು ಮಾತನಾಡಿದ್ದಾರೆ. ತಕ್ಷಣವೇ ಪಕ್ಕದಲ್ಲಿದ್ದ ಅಭಿಷೇಕ್, ಗಿಲ್ಲಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಕಾಕ್ರೋಚ್ ಸುಧಿ ಅವರ ಮಾತುಗಳು ಈ ಸಮಯದಲ್ಲಿ ಸೀಮೆಯನ್ನು ಮೀರಿವೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.ಇದನ್ನು ಓದಿ;₹100 ಕೋಟಿ ಹಿಟ್ ‘ಡ್ಯೂಡ್’ OTT ಗೆ...ಕಾಲಿವುಡ್ ರೋಮ್ಯಾಂಸ್ ಸ್ಟ್ರೀಮಿಂಗ್‌ಗೆ ಸಜ್ಜು!

ಸುಧಿ, ಮಾಳು ನಿಪ್ಪನಾಳ್ ಬಗ್ಗೆ ತೀವ್ರ ಟೀಕೆಗಳನ್ನು ಮಾಡಿದ್ದಾರೆ. "ಮಾಳುಗೆ ಮೆದುಳೇ ಇಲ್ಲ, ಆತನಿಗೆ ಆಟ ಅರ್ಥವಾಗಿಲ್ಲ, ಆತನ ತಲೆಯಲ್ಲಿ ಸಗಣಿ ತುಂಬಿದೆ" ಎಂದಿದ್ದಾರೆ. ಮಾಳು ಅವರನ್ನು ಕ್ಯಾಪ್ಟನ್ ಮಾಡಿದ್ದರಿಂದಲೇ ಸುಧಿ ಹೀಗೆ ಹೇಳುತ್ತಿದ್ದಾರೆ ಎಂದು ಸುಳಿವು ನೀಡಿದ್ದಾರೆ. ಸಂಪೂರ್ಣ ಸಂಚಿಕೆಯನ್ನು ವೀಕ್ಷಿಸಿದರೆ ಸುಧಿ ಯಾರ ಬಗ್ಗೆ ಈ ರೀತಿ ಟೀಕಿಸಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಚಂದ್ರಪ್ರಭ ಹೊರಬಿದ್ದರೆ, ಅದಕ್ಕೂ ಮೊದಲು ಮಲ್ಲಮ್ಮ ಹೊರನಡೆದಿದ್ದಾರೆ. ಈ ವಾರ ರಿಷಾ ಗೌಡ ಅಥವಾ ಮಾಳು ನಿಪ್ಪನಾಳ್ ಇಬ್ಬರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ವೀಕ್ಷಕರು ಈ ವಾರದ ಎಲಿಮಿನೇಷನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.