Skip to main content
ವಿಡಿಯೋ
1/3
entertainment

ʻಸೋಜುಗಾದ ಸೂಜುಮಲ್ಲಿಗೆʼ ಖ್ಯಾತಿಯ ಗಾಯಕಿ ಅನನ್ಯ ಭಟ್‌ಗೆ ಮದುವೆ ಸಂಭ್ರಮ

By Shravanthi R
ʻಸೋಜುಗಾದ ಸೂಜುಮಲ್ಲಿಗೆʼ ಖ್ಯಾತಿಯ ಗಾಯಕಿ ಅನನ್ಯ ಭಟ್‌ಗೆ ಮದುವೆ ಸಂಭ್ರಮ

ಜನಪ್ರಿಯ ಡ್ರಮರ್‌ ವಾದಕ ಮಂಜುನಾಥ್‌ ಸತ್ಯಶೀಲ್‌ ಜೊತೆಗೆ, ಬಾರಿಸು ಕನ್ನಡ ಡಿಂಡಿಮವಾ ಹಾಡು ಸೇರಿದಂತೆ ಜನಪ್ರಿಯ ಹಾಡುಗಳ ಖ್ಯಾತಿಯ, ಕಂಚಿನ ಕಂಠದ ಗಾಯಕಿ, ಅನನ್ಯ ಭಟ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗಾಯಕಿ ಅನನ್ಯ ಭಟ್‌, ಡ್ರಮರ್‌ ವಾದಕ ಮಂಜುನಾಥ್‌ ಸತ್ಯಶೀಲ್‌ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸವಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 

2013 ರಲ್ಲಿ ತೆರೆಕಂಡ ಲೂಸಿಯಾ ಸಿನಿಮಾದ ʻನೀ ತೊರೆದ ಘಳಿಗೆಯಲಿʼ, ಕರ್ನಾಟಕದ ಹೆಮ್ಮೆಯ ʻಬಾರಿಸು ಕನ್ನಡ ಡಿಂಡಿಮವಾʼ ಹಾಡು, ʻಸೋಜುಗಾದ ಸೂಜುಮಲ್ಲಿಗೆʼ, ಸೇರಿದಂತೆ ಇತ್ತೀಚೆಗೆ ಬಂದ ಹಿಟ್‌ ಸಾಂಗ್ಸ್‌ಗಳ ಮೂಲಕ ಜನರ ಮನ ಸೆಳೆದಿದ್ದಾರೆ.  OPPO K13x 5G 6000mAh and 45W SUPERVOOC Charger & AI (Mist White, 128 GB) (6 GB RAM)

ರಂಗಗೀತೆ, ಸಿನಿಮಾ ಹಾಡುಗಳ ಮೂಲಕ ಜನಮೆಚ್ಚುಗೆ ಪಡೆದಿರುವ ಗಾಯಕಿ ಅನನ್ಯ ಭಟ್‌ರದು, ಸಂಗೀತ ಕೇಳುಗರ ವಿಶಿಷ್ಟ ಧ್ವನಿ. ಒಲವೇ ಜೀವನ ಲೆಕ್ಕಾಚಾರ ಸಿನಿಮಾದ ʻಬಾಳು ಮೂರೇ ದಿನʼ ಅವರ ಮೊದಲ ಹಾಡು. ಅಲ್ಲಿಂದ ಶುರುವಾಗಿ ಕಾಂತಾರದ ಮದನಮನ ಮೋಹಿನಿ ಹಾಡಿನಿಂದಲೂ ತಮ್ಮ ಪ್ರತಿಭೆಯಿಂದ ಮೋಡಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಪೋಸ್‌ಗೆ ಪ್ಲಾನ್‌ ಮಡ್ತಿದ್ದೀರಾ? ಭಾರತದಲ್ಲೇ ಇರುವ ಈ 5 ರೊಮ್ಯಾಂಟಿಕ್‌ ಸ್ಪಾಟ್‌ಗಳು ಇಲ್ಲಿವೆ ನೋಡಿ