Skip to main content
ವಿಡಿಯೋ
1/3
general

ಜೋಧ್‌ಪುರದಲ್ಲಿ ಭಾರೀ ಸ್ಪೋಟದ ಸದ್ದು - ಕಂಗಾಲಾದ ಜನರು ಕಾರಣ ತಿಳಿದು ನಿರಾಳ?!

By Shravanthi R
ಜೋಧ್‌ಪುರದಲ್ಲಿ ಭಾರೀ ಸ್ಪೋಟದ ಸದ್ದು - ಕಂಗಾಲಾದ ಜನರು ಕಾರಣ ತಿಳಿದು ನಿರಾಳ?!

ದೆಹಲಿಯಲ್ಲಿ ಕಾರು ಸ್ಪೋಟಿಸಿದ ಭೀಕರತೆಯ ಸುದ್ದಿ ಇನ್ನೂ ಮಾಸದ ಗಾಯವಾಗಿ ಉಳಿದಿದೆ. ಇದೀಗ ದೇಶದ ಮತ್ತೊಂದು ಪ್ರಮುಖ ನಗರದಲ್ಲಿ ಸ್ಪೋಟ ಸಂಭವದ ಛಾಯೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿದೆ.

ದೆಹಲಿಯ ಸ್ಪೋಟ ಪ್ರಕರಣವು ದೇಶದ ಜನರನ್ನು ಬೆಚ್ಚಿಬೀಳಿಸಿದೆ. ಸುರಕ್ಷತೆ ಮತ್ತು ಭದ್ರತಾ ಆತಂಕ ಶುರುವಾಗಿದೆ. ಈ ನಡುವಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದ ಅನುಭೂತಿಯಲ್ಲಿ ರಾಜಸ್ಥಾನದ ಜೋಧ್‌ಪುರದ ಜನರು ಕಂಗಾಲಾಗಿದ್ದರು. ದೊಡ್ಡ ಸ್ಪೋಟ ಸಂಭವಿಸಿತೆಂದು ಹಲವರು ಭಯಭೀತರಾದರೆ, ಮತ್ತಲವರು ಭೂಕಂಪಿಸಿದೆ ಎಂದು ತಿಳಿದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕರೆಗಳ ಮೂಲಕ ಇಡೀ ನಗರವೇ ಭೀತಗೊಂಡಿತು ಎಂದು ವರದಿ ತಿಳಿಸಿದೆ. 

ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಜೋಧ್‌ಪುರ ನಗರದ ವಿವಿಧ ಪ್ರದೇಶಗಳಲ್ಲಿ ಭಾರೀ ಸ್ಪೋಟ ಸಂಭವಿಸಿದ್ದು, ಕೋಲಾಹಲದ ವಾತಾವರಣ ಸೃಷ್ಟಿಯಾಗಿತ್ತು. ಈ ಭೀಕರ ಸದ್ದು ಕೇಳಿ ಜನರು ಗಾಬರಿಗೊಂಡು, ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು. ಮಂಡೋರ್, ಸುರಪುರ, ಪಾಲ್ ರಸ್ತೆ, ಶಾಸ್ತ್ರಿ ನಗರ, ಲಾಲ್ ಸಾಗರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಆತಂಕವು ಮನೆಮಾಡಿತ್ತು. ಆದರೆ, ಇದು ತನಿಖೆ ನಡೆಸುವ ಸಲುವಾಗಿ, ವಾಯುಪಡೆಯಿಂದ ನಡೆಸಲಾದ ಪೈಟರ್‌ ಜೆಟ್‌ ತರಬೇತಿ ಕಾರ್ಯಾಚರಣೆಯ ಭಾಗವಾಗಿತ್ತು ಎನ್ನಲಾಗಿದೆ. OPPO Reno14Pro 5G (Pearl White, 12GB RAM, 256GB Storage)

ಈ ಸಂದರ್ಭದಲ್ಲಿ ವಿಮಾನದ ಹಾರಾಟ ಶಬ್ದವು ವೇಗವಾಗಿ ಬಂದ ಪರಿಣಾಮ ಆಘಾತಕಾರಿ ತರಂಗಗಳು ಉಂಟಾಗಿದೆ ಎಂದು ಹೇಳಲಾಗಿದೆ. ಈ ನಂತರ, ವಾಯುಪಡೆಯಿಂದ ಸಾರ್ವಜನಿಕರಿಗೆ ಶಾಂತವಾಗಿರಲು ಹಾಗೂ ಭಯಪಡದೇ ಸಹಕರಿಸಲು ಮನವಿ ಮಾಡಲಾಯಿತು. ಈ ನಿಟ್ಟಿನಲ್ಲಿ, ದೆಹಲಿಯ ಘಟನೆಯು ಸಾರ್ವಜನಿಕ ಸಂವೇದನೆಯನ್ನು ಹೆಚ್ಚಿಸಿದ್ದು, ಇದೀಗ ಜೋಧ್‌ಪುರದ ಜನರಲ್ಲಿ ಭಯದಿಂದ ಮುಕ್ತರಾಗಿ ನಿರಾಳತೆಯ ಅಲೆ ಮೂಡಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಯುವತಿ ಮೇಲೆ ದೌರ್ಜನ್ಯ, ಹ*ಲ್ಲೆ ನಡೆಸಿದ ಆರೋಪ - ಯೂಟ್ಯೂಬರ್ ವಿರುದ್ದ ಕೇಸ್‌ ದಾಖಲು!